ಮದುವೆಯಲ್ಲಿ ನಾಗಿಣಿ ಡ್ಯಾನ್ಸ್ ನೋಡಿರಬಹುದು, ನಿಜವಾಗಿ ನಾಗಿಣಿ ಡ್ಯಾನ್ಸ್ ಹೇಗಿರುತ್ತೆ ಅಂತ ನೋಡಿ ಈ ವೈರಲ್ ವೀಡಿಯೋ!!
ಮದುವೆ ಇರಲಿ, ಯಾವುದೇ ಪಾರ್ಟಿ ಇರಲಿ ಅದರಲ್ಲಿ ನಾಗಿಣಿ ಡ್ಯಾನ್ಸ್ ಇರದಿದ್ದರೆ ಆ ಕಾರ್ಯಕ್ರಮ ಸಂಪೂರ್ಣವೇ ಆಗುವದಿಲ್ಲ. ಏಕೆಂದರೆ ಯಾವುದೇ ಸಮಾರಂಭದಲ್ಲಿ ಡ್ಯಾನ್ಸ್ ಪ್ರೋಗ್ರಾಮ್ ಇರದಿದ್ದರೆ ಅದರಲ್ಲಿಯ ಸಂತೋಷ ಕಳೆದಂತೆ ಫೀಲ್ ಆಗುತ್ತದೆ. ಇಂದಿನ ಪ್ರತಿಯೊಂದು ಕಾರ್ಯಕ್ರಮ ಎಲ್ಲರೂ ಡ್ಯಾನ್ಸ್ ಮಾಡಲು ತುಂಬಾ ಉತ್ಸುಕರಾಗಿರುತ್ತಾರೆ ಹುಡುಗರೇ ಇರಲಿ ಅಥವಾ ಹುಡುಗಿಯರೇ ಇರಲಿ ಎಲ್ಲರಿಗೂ ಡ್ಯಾನ್ಸ್ ನಲ್ಲಿ ನಾಗಿಣಿ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ನಾವು ಮನುಷ್ಯರು ನಾಗಿಣಿ ಡ್ಯಾನ್ಸ್ ಮಾಡುವದನ್ನು ಎಷ್ಟೋ ಬಾರಿ ನೋಡಿದ್ದೇವೆ ಆದರೆ ನಿಜವಾಗಿ ಹಾವುಗಳು ನಾಗಿಣಿ ಡ್ಯಾನ್ಸ್ ಹೇಗೆ ಮಾಡುತ್ತವೆ ಎಂಬುದು ನೋಡಿದ್ದೀರಾ? ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಎರಡು ಕೋಬ್ರಾ ಹಾವುಗಳು ಜೊತೆಗೂಡಿ ನಾಗಿಣಿ ಡ್ಯಾನ್ಸ್ ಮಾಡುವದನ್ನು ನೋವು ನೋಡಬಹುದು ಈ ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎರಡು ಕಿಂಗ್ ಕೋಬ್ರಾಗಳು ನಿಧಾನವಾಗಿ ಕಾಡಿನ ಪ್ರದೇಶದಲ್ಲಿ ಒಂದಾಗುತ್ತಿರುವುದನ್ನು ನೋಡಬಹುದು. ಎರಡು ನಾಗರ ಹಾವುಗಳ ನಡುವೆ ಪ್ರಣಯ ನಡೆಯುತ್ತಿರುವ ದೃಶ್ಯವನ್ನು ನೀವು ಕಾಣಬಹುದು. ಎರಡು ಹಾವುಗಳು ಒಟ್ಟಿಗೆ ಸೇರಿ ಒಂದನ್ನೊಂದು ಮುಖಾಮುಖಿಯಾಗಿ ತಮ್ಮ ಹೆಡೆಯನ್ನು ತಗೆದು ಮುಗಿಲೆತ್ತರಕ್ಕೆ ಸಾವಕಾಶವಾಗಿ ಹೋಗುತ್ತವೆ. ತದನಂತರ ಗಂಡು ನಾಗರ ಹಾವು ಹೆಣ್ಣು ನಾಗರ ಹಾವಿಗೆ ಮುತ್ತಿಕ್ಕಲು ಪ್ರಯತ್ನಿಸುತ್ತದೆ. ಇಲ್ಲಿಯವರೆಗೆ ಕೋಬ್ರಾ ಹಾವಿನ ಅನೇಕ ಬೇಟೆಯಾಡುವ ವೀಡಿಯೋ ನೀವು ನೋಡಿರಬಹುದು ಆದರೆ ಕೋಬ್ರಾ ರೋಮ್ಯಾನ್ಸ್ ಮಾಡುವದನ್ನು ನೀವು ಈ ವೀಡಿಯೋದಲ್ಲಿ ನೋಡಬಹುದು. ಗಂಡು ಮತ್ತು ಹೆಣ್ಣು ಕೋಬ್ರಾ ಹಾವುಗಳು ಒಟ್ಟಿಗೆ ಸೇರದೆ ಅಷ್ಟೇ ಅಲ್ಲ ಜೊತೆಗೆ ನಾಗಿಣಿ ಡ್ಯಾನ್ಸ್ ಸಹ ಮಾಡುತ್ತವೆ. ಪ್ರಸ್ತುತ ವೀಡಿಯೋದಲ್ಲಿ ಎರಡು ನಾಗಗಳು ಪರಸ್ಪರ ಆಲಿಂಗನ ಮಾಡುವದನ್ನು ತೋರಿಸಲಾಗಿದೆ.
ವೀಡಿಯೋ ನೋಡಿ.
View this post on Instagram
ಈ ಕೋಬ್ರಾ ಹಾವಿನ ನೃತ್ಯದ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ snake_unity ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇದುವರೆಗೆ 55 ಸವಿರಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಅನೇಕ ನೆಟ್ಟಿಗರು ಇದನ್ನು ಶೇರ್ ಸಹ ಮಾಡುತ್ತಿದ್ದಾರೆ.