ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ವಿದ್ಯಾರ್ಥಿ ಮಾಡಿದ ವಿಚಿತ್ರ ಐಡಿಯಾ! ವಿಡಿಯೋದಲ್ಲಿ ಅಡಗಿದೆ ಈ ಭೂಪನ ಟ್ಯಾಲೆಂಟ್…

ಅನೇಕ ವಿದ್ಯಾರ್ಥಿಗಳಿಗೆ ಸ್ಟಡಿ ಮಾಡುವುದೇ ಇಷ್ಟವಾಗುವುದಿಲ್ಲ. ವಿದ್ಯಾರ್ಥಿಗಳು ಇಂಥ ಸಂದರ್ಭದಲ್ಲಿ ಸ್ವಲ್ಪವೂ ಕಷ್ಟ, ಪರಿಶ್ರಮ ತೆಗೆದುಕೊಳ್ಳದೆ ಸಹಜವಾಗಿ ಹೆಚ್ಚಿನ ಗುಣಗಳಿಂದ ಪಾಸಾಗಲು ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಮಾರ್ಗ ಅವಲಂಬಿಸುತ್ತಾರೆ.

ದೊಡ್ಡ ದೊಡ್ಡ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವ ಬಗ್ಗೆ ಅನೇಕ ಸಲ ಕೇಳುತ್ತೇವೆ. ಇದೇ ರೀತಿಯ ಕಾಫಿಗೆ ಸಂಬಂಧಿಸಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ವೀಡಿಯೋ ನೋಡಿದ ಮೇಲೆ, ಈ ವಿದ್ಯಾರ್ಥಿ ಆಪತ್ತಿನಲ್ಲಿಯೂ ಅವಕಾಶ ಹುಡುಕಿದ್ದಾನಲ್ಲ ಎಂಬ ಮಾತು ನಿಮ್ಮ ಬಾಯಿಯಿಂದ ಬರಬಹುದು.

ಎಲ್ಲರಿಗೂ ಗೊತ್ತಿರುವ ಹಾಗೆ ಸದ್ಯ ಕೊರೋನಾದ ಮೂರನೆಯ ಅಲೆ ಶುರುವಾಗಿದೆ. ಅದರಲ್ಲಿಯೂ ಒಮಿಕ್ರೋನ್ ಮತ್ತಷ್ಟು ಭಯ ಪಸರಿಸುತ್ತಿದೆ. ಹೀಗಾಗಿ ಮತ್ತೊಮ್ಮೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಜೊತೆಗೆ ಸೋಶಿಯಲ್ ಡಿಸ್ಟೆನ್ಸಿಂಗ್ ನಂತಹ ಶಬ್ದಗಳು ಹೆಚ್ಚು ಹೆಚ್ಚು ಕೇಳಿಬರುತ್ತಿವೆ. ಆದರೆ ಕೆಲವೊಬ್ಬರು ತಾವು ತೊಟ್ಟು ಕೊಳ್ಳುತ್ತಿರುವ ಮಾಸ್ಕಿನ ತಪ್ಪಾದ ಉಪಯೋಗವನ್ನು ಸಹ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ನೋಡುವಹಾಗೆ ವಿದ್ಯಾರ್ಥಿಯೊಬ್ಬನು ಮಾಸ್ಕಿನ ಉಪಯೋಗ ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಸಲುವಾಗಿ ಮಾಡುತ್ತಿದ್ದಾನೆ.

ವಿಡಿಯೋದಲ್ಲಿ ಕಾಣುವ ಹಾಗೆ ಅನೇಕ ವಿದ್ಯಾರ್ಥಿಗಳು ಎಕ್ಸಾಮ್ ಹಾಲ್ ನಲ್ಲಿ ಪರೀಕ್ಷೆ ಬರೆಯಲು ಕುಳಿತಿದ್ದಾರೆ. ಅದರಲ್ಲಿ ಒಬ್ಬ ವಿದ್ಯಾರ್ಥಿಯು ಕಾಫಿ ಹೊಡೆಯುವ ಸಲುವಾಗಿ ತಾನು ಮಾಡಿದ ಉಪಾಯವನ್ನು ತೋರಿಸುತ್ತಾನೆ. ಆ ವಿದ್ಯಾರ್ಥಿಯ ಮಾಸ್ಕಿನ ಒಳಗಡೆ ಕಾಪಿ ಇಟ್ಟುಕೊಂಡಿದ್ದಾನೆ. ಇದನ್ನು ನೋಡಿದ ಹಿಂದೆ ಕುಳಿತ ವಿದ್ಯಾರ್ಥಿಗಳು ಬೆರಗಾಗುವದರ ಜೊತೆಗೆ ನಗುತ್ತಿದ್ದಾರೆ.

ವೀಡಿಯೋ ನೋಡಿ

ವಿದ್ಯಾರ್ಥಿಯ ಈ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕ ಯೂಸರ್ ಗಳು ಈ ವಿಡಿಯೋ ನೋಡಿ ಬೇರೆಬೇರೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬನು ಇದು ನಿಜಕ್ಕೂ ಕಲ್ಪನೆಯ ಆಚೆ ಇದೆ ಎಂದು ಕಾಮೆಂಟ್ ಮಾಡಿದ್ದಾನೆ.