ಪ್ರಿಯಾಂಕ ಚೋಪ್ರಾ ಧರಿಸಿದ್ದ ಬಟ್ಟೆಯನ್ನು ವ್ಯಂಗ್ಯವಾಡಿದ ಜನ: ಅದನ್ನೇ ಶೇರ್ ಮಾಡಿಕೊಂಡು ಖುಷಿ ಪಟ್ಟ ನಟಿ! ನೋಡಿ ಫನ್ನಿ ಮೀಮ್ಸ್

ಬಾಲಿವುಡ್ ನಟಿ, ಮಾಜಿ ಭುವನ ಸುಂದರಿ ಪ್ರಿಯಾಂಕಾ ಚೋಪ್ರಾ ಅವರು ಸೂಪರ್ ಸ್ಟಾರ್ ನಟಿ ಎಂಬುದು ಸಿನಿಮಾಗಳನ್ನು ನೋಡುವ ಎಲ್ಲರಿಗೂ ತಿಳಿದಿದೆ. ನಟಿ ಪ್ರಿಯಾಂಕಾ ಚೋಪ್ರಾ ಅವರ ಜನಪ್ರಿಯತೆ ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೂ ಹಬ್ಬಿದೆ. ಪ್ರಸ್ತುತ ಹಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮ ವಿವಾಹದ ನಂತರ ಅಮೆರಿಕಾದಲ್ಲಿ ನೆಲೆಸಿದ್ದಾರೆ‌‌. ಸಿನಿಮಾ ವಿಷಯಗಳಿಗಾಗಿ ಆಗಾಗ ಭಾರತಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ ಪ್ರಿಯಾಂಕ‌. ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಒಂದಲ್ಲಾ ಒಂದು ವಿಷಯದಿಂದಾಗಿ ಸುದ್ದಿ ಮಾಧ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣುತ್ತಲೇ ಇರುತ್ತಾರೆ. ಕಳೆದ ಕೆಲವು ದಿನಗಳಿಂದಲೂ ಕೂಡ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಆಟೋಬಯೋಗ್ರಫಿ ಅನ್ ಫಿನಿಷಡ್ ವಿಷಯವಾಗಿ ಸುದ್ದಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ತನ್ನ ಆತ್ಮಚರಿತ್ರೆಯಲ್ಲಿ ಸಿನಿಮಾ ಜಗತ್ತಿನ ತನ್ನ ಒಳ್ಳೆಯ ಹಾಗೂ ಕೆಟ್ಟ ಅ ನು ಭವಗಳನ್ನು ಈ ಪುಸ್ತಕದಲ್ಲಿ ಹಚ್ಚಿಕೊಂಡಿದ್ದಾರೆ‌.

ಪ್ರಿಯಾಂಕಾ ಚೋಪ್ರಾ ಅವರ ಆತ್ಮಚರಿತ್ರೆಯಲ್ಲಿ ಬರೆಯಲಾಗಿರುವ ಕೆಲವು ಆಸಕ್ತಿಕರ ವಿಷಯಗಳ ಕುರಿತಾಗಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ ಹಾಗೂ ಈ ವಿಚಾರಗಳು ಜನರ ಗಮನವನ್ನು ಸೆಳೆದಿವೆ ಮಾತ್ರವಲ್ಲದೇ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ಕೂಡಾ. ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಮ್ಮೆ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾಗಳ ಸೆನ್ಸೇಶನ್ ಆಗಿದ್ದಾರೆ. ಆದರೆ ಈ ಬಾರಿ ಪ್ರಿಯಾಂಕಾ ಚೋಪ್ರಾ ಸದ್ದು ಮಾಡಿರುವುದು ಮಾತ್ರ ತಮ್ಮ ಒಂದು ಹೊಸ ಫೋಟೋ ದಿಂದಾಗಿ. ಈ ಫೋಟೋ ಈಗಾಗಲೇ ವೈರಲ್ ಆಗಿರುವುದು ಮಾತ್ರವಲ್ಲದೆ ದೊಡ್ಡ ಮಟ್ಟದಲ್ಲಿ ಟ್ರೋಲಿಂಗ್ ಕೂಡಾ ಗುರಿಯಾಗಿದೆ.
ಪ್ರಿಯಾಂಕ ಚೋಪ್ರಾ ತಮ್ಮ ಫ್ಯಾಶನ್ ಹಾಗೂ ನಟನೆಯ ವಿಚಾರದಲ್ಲಿ ಅತ್ಯುತ್ತಮವೆಂದು ಈಗಾಗಲೇ ಸಾಬೀತು ಮಾಡಿದ್ದಾರೆ.

ಆದರೆ ಅನೇಕ ಬಾರಿ ಅವರ ಡ್ರೆಸ್ಸಿಂಗ್ ಸೆನ್ಸ್ ಅವರನ್ನು ಮೀಮ್ಸ್ ಗಳು ಮತ್ತು ಟ್ರೋಲ್ ಗಳ ವಸ್ತುವನ್ನಾಗಿ ಮಾಡಿ ಬಿಡುತ್ತವೆ. ಇತ್ತೀಚೆಗಷ್ಟೇ ಪ್ರಿಯಾಂಕ ಚೋಪ್ರಾ ಒಂದು ವಿಶಿಷ್ಟವಾದ ಡ್ರೆಸ್ಸನ್ನು ಧರಿಸಿ ಫೋಟೋ ಶೂಟ್ ಮಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ, ಅವರು ಧರಿಸಿರುವ ಡ್ರೆಸ್ ಮೀಮ್ ಪೇಜ್ ಗಳಲ್ಲಿ ಮಿಂಚುತ್ತಾ, ಅಸಂಖ್ಯಾತ ಜೋಕುಗಳು ಸೃಷ್ಟಿಯಾಗಲು ಕಾರಣವಾಗಿದೆ. ಈ ಹೊಸ ಡ್ರೆಸ್ ನಲ್ಲಿ ಪ್ರಿಯಾಂಕ ಚೋಪ್ರಾರನ್ನು ನೋಡಿದ ನೆಟ್ಟಿಗರು ಕೂಡಾ ತಮ್ಮ ನಗುವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ. ಹೀಗೆ ಮೀಮ್ಸ್ ಹಾಗೂ ಜೋಕುಗಳಿಗೆ ಆಹಾರವಾದ ತನ್ನ ಫೋಟೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ ಅವರು ಎಲ್ಲಾ ಮೀಮ್ಸ್ ಪೇಜ್ ಗಳಿಗೆ ಹಾಗೂ ಜೋಕ್ಸ್ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಫೆಬ್ರವರಿ 24ರಂದು ತಮ್ಮ ಟ್ವಿಟರ್ ನಲ್ಲಿ ಈ ಫನ್ನಿ ಫೋಟೋವನ್ನು ಶೇರ್ ಮಾಡಿಕೊಂಡು, “ಇದು ಬಹಳ ಫನ್ನಿ ಯಾಗಿದೆ, ನನ್ನ ದಿನವನ್ನು ಸುಂದರವನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು ಸ್ನೇಹಿತರೇ” ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಶೇರ್ ಮಾಡಿದ ಫೋಟೋ ನೋಡಿದ ಸಾವಿರಾರು ಜನ ಲೈಕ್ಸ್ ಗಳನ್ನು ನೀಡಿದ್ದಾರೆ‌. ನೂರಾರು ಜನ ಅದನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೇ ಅನೇಕರು ಫನ್ನಿ ಯಾಗಿರುವ ಕಾಮೆಂಟ್ ಗಳನ್ನು ಕೂಡ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಹೊಸ ಡ್ರೆಸ್ ನ ಫೋಟೋ ವನ್ನು ಎಡಿಟ್ ಮಾಡಿದ ಮೀಮ್ ಪೇಜ್ ಗಳವರು ಅವರನ್ನು ಫೋಟೋಗಳಲ್ಲಿ ಪೋಕ್ಮಾನ್, ರೀತಿಯಲ್ಲಿ, ಬಾಂಬ್ ನ ರೀತಿಯಲ್ಲಿ ಹಾಗೂ ಹಾಟ್ ಏರ್ ಬಲೂನ್ ರೀತಿ ಕಾಣುವಂತೆ ತೋರಿಸಿದ್ದಾರೆ.

ಇತ್ತೀಚೆಗಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಆಟೋಬಯೋಗ್ರಫಿ ಅನ್ ಫಿನಿಷ್ಡ್ ಕುರಿತಾಗಿ ಮಾತನಾಡಲು ಒಂದು ಲೈವ್ ಸೆಷನ್ ನಡೆಸಿದ್ದರು. ಈ ವೇಳೆ ಪ್ರಿಯಾಂಕಾ ಒಂದು ವಿಶಿಷ್ಟವಾದ ಹಸಿರು ಹಾಗೂ ಕಪ್ಪು ಮಿಶ್ರಿತ ಬಣ್ಣವಿರುವ ಡ್ರೆಸ್ ಧರಿಸಿದ್ದರು. ಇದೇ ಡ್ರೆಸ್ ಅನ್ನು ಮೀಮ್ಸ್ ಪೇಜ್ ಗಳು ತಮ್ಮ ಮೀಮ್ ಗಳಿಗಾಗಿ ಬಳಸಿಕೊಂಡಿದೆ. ಹೀಗೆ ಸೋಶಿಯಲ್ ಮೀಡಿಯಾ ಗಳಲ್ಲಿ ವೈವಿಧ್ಯಮಯವಾದ ಮೀಮ್ ಗಳು ಹಾಗೂ ಹಾಸ್ಯದಿಂದ ಕೂಡಿದ ಮೀಮ್ ಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದನ್ನು ಕಂಡು ಸ್ವತಃ ಪ್ರಿಯಂಕಾ ಅವರು ಕೂಡಾ ಆ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದನ್ನು ಮರೆತಿಲ್ಲ. ತನ್ನ ಫೋಟೋಗಳನ್ನು ಈ ರೀತಿ ಫನ್ನಿಯಾಗಿ ಎಡಿಟ್ ಮಾಡಿದ್ದನ್ನು ಮೆಚ್ಚಿ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರ ಈ ನಡೆಗೆ ಅವರ ಅಭಿಮಾನಿಗಳ ಕಡೆಯಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬಂದಿದೆ.