Articles

ಪುಷ್ಪಾ ಶ್ರೀವಲ್ಲಿ ಡ್ಯಾನ್ಸ್ ನೋಡಿ ಸಾಕಾಗಿದ್ದರೆ, ಈಗ ಕಚ್ಚೆ ಹಾಕಿ ಧೂಳ್ ಎಬ್ಬಿಸಿದ ಅಜ್ಜಿಯ ಕತರ್ನಾಕ್ ಡಾನ್ಸ್ ಒಮ್ಮೆ ನೋಡಿ; ವಿಡಿಯೋ ವೈರಲ್.

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಒಂದು ವಿಷಯ ವೈರಲ್ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲೂ ಡಾನ್ಸ್ ಗಳ ವಿಡಿಯೋ ಅಂತೂ ನೇಟಿಜನ್ಸ್ ಗಳು ಹುಚ್ಚೆದ್ದು ನೋಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಚ್ಚೆಯುಟ್ಟ ಅಜ್ಜಿಯ ಕತರ್ನಾಕ್ ಡಾನ್ಸ್ ಒಂದು ಜಬರ್ದಸ್ತ್ ವೈರಲ್ ಆಗುತ್ತಿದೆ. ಪುಷ್ಪ ಚಿತ್ರದ ಶ್ರೀವಲ್ಲಿ ಡಾನ್ಸ್ ನೋಡಿ ನೋಡಿ ಸಾಕಾಗಿದ್ದರೆ ಅಜ್ಜಿಯ ಡಾನ್ಸ್ ಒಮ್ಮೆ ನೋಡಿಯೇ ಬಿಡಿ. ಸೂಪರ್ ಎಂಟರ್ಟೈನ್ಮೆಂಟ್ ಕಾದಿದೆ.

ಈ ಅಜ್ಜಿಯ ಡಾನ್ಸ್ ಮಾಡುವ ಪದ್ಧತಿ ತುಂಬಾ ಯುನಿಕ್ ಆಗಿದೆ. ಈ ಡಾನ್ಸ್ ನೋಡಿದ ನಂತರ ತುಂಬಾ ಆಶ್ಚರ್ಯ ಪಡುತ್ತೀರಿ. ನೇಟಿಜನ್ಸ್ ಗಳಿಗೆ ಈ ವಿಡಿಯೋ ತುಂಬಾ ಇಷ್ಟವಾಗಿದೆ. ಅಜ್ಜಿಯ ಎನರ್ಜಿ ನೋಡಿದಾಗ ಯುವಕರು ಸಹ ನಾಚಬೇಕು. ಅಜ್ಜಿಯ ಮೂಮೆಂಟ್ಸ್ ಗಳು ನೇಟಿಜನ್ಸ್ ಗಳಿಗೆ ವಿಶೇಷವಾಗಿ ಇಷ್ಟವಾಗಿವೆ.

ಪುಷ್ಪ ಚಿತ್ರ ನೋಡಿದ ನಂತರ ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕ ಮಂದಣ್ಣ ಇವರಿಬ್ಬರ ಫ್ಯಾನ್ಸ್ ಫಾಲೋವರ್ಸ್ ಸಂಖ್ಯೆಯಲ್ಲಿ ಅಗಣಿತವಾಗಿ ಹೆಚ್ಚಿದೆ. ಜೊತೆಗೆ ಸಾಮಿ ಸಾಮಿ ಹಾಡಿನ ಕ್ರೇಜ್ ಸಹ ಇನ್ನೂ ಕಡಿಮೆಯಾಗಿಲ್ಲ. ಈ ಚಿತ್ರ ಮತ್ತು ಹಾಡಿಗೆ ಸಂಬಂಧಿಸಿದ ಅನೇಕ ರೀತಿಯ ವಿಡಿಯೋಗಳು ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಲೇ ಇವೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಇದೇ ಚಿತ್ರದ ಸಾಮಿ ಸಾಮಿ ಹಾಡಿಗೆ ಅಜ್ಜಿಯೊಬ್ಬಳು ಕಚ್ಚೆ ಹಾಕಿ ಬಿಂದಾಸ್ ಡಾನ್ಸ್ ಮಾಡಿದ್ದಾರೆ. ಡಾನ್ಸ್ ನೋಡಿದ ನಂತರ ನೇಟಿಜನ್ಸ್ ಗಳು ತಮ್ಮ ಕಮೆಂಟುಗಳಲ್ಲಿ ಅಜ್ಜಿಯ ಪ್ರಶಂಸೆಯನ್ನು ಮಾಡಿದ್ದಾರೆ.

ನೋಡಿ ಈ ಅಜ್ಜಿಯ ಸೂಪರ್ ಡಾನ್ಸ್ ವಿಡಿಯೋ…

 

View this post on Instagram

 

A post shared by GiDDa CoMpAnY (@giedde)

ಅಜ್ಜಿ ಧೂಳೆಬ್ಬಿಸಿದ ಈ ಡಾನ್ಸಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ giedde ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.

Leave a Comment

Your email address will not be published. Required fields are marked *