ಪರಿಶ್ರಮವಿಲ್ಲದೆ, ವಾಷಿಂಗ್ ಮಷೀನ್ ಅವಶ್ಯಕತೆಯಿಲ್ಲದೆ ಬಟ್ಟೆಗಳನ್ನು ತೊಳೆಯುವ ಈ ದೇಸಿ ಐಡಿಯಾದ ವಿಡಿಯೋ ಒಮ್ಮೆ ನೋಡಿಯೇ ಬಿಡಿ…
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳ ಜೊತೆಗೆ ಕೆಲವೊಮ್ಮೆ ತುಂಬಾ ವಿಚಿತ್ರವಾದ ಹಾಗುವ ದೇಸಿ ಐಡಿಯಾದ ಮೆರಗು ನೀಡುವ ವಿಡಿಯೋಗಳು ವೈರಲ್ ಆಗುತ್ತವೆ. ಈಗ ದೇಸಿ ಐಡಿಯಾದ ಇನ್ನೊಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಿರುಗಾಡುತ್ತಿದೆ.
ಬಟ್ಟೆ ಒಗೆಯುವುದು ಅಥವಾ ತೊಳೆಯುವುದು ಎಂದರೆ ಹೆಣ್ಣುಮಕ್ಕಳಿಗೆ ತುಂಬಾ ಬೋರಿಂಗ್ ಕೆಲಸ. ಅದಕ್ಕಾಗಿಯೇ ಈಗ ಹೆಚ್ಚು ಹೆಚ್ಚು ಜನರು ವಾಷಿಂಗ್ ಮಷೀನ್ ಮೊರೆ ಹೋಗಿದ್ದಾರೆ. ಆದರೆ ಎಲ್ಲರಿಗೂ ವಾಷಿಂಗ್ ಮಷಿನ್ ಖರೀದಿಸುವುದು ಆಗದ ಮಾತು. ಹೀಗಾಗಿಯೇ ಇಲ್ಲೊಬ್ಬ ಪರಿಶ್ರಮವಿಲ್ಲದೆ ಹಾಗೂ ಜೊತೆಗೆ ವಾಷಿಂಗ್ ಮಷೀನ್ ಸಹಾಯವೂ ಇಲ್ಲದೆ ಬಟ್ಟೆಗಳನ್ನು ತೊಳೆಯಲು ಬೇರೊಂದು ಐಡಿಯಾವನ್ನೇ ಹುಡುಕಿದ್ದಾನೆ. ಇದೇ ಐಡಿಯಾದ ವಿಡಿಯೋವನ್ನು ಈಗ ನೀವು ನೋಡಲಿದ್ದೀರಿ. ಈ ಐಡಿಯಾವನ್ನು ನೋಡಿದ ದೊಡ್ಡ ದೊಡ್ಡ ಇಂಜಿನಿಯರುಗಳು ಸಹ ತಲೆ ಚಚ್ಚಿಕೊಳ್ಳಬೇಕು, ಅಷ್ಟೇ ಬಾಕಿ ಉಳಿದಿದೆ.
ವಿಡಿಯೋದಲ್ಲಿ ಕಾಣುವ ಬ್ಲೂ ಬಣ್ಣದ ಡ್ರಮ್ ಸಾಮಾನ್ಯವಾಗಿ ಎಲ್ಲರೂ ನೀರನ್ನು ಶೇಖರಿಸಿ ಇಡಲು ಉಪಯೋಗಿಸುತ್ತಾರೆ. ಆದರೆ ಈತ ನೀರಿನ ಡ್ರಮ್ ನ್ನೇ ವಾಷಿಂಗ್ ಮಷೀನ್ ಮಾಡಿ ಕೊಂಡಿದ್ದಾನೆ. ಈ ಡ್ರಮ್ ಗೆ ಎಲೆಕ್ಟ್ರಿಕ್ ಮೋಟಾರ್ ಜೋಡಿಸಿದ್ದಾನೆ.
ನೋಡಿ ಈ ವಿಡಿಯೋ…
ಈ ವಿಡಿಯೋವನ್ನು the.funny.us ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದನ್ನು ನೋಡಿದ ನೇಟಿಜನ್ಸ್ ಗಳು ಅನೇಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇದೇ ರೀತಿಯ ಬೇರೆ ವಾಷಿಂಗ್ ಮಷೀನ್ ನ ದೇಶಿ ಐಡಿಯಾದ ವಿಡಿಯೋ ಒಂದು ಇದಕ್ಕೂ ಮೊದಲು ಶೇರ್ ಆಗಿತ್ತು. ಅದರಲ್ಲಿ ಸೈಕಲ್ ಸಹಾಯದಿಂದ ಮಷೀನ್ ನ್ನು ತಿರುಗಿಸಬಹುದಾಗಿತ್ತು. ದೇಹಕ್ಕೆ ವ್ಯಾಯಾಮದ ಜೊತೆಗೆ ಬಟ್ಟೆಗಳನ್ನು ಸಹ ತೊಳೆದು ಹಾಕಬಹುದಿತ್ತು. ಜೊತೆಗೆ ಕರೆಂಟ್ ಸಹ ಉಳಿತಾಯ ಆಗುತ್ತಿತ್ತು.