ಪಕ್ಕಾ ರೈತನ ಪಕ್ಕಾ ಮಗಳು ತೋಟದಲ್ಲಿ ಸಸಿ ನೆಡುತ್ತಲೇ ಶುರು ಮಾಡಿದಳು ಭರ್ಜರಿ ಡಾನ್ಸ್! ವೈರಲ್ ಆಯ್ತು ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ 5 ವರ್ಷದ ಪುಟ್ಟಿಯ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ 5 ವರ್ಷದ ಪುಟ್ಟ ಬಾಲಕಿ ಯಾವುದೇ ಸ್ಟೇಜ್ ಮೇಲೆ ಅಲ್ಲದೇ, ನೀರು ಮತ್ತು ಕೆಸರಿನಿಂದ ತುಂಬಿದ ಭತ್ತದ ಗದ್ದೆಯಲ್ಲಿ ಡಾನ್ಸ್ ಮಾಡುತ್ತಿದ್ದಾಳೆ. (ಈಗಿನ ಮಕ್ಕಳು ತೋಟದ ಕೆಲಸವೆಂದರೆ ಮೂಗು ಮುರಿಯುತ್ತಾರೆ, ಅದಕ್ಕೂ ಮುನ್ನ ಪೋಷಕರು ಸಹ ಮಕ್ಕಳಿಗೆ ಈ ಕೆಲಸ ಹಚ್ಚುವದೆಂದರೆ ಕಡಿಮೆ ತಿಳಿದುಕೊಳ್ಳುತ್ತಾರೆ) ಅಂಥದ್ದರಲ್ಲಿ ಈ ಪುಟ್ಟ ರೈತಿಣಿ ಒಂದು ಕೈಯಲ್ಲಿ ಸಸಿಯನ್ನು ಹಿಡಿದು ನೆಡುತ್ತಿದ್ದಾಳೆ, ಇನ್ನೊಂದು ಕೈಯಿಂದ ಡಾನ್ಸ್ ಆಕ್ಷನ್ ಮಾಡುತ್ತಿದ್ದಾಳೆ. ಫ್ಯಾನ್ಸ್ ಗಳು ಈ ವಿಡಿಯೋ ನೋಡಿ ಮೆಚ್ಚುಗೆಯ ಮಳೆಯನ್ನೇ ಸುರಿಸುತ್ತಿದ್ದಾರೆ. ಕಾರಣ ಈ ಪುಟ್ಟ ಬಾಲಕಿಯ ಡಾನ್ಸ್ ಮಾಡುವಾಗಿನ ತೋಟದಲ್ಲಿಯ ಎಕ್ಸಪ್ರೆಶನ್ ನಿಜಕ್ಕೂ ವರ್ಣಿಸಲು ಅಸಾಧ್ಯ.

ಪ್ರಸ್ತುತ ವಿಡಿಯೋದಲ್ಲಿ ಬಾಲಕಿ ಮಧ್ಯಾಹ್ನದಲ್ಲಿ ಸಸಿಯನ್ನು ನೆಡುತ್ತ ನೆಡುತ್ತಲೇ ಕುಣಿಯಲು ಶುರು ಮಾಡುತ್ತಾಳೆ.

ಈ ವಿಡಿಯೋ ನೋಡುಗರಿಗೆ ಸಹಜವಾಗಿ ಸೆಳೆಯುತ್ತಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸುಮಾರು ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹುಡುಗಿಯ ನೃತ್ಯ ಮತ್ತು ಆಕೆಯ ತೋಟದಲ್ಲಿ ಮಾಡುತ್ತಿರುವ ಕಾರ್ಯ ಶೈಲಿ ನೋಡಿ ಪಕ್ಕಾ ರೈತನ ಪಕ್ಕಾ ಮಗಳು ಎನ್ನುತ್ತಿದ್ದಾರೆ. ಒಬ್ಬ ಯೂಸರ್ ತನ್ನ ಕಾಮೆಂಟ್ ನಲ್ಲಿ ಈ ಹುಡುಗಿಯಂತೂ ನನ್ನ ಮನವನ್ನೆ ಗೆದ್ದು ಬಿಟ್ಟಿದೆ ಎಂದರೆ, ಇನ್ನೊಬ್ಬ ಯೂಸರ್ ಇಂದಿನ ಮಕ್ಕಳು ಹೊಲ, ತೋಟ ಎಂದರೆ ಮೂಗು ಮುರಿಯುತ್ತಾರೆ, ಆದರೆ ಈ ಮಗು ಸಸಿ ನೆಡುವದರ ಜೊತೆಗೆ ತನ್ನ ಹವ್ಯಾಸವನ್ನು ಕಾಯ್ದುಕೊಂಡಿದ್ದಾಳೆ ವಾ..! ಸೂಪರ್ ಎಂದಿದ್ದಾನೆ.

ವಿಡಿಯೋ ನೋಡಿ

ಮಕ್ಕಳಿಗೆ ಶಾಲಾ ಜ್ಞಾನದ ಜೊತೆಗೆ ಮೊದಲಿನಿಂದಲೇ ಕೃಷಿಯ ಜ್ಞಾನವನ್ನು ಸಹ ಕೊಡುವದು ಪೋಷಕರ ಮಹತ್ವದ ಕರ್ತವ್ಯವಾಗಿದೆ, ಹಾಗೂ ಅದು ತುಂಬಾ ಅವಶ್ಯಕವಾಗಿದೆ. ಅಲ್ವೇ?