Articles

ಅಜ್ಜ ರಾಕ್ಸ್! ವಿದೇಶಿಯರು ಶಾಕ್! ಫಾರೆನರ್ ಜೊತೆಗೆ ತುಂಬು ರಸ್ತೆಯಲ್ಲಿ ಅಜ್ಜ ಮಾಡಿದ ಡ್ಯಾನ್ಸ್ ವೈರಲ್! ನೋಡಿ ಈ ವಿಡಿಯೋ…

ಜೀವನದಲ್ಲಿ ಸಂತೋಷದಿಂದ ಜೀವಿಸಬೇಕು ಎಂದು ನಿಶ್ಚಯಮಾಡಿದರೆ ಸಾಕು ಅದಕ್ಕೆ ವಯಸ್ಸು, ಹಣ, ಸ್ಟೇಟಸ್ ಹೀಗೆ ಎಲ್ಲ ರೀತಿಯ ಭೌತಿಕ ಸೌಲಭ್ಯಗಳು ಹುಲ್ಲುಕಡ್ಡಿಗೆ ಸಮನಾಗುತ್ತದೆ. ಜೀವನದ ಸಂಧ್ಯಾಕಾಲದಲ್ಲಿಯೂ ಅನೇಕ ಜನರು ತಮ್ಮ ಜೀವನದ ಅನುಭೂತಿಯನ್ನು ಸಂತೋಷದಿಂದ ಲೂಟಿ ಮಾಡುತ್ತಿರುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಜ್ಜಾನೊಬ್ಬ ವಿದೇಶದ ಯುವಕನ ಜೊತೆಗೆ ತುಂಬು ರಸ್ತೆಯಲ್ಲಿ ಮುಕ್ತವಾಗಿ ಡಾನ್ಸ್ ಮಾಡುತ್ತಿರುವದು ಕಂಡುಬರುತ್ತಿದೆ. ಅಜ್ಜನ ವಯಸ್ಸು ಆಗಿದ್ದರೂ ಸಹ ಮನಸ್ಸಿನಿಂದ ಮಾತ್ರ ಯುವಕನಂತೆ ಕಾಣಿಸುತ್ತಿದ್ದಾನೆ. ಅಜ್ಜನ ಈ ಪ್ರಫುಲ್ಲಿತವಾದ ಡಾನ್ಸ್ ನೋಡಿದವರು ನಿಜಕ್ಕೂ ಮಂತ್ರಮುಗ್ಧರಾಗಿದ್ದಾರೆ.

ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಉತ್ಸಾಹದ ಚಿಲುಮೆಯಾದ ಈ ಅಜ್ಜನ ವಯಸ್ಸು ಸುಮಾರು 75-80 ಆಗಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಡ್ಯಾನ್ಸನಲ್ಲಿ ವಿದೇಶಿಗನೊಬ್ಬ ಬಾಲಿವುಡ್ ನ ಸೂಪರ್ ಹಿಟ್ ಸಾಂಗ್ ಮೇಲೆ ಕುಣಿಯುತ್ತಿರುವುದು ಕಂಡುಬರುತ್ತದೆ. ಆತನ ಕುಣಿತವನ್ನು ನೋಡಲು ರಸ್ತೆಯ ಮೇಲೆ ಜನರು ಕೂಡಿದ್ದಾರೆ. ಆತ ಡ್ಯಾನ್ಸ್ ಮಾಡುವಾಗ ನಿಂತ ಜನರಲ್ಲಿಂದ ಅಜ್ಜನೊಬ್ಬ ಡ್ಯಾನ್ಸ್ ಮಾಡಲು ಎಂಟ್ರಿ ಮಾಡುತ್ತಾನೆ ಮತ್ತು ವಿದೇಶಿ ಯುವಕನ ಜೊತೆಗೆ ಡಾನ್ಸ್ ಮಾಡಲು ಶುರು ಮಾಡುತ್ತಾನೆ.

ಅಜ್ಜನು ಈ ಇಳಿವಯಸ್ಸಿನಲ್ಲಿಯೂ ಯುವಕನ ಜೊತೆಗೆ ಮಾಡುತ್ತಿರುವ ಮುಕ್ತವಾದ ಕುಣಿತವು ಅಲ್ಲಿ ನೋಡುಗರ ಮತ್ತು ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳ ಮನಸ್ಸು ಗೆದ್ದಿದೆ. ಅಜ್ಜನ ಡ್ಯಾನ್ಸ್ ಮುಂದೆ ವಿದೇಶಿ ಯುವಕನ ಡ್ಯಾನ್ಸ್ ಸಹ ಮಂದವಾಗಿದೆ ಎನ್ನಬಹುದು. ಅಜ್ಜನ ಈ ಯೂನಿಕ್ ಸ್ಟೈಲ್ ಕುಣಿತವು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.

ನೋಡಿ ಈ ವಿಡಿಯೋ…

ನೇಟಿಜನ್ಸ್ ಗಳು ಅಜ್ಜನ ಈ ಡ್ಯಾನ್ಸ್ ನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಇಳಿವಯಸ್ಸಿನಲ್ಲಿ ಅಜ್ಜನ ಉತ್ಸಾಹವನ್ನು ನೋಡಿ ನೇಟಿಜನ್ಸ್ ಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.

ಪ್ರಸ್ತುತ ವಿಡಿಯೋವನ್ನು ‘sudhirdandotiya’ ಹೆಸರಿನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಅಜ್ಜನ ಡ್ಯಾನ್ಸ್ ನೋಡಿ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮೂಲಕ ನೀಡಿದ್ದಾರೆ. ಒಬ್ಬ ಯೂಸರ್ ‘ ಈ ಅಜ್ಜ ನಮ್ಮ ಭಾರತದ ಅಜ್ಜನಾಗಿದ್ದಾನೆಂದು ಕಮೆಂಟ್ ಮಾಡಿದ್ದಾನೆ’. ‘ಕೀಪ್ ಇಟ್ ಅಪ್ ದಾದು’ ಎಂದು ಇನ್ನೊಬ್ಬ ಕಮೆಂಟ್ ಮಾಡಿದ್ದಾನೆ.

Leave a Comment

Your email address will not be published. Required fields are marked *