ಪ್ರೀತಿಯಲ್ಲಿ ಬೋಲ್ಡ್ ಆದ ಭಾರತದ ಸ್ಟಾರ್ ಬೌಲರ್ ಬುಮ್ರಾ! 23 ವರ್ಷದ ‘ಈ’ ಸೌತ್ ನಟಿಗೆ ಮಾಡುತ್ತಿದ್ದಾರೆ ಡೇಟ್!

ಲಾಕ್ ಡೌನ್ ನಿಂದ ಕ್ರಿಕೆಟ್ ಅಷ್ಟೇ ಅಲ್ಲ ಎಲ್ಲ ಆಟಗಳು ಸ್ಥಗಿತಗೊಂಡಿವೆ. ಎಲ್ಲಕ್ಕೂ ಹೆಚ್ಚಾಗಿ BCCI ಬಂಗಾರದ ಮೊಟ್ಟೆ ಇಡುವ ಕೋಳಿ IPL ಸಹಿತ ರದ್ದಾಗಿತ್ತು. ಆದರೆ ಸದ್ಯಕ್ಕೆ ದೇಶ ಬಿಟ್ಟು ಹೊರಗೆ ಆಡಿಸುವ ಸುದ್ದಿ ಬಂದಿದೆ.

ಕ್ರಿಕೆಟ್ ಮತ್ತು ಫಿಲ್ಮ್ ಇಂಡಸ್ಟ್ರಿ ಇವೆರಡರಲ್ಲೂ ಮೊದಲಿನಿಂದ ಏನೋ ಒಂದು ಅವಿನಾಭಾವ ಸಂಬಂಧ ನಡೆದುಕೊಂಡು ಬಂದಿದೆ ಎನ್ನಬಹುದು. ಅದರ ಲಿಸ್ಟ್ ತೆಗೆದರೆ ತುಂಬಾ ಉದ್ದನೆಯ ಪಟ್ಟಿ ಬೆಳೆಯುವದು.

ಈಗ ಸರದಿ ಭಾರತದ ಖತರ್ನಾಕ್ ಬಾಲರ್ ಎಂದೇ ಪರಿಗಣಿಸಲಾದ ಜಸಪ್ರೀತ್ ಬುಮರಾ ಅವರದು. ಬುಮರಾ ಅವರ ಹೆಸರು ಸೌತ್ ಸ್ಟಾರ್ ಳ ಜೊತೆಗೆ ತಳಕು ಹಾಕಿಕೊಂಡಿರುವ ಸುದ್ದಿಯೊಂದು ಗುಸು ಗುಸು ಶುರುವಾಗಿದೆ. ರಿಪೋರ್ಟ್ ಪ್ರಕಾರ ಬುಮರಾ ಸದ್ಯಕ್ಕೆ ನಟಿಯೊಬ್ಬಳನ್ನು ಡೇಟ್ ಮಾಡುತ್ತಿರುವದು ಹೊರಬಿದ್ದಿದೆ. ಅವಳ ಹೆಸರು ಅನುಪಮಾ ಪರಮೇಶ್ವರನ್. ಇವರು 2015 ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ ನಾಲ್ಕೈದು ವರ್ಷಗಳಲ್ಲಿ ಸೌತ ಫಿಲ್ಮ್ ಇಂಡಸ್ಟ್ರಿಯಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ನಿರ್ಮಾಣ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಅನುಪಮಾ ಪರಮೇಶ್ವರನ್ ಅವರಿಗೆ ಕೇಳಲಾಗಿ, ಅವರು ಕೊಟ್ಟ ಉತ್ತರ ಹೀಗಿತ್ತು, ನಮ್ಮ ಬಗ್ಗೆ ಎದ್ದ ಗಾಸಿಪ್ ನಲ್ಲಿ ಸತ್ಯಾಂಶವಿಲ್ಲ, ನಾವಿಬ್ಬರೂ ಪರಸ್ಪರ ಒಳ್ಳೆಯ ಮಿತ್ರರಾಗಿದ್ದೇವೆ ಎಂದು ಅಲ್ಲಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಬುಮರಾ ಅವರಿಗೆ ಇದೇ ಸಂಬಂಧವಾಗಿ ಒಂದು ಯೂಟ್ಯೂಬ್ ಚಾನೆಲ್ ಇಂಟರ್ ವ್ಯೂವ್ ನಲ್ಲಿ ಕೇಳಿದ ಪ್ರಶ್ನೆ ಹೀಗಿತ್ತು, ಬಾಲಿವುಡ್ ನಲ್ಲಿ ನಿಮಗೆ ತುಂಬಾ ಹಿಡಿಸಿದ ನಟಿ ಯಾರು ಎಂದು ಕೇಳಿದಾಗ, ಮೊದಲು ಸ್ವಲ್ಪ ಸಂಕೋಚವಾದಂತೆ ಮಾಡಿದರು, ನಂತರ ಆಲಿಯಾ ಭಟ್ ಅಂತ ಹೇಳಿದ್ದಾರೆ.