ಪೋಷಕರ ಸತತವಾದ ವಿಡಿಯೋ ಶೂಟ್ ಗೆ ಬೇಸತ್ತು ಕಂಗಾಲಾದ ಮಗ ತನ್ನ ತಂದೆಯ ಜೊತೆಗೆ ರಿಯಾಕ್ಟ್ ಮಾಡಿದ ಬಗೆ ನೋಡಿ ಈ ವಿಡಿಯೋದಲ್ಲಿ..
ಸದ್ಯದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಪ್ರತಿಯೊಬ್ಬನು ಅಪ್ಡೇಟೆಡ್ ಇರಲು ಬಯಸುತ್ತಾನೆ. ಸ್ವಂತದ ಅನೇಕ ವಿಷಯಗಳನ್ನು ಇನ್ನೊಬ್ಬರ ಜೊತೆಗೆ ಶೇರ್ ಮಾಡಲು ಬಯಸುತ್ತಾನೆ. ಕೆಲವರಂತೂ ಈ ರೀತಿಯ ವಿಷಯಗಳು ತಮ್ಮ ಜೀವನದ ಮಹತ್ವದ ಭಾಗಗಳೆಂದೇ ಪರಿಗಣಿಸುತ್ತಾರೆ. ಇತ್ತೀಚೆಗೆ ಇನ್ಫ್ಲುಎನ್ಸರ್ ಆಗುವ ಹುಚ್ಚು ಪ್ರತಿಯೊಬ್ಬರಿಗೂ ಕಾಡುತ್ತಿದೆ. ಚಿಕ್ಕಮಕ್ಕಳ ವಿಡಿಯೋಗಳಂತೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಹೆಚ್ಚಾಗಿ ವೈರಲ್ ಆಗುತ್ತವೆ. ಮತ್ತು ಅವರ ಸ್ವಂತದ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಗಳಿರುತ್ತವೆ. ಈ ಅಕೌಂಟ್ಗಳನ್ನು ಅವರ ಪೋಷಕರು ಹ್ಯಾಂಡಲ್ ಮಾಡುತ್ತಾರೆ.
ಈ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳ ಹಿಂದೆ ಸತತವಾಗಿ ಕ್ಯಾಮೆರಾ ಆನ್ ಮಾಡಿ ತಿರುಗಾಡುತ್ತಿರುತ್ತಾರೆ. ಪೋಷಕರ ಇದೇ ಕಾರಣಕ್ಕಾಗಿ ಮಗುವೊಂದು ತುಂಬಾ ಬೇಸತ್ತು ಅಪ್ಪನ ಮೇಲೆ ರೇಗಾಡಿದೆ. ಮಗು ತಂದೆಯ ಮೇಲೆ ರೇಗಾಡಿದ ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಜೊತೆಗೆ ಈ ವಿಡಿಯೋ ಪೋಷಕರಿಗೆ ತುಂಬಾ ಹೆಚ್ಚು ಇಷ್ಟವಾಗಿದೆ. ಈ ವಿಡಿಯೋದಲ್ಲಿ ಕಂಡುಬರುವ ಹುಡುಗನ ಹೆಸರು ಮೌಲಿಕ್ ಇದ್ದು ಇನ್ಸ್ಟಾಗ್ರಾಮ್ ನಲ್ಲಿ ಈ ಹುಡುಗನಿಗೆ 17 ಸಾವಿರಕ್ಕಿಂತಲೂ ಹೆಚ್ಚು ಫಾಲೋವರ್ಸ್ ಗಳಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿ ಮೌಲಿಕ ನ ತಂದೆ ತನ್ನ ಮಗನ ವಿಡಿಯೋ ಮಾಡುವ ಸಲುವಾಗಿ ಕ್ಯಾಮೆರಾ ಆನ್ ಮಾಡಿಕೊಂಡು ಆತನ ಎದುರಿಗೆ ಬರುತ್ತಾನೆ. ಆಗ ಅಸಮಾಧಾನಗೊಂಡ ಮಗ ಮೌಲಿಕ್ ತಂದೆಯ ಮೇಲೆ ಎರ್ರಾಬಿರ್ರಿಯಾಗಿ ರೇಗಾಡಿದ್ದಾನೆ. ಮಗನ ಈ ಮಾತುಗಳನ್ನು ಕೇಳಿ ತಂದೆ ಒಮ್ಮೆಲೆ ಬೆಚ್ಚಿಬಿದ್ದಿದ್ದಾನೆ. ಮಗು ಮಾತ್ರ ಈಗಿನ ಮಕ್ಕಳು ಪೋಷಕರಿಂದ ಎಷ್ಟೊಂದು ಸಮಸ್ಯೆಗೆ ಒಳಗಾಗುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾಗಿಯೇ ಮಾತನಾಡಿದ್ದಾನೆ.
ಪ್ರಸ್ತುತ ಸಂಭಾಷಣೆ ಹಿಂದಿಯಲ್ಲಿ ಇದ್ದರೂ ಮಗುವಿನ ಭಾವನೆಗಳು ಮಾತ್ರ ಸಹಜವಾಗಿ ನೋಡುಗರಿಗೆ ತಿಳಿದುಬರುತ್ತವೆ. ಮಗು ತಂದೆಯ ಜೊತೆಗೆ ರೇಗಾಡುವ ಸಂದರ್ಭದಲ್ಲಿ ಕಾರಿನಲ್ಲಿ ಕುಳಿತು ರಿಲ್ಯಾಕ್ಸ್ ಆಗಿ ಕಬ್ಬಿನ ಹಾಲನ್ನು ಸೇವಿಸುತ್ತಿರುತ್ತಾನೆ. ಆಗ ತಂದೆ ಕ್ಯಾಮೆರಾ ಹಿಡಿದುಕೊಂಡು, ಹೆಲೋ ಮೌಲಿಕ, ಎನ್ನುವುದಷ್ಟೇ ತಡ, ಮೌಲಿಕ ತನ್ನ ಏಕಾಂತಕ್ಕೆ ಭಂಗವಾಯಿತು ಎಂಬ ಅಸಮಾಧಾನಕ್ಕೆ ಮಗ ಈ ರೀತಿ ತಂದೆಯ ಮೇಲೆ ರೇಗಾಡಿದ್ದಾನೆ.
ಮೌಲಿಕ ಸಿಟ್ಟಿನ ಭರದಲ್ಲಿ ತನ್ನ ತಂದೆಗೆ, “ಯಾಕೋ ನಿಮ್ಮದು ತುಂಬಾನೇ ಹೆಚ್ಚಾಯಿತು, ನಾನೆಲ್ಲೇ ಹೋದರೂ ಹಠಾತ್ತನೆ ಕ್ಯಾಮೆರಾ ಹಿಡಿದುಕೊಂಡು ನನ್ನ ಹಿಂದೆ ಬಂದೇ ಬರುತ್ತೀರಿ. ನಾನು ಏನೇ ತಿನ್ನುತ್ತಿರಲಿ, ಕುಡಿಯುತ್ತಿರಲಿ ಅಷ್ಟೇ ಏಕೆ ನಾನು ಟಾಯ್ಲೆಟ್ಟಿಗೆ ಹೋದರೂ ಸಹ ಅಲ್ಲಿಯೂ ನನ್ನನ್ನು ಬೆನ್ನಟ್ಟಿ ನನ್ನ ಹಿಂದೆ ಕ್ಯಾಮೆರಾ ತೆಗೆದುಕೊಂಡು ಬರುತ್ತೀರಿ. ನನಗೆ ಏನನ್ನು ಸಹ ಮಾಡಲು ಬಿಡುವುದಿಲ್ಲ ಈ ರೀತಿಯಾಗಿ ನನ್ನೊಬ್ಬನ ಜೊತೆ ಅಷ್ಟೇ ನಡೆಯುವುದಿಲ್ಲ ಹೀಗೆ ಅನೇಕ ಮಕ್ಕಳ ಜೊತೆಗೆ ನಡೆಯುತ್ತದೆ”, ಎಂದು ಒಂದೇ ಉಸಿರಿಗೆ ತನ್ನ ಅಸಮಾಧಾನವನ್ನು ತಂದೆಯ ಎದುರಿಗೆ ಸಿಟ್ಟಿನಿಂದ ಹೊರಹಾಕಿದ್ದಾನೆ. “ಪ್ರತಿಯೊಬ್ಬ ತಂದೆಗೆ ತನ್ನ ಮಗ ಇನ್ಫ್ಲುಎನ್ಸರ್ ಆಗಬೇಕು, ಮತ್ತು ಜೀವನವಿಡಿ ನಾನು ಬರೀ ಕ್ಯಾಮೆರಾದಲ್ಲಿಯೇ ಸೇರಿ ಕುಳಿತುಕೊಳ್ಳಬೇಕಾ? ಎಂದು ಕೇಳುತ್ತಾನೆ ಮೌಲಿಕ.
ಮಗನ ಮಾತುಗಳನ್ನೆಲ್ಲ ಕೇಳಿದ ನಂತರ ತಂದೆ ಮೃದುವಾಗಿ ಮಗನಿಗೆ, ‘ನೀನು ಕಬ್ಬಿನ ಹಾಲನ್ನು ಕುಡಿಯುತ್ತಿರುವೆಯಾ’? ಎಂದು ಕೇಳುತ್ತಾನೆ. ಆಗಮ ಮೌಲಿಕ ಹೌದು ಎಂದು ತಲೆ ಅಲ್ಲಾಡಿಸುತ್ತಾನೆ ಜೊತೆಗೆ ವಿಡಿಯೋ ರೆಕಾರ್ಡಿಂಗ್ ನಿಲ್ಲಿಸಲು ವಿನಂತಿಸುತ್ತಾನೆ. ಪ್ರಸ್ತುತ ವಿಡಿಯೋ ಇಂಟರ್ನೆಟ್ನಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ಮಕ್ಕಳ ಸಮಸ್ಯೆಯ ಬಗ್ಗೆ ಅನೇಕ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ.
ವಿಡಿಯೋ ನೋಡಿ
View this post on Instagram