ನೇಟಿಜನ್ಸ್ ಗಳ ಮನಸ್ಸು ಗೆದ್ದ ಕ್ಯೂಟ್ ವೆಜಿಟೇರಿಯನ್ ಅಳಿಲು! ಕಾಡಿನಲ್ಲಿ ಕಂಡ ಈ ಅಪರೂಪದ ಪ್ರಜಾತಿ ಸೆಳೆದುಕೊಳ್ಳುತ್ತಿದೆ ಎಲ್ಲರ ಗಮನ…

ನೇಟಿಜನ್ಸ್ ಗಳು ವೈಲ್ಡ್ ಲೈಫ್ ಬಗ್ಗೆ ತಿಳಿದುಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಈ ರೀತಿಯ ವಿಡಿಯೋಗಳು ಕ್ಷಿಪ್ರಗತಿಯಲ್ಲಿ ವೈರಲ್ ಆಗುತ್ತವೆ. ಸದ್ಯ ಒಂದು ಅಪರೂಪದ ಮತ್ತು ತುಂಬಾ ಕ್ಯೂಟ್ ಅಳಿಲಿನ ವಿಡಿಯೋ ಒಂದು ಹೀಗೆಯೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಇಲ್ಲಿಯವರೆಗೆ ನಾವು ಮೂರು ಪಟ್ಟೆ ಹೊಂದಿದ ತಿಳಿ ಕಂದು ಬಣ್ಣದ ಅಳಿಲನ್ನೆ ನೋಡಿದ್ದೇವೆ. ಆದರೆ ಈ ವೈರಲ್ ಆಗುತ್ತಿರುವ ನೂತನ ಅಳಿಲು ಸಂಪೂರ್ಣವಾಗಿ ಬೇರೆಯಾಗಿದೆ. ಈ ಅಳಿಲು ದೇಹದಿಂದ ದಷ್ಟಪುಷ್ಟವಾಗಿದ್ದು ಸುಂದರವಾದ ಆಕರ್ಷಕ ಬಣ್ಣವನ್ನು ಹೊಂದಿದೆ. ಇದು ಕುನ್ನೂರಿನ ದಟ್ಟ ಕಾಡಿನ ಮರದ ಮೇಲೆ ಸುತ್ತಾಡುತ್ತಿದೆ.

ನೋಡಿ ಈ ವಿಡಿಯೋ…

ನಾವು ನೋಡಿದ ಅಳಿಲಿಗಿಂತ ಈ ಅಳಿಲು ತುಂಬಾ ಸುಂದರವಾಗಿದೆ. ಈ ಸುಂದರವಾದ ಅಳಿಲಿನ ವಿಡಿಯೋವನ್ನು ಟ್ವಿಟರ್ ಅಕೌಂಟ್ ಮೂಲಕ ಐಎಎಸ್ ಅಧಿಕಾರಿಯಾದ ಸುಪ್ರಿಯಾ ಸಾಹು ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.