ಫುಲ್ ಎನರ್ಜಿಟಿಕ್ ಡ್ಯಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಾಶ್ರೀ; ‘ಆಸಮ್’ ಎಂದ ಜನ! ನೋಡಿ Video

ಧನಾಶ್ರೀ ವರ್ಮಾ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲೊಂದು ಸೆನ್ಸೇಷನ್. ಧನಾಶ್ರೀ ವರ್ಮಾ ಡಾನ್ಸ್ ಗಳೆಂದರೆ ಅವರ ಅಭಿಮಾನಿಗಳು ಹಾಗೂ ಯುವಜನತೆ ಹುಚ್ಚೆದ್ದು ಕುಣಿಯುವಂತಾಗಿದೆ. ಧನಾಶ್ರೀ ಅವರ ಒಂದೊಂದು ಡಾನ್ಸ್ ವೀಡಿಯೋ ಕೂಡಾ ಲಕ್ಷ ಲಕ್ಷ ವೀಕ್ಷಣೆಗಳನ್ನು ಪಡೆಯುವುದು ಧನಾಶ್ರೀ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಧನಾಶ್ರೀ ವರ್ಮಾ ಭಾರತೀಯ ಕ್ರಿಕೆಟ್ ನ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ಅವರೊಂದಿಗೆ ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆ ಫೋಟೋವನ್ನು ಕೂಡಾ ಆಕೆ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡು ಆ ಫೋಟೋ ವೈರಲ್ ಆಗಿದ್ದು ಮಾತ್ರವೇ ಅಲ್ಲದೇ ಅಭಿಮಾನಿಗಳಲ್ಲಿ ಒಂದು ಅಚ್ಚರಿಯನ್ನು ಕೂಡಾ ಮೂಡಿಸಿದ್ದರು ಧನಾಶ್ರೀ ವರ್ಮಾ

ಧನಶ್ರೀ ವರ್ಮಾ ವೃತ್ತಿಯಲ್ಲಿ ವೈದ್ಯೆಯಾಗಿದ್ದರೂ ಜನಪ್ರಿಯತೆ ಪಡೆದಿರುವುದು ಮಾತ್ರ ಯೂಟ್ಯೂಬರ್ ಆಗಿ ಮತ್ತು ನರ್ತಕಿಯಾಗಿ ಎಂಬುದು ಈಗ ಜಗಜ್ಜಾಹೀರಾಗಿರುವ ವಿಷಯ. ಆಕೆ ನರ್ತಕಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಒಂದಾದ ನಂತರ ಮತ್ತೊಂದು ಎಂಬಂತೆ ಧನಾಶ್ರೀ ಅವರ ವೀಡಿಯೋಗಳು ವೈರಲ್ ಆಗುತ್ತಿವೆ‌. ಈಗ ಅದೇ ಹಾದಿಯಲ್ಲಿ ಮತ್ತೊಂದು ಹೊಸ ಡಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ
ಧನಾಶ್ರೀ ‘ಹೌಲಿ ಹೌಲಿ’ ಹಾಡಿಗೆ ಬ್ಯಾಂಗ್ ಅಪ್ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ‌. ಯುಜುವೇಂದ್ರ ಚಹಾಲ್ ಅವರ ಭಾವೀ ಪತ್ನಿ ಈ ಹಾಡಿನಲ್ಲಿ ತಮ್ಮ ಡಾನ್ಸ್ ಸ್ಟೆಪ್ ಗಳ ಮೂಲಕ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಈ ಡಾನ್ಸ್ ವೀಡಿಯೊದಲ್ಲಿ, ಧನಾಶ್ರೀ ನಿಯಾನ್ ಬಣ್ಣದ ಶಾರ್ಟ್ ಟಾಪ್ ಧರಿಸಿದ್ದು, ಆಕೆಗೆ ಅದು ಬಹಳ ಸುಂದರವಾಗಿ ಕಾಣುತ್ತಿದೆ. ಧನಾಶ್ರೀ ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯೆಗಳ ಹೊಳೆಯನ್ನೇ ಹರಿಸುತ್ತಿದ್ದಾರೆ. ಯಜುವೇಂದ್ರ ಒಂದು ಕಡೆ ಕ್ರಿಕೆಟ್ ನಲ್ಲಿ ತಮ್ಮ ಛಾಪನ್ನು ಮೂಡಿಸುವ ಮೂಲಕ ಅಭಿಮಾನಿಗಳ ಮನವನ್ನು ಗೆಲ್ಲುತ್ತಾ ಒಬ್ಬ ಸುಪ್ರಸಿದ್ಧ ಕ್ರಿಕೆಟರ್ ಆಗಿ ಬೆಳೆಯುವ ಹಾದಿಯಲ್ಲಿ ಸಾಗುತ್ತಲಿದ್ದರೆ, ಧನಾಶ್ರೀ ವರ್ಮಾ ಕೂಡಾ ಭಾವೀ ಪತಿಗಿಂತ ತಾನೇನೂ ಕಡಿಮೆಯಿಲ್ಲ ಎನ್ನುವಂತೆ ಜನಪ್ರಿಯತೆಯ ಉತ್ತುಂಗವನ್ನು ಏರುತ್ತಾ ಜನರ ಗಮನವನ್ನು ಸೆಳೆಯುತ್ತಿದ್ದಾರೆ.

ವಿಡಿಯೋ ನೋಡಿ…

ವೃತ್ತಿಯಿಂದ ಧನಾಶ್ರೀ ವೈದ್ಯೆ ಆಗಿದ್ದರೂ ಕೂಡಾ ಡಾನ್ಸರ್ ಆಗಿ ಆಕೆ ಅಪಾರ ಜನಪ್ರಿಯತೆ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಧನಾಶ್ರೀ ಅವರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತಾ ಸಾಗುತ್ತವೆ. ಲಕ್ಷ ಲಕ್ಷ ವೀಕ್ಷಣೆಗಳನ್ನು ಕೆಲವೇ ಗಂಟೆಗಳಲ್ಲಿ ಪಡೆಯುವ ಡಾನ್ಸ್ ವೀಡಿಯೋಗಳು ಭರ್ಜರಿ ಪ್ರತಿಕ್ರಿಯೆ ಪಡೆಯುವುದನ್ನು ನೋಡಿದಾಗ ಧನಾಶ್ರೀ ಅವರು ಯಾವ ಸಿನಿಮಾ ಸ್ಟಾರ್ ಗಿಂತಲೂ ಕೂಡಾ ಕಡಿಮೆಯೇನಿಲ್ಲ ಎನ್ನುವಷ್ಟರ ಮಟ್ಟಿಗೆ ಆಕೆ ಪಾಪುಲರ್ ಆಗಿದ್ದಾರೆ.