ಫ್ರಿಜ್ ನಲ್ಲಿಯ ಫುಡ್ ಕಳ್ಳತನ ಮಾಡಿ ತಿಂದು ಸಿಕ್ಕಿಬಿದ್ದ ಮೇಲೆ ಥರಥರ ನಡುಗುತ್ತಿದೆ ನಾಯಿ! ವಿಡಿಯೋ ನೋಡಿ ನಗು ತಡೆದುಕೊಳ್ಳಲು ಸಾಧ್ಯವಿಲ್ಲ.

 

ಇತ್ತೀಚೆಗೆ ಸಾಕು ಪ್ರಾಣಿಗಳ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತಿವೆ. ಸಾಕುಪ್ರಾಣಿಗಳ ತುಂಬಾ ತಮಾಷೆಯ ಆಟಗಳು ಮತ್ತು ಅವು ಮಾಡುವ ಮುಗ್ಧ ಕೃತಿಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈ ಪ್ರಾಣಿಗಳಲ್ಲಿ ಬೆಕ್ಕು ಮತ್ತು ನಾಯಿಗಳೇ ಹೆಚ್ಚಾಗಿ ಇರುತ್ತವೆ. ಈಗ ನಾಯಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ತಮಾಷೆ ಹುಟ್ಟಿಸಿದೆ.

ಈ ಪ್ರಾಣಿಗಳು ಮನೆಯಲ್ಲಿ ಮಾಲೀಕರು ಇಲ್ಲದ್ದಾಗ ತುಂಬಾ ಗದ್ದಲ ಮತ್ತು ಮಸ್ತಿ ಮಾಡುತ್ತವೆ. ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಮಾಲೀಕರು ಬರುವ ಹೊತ್ತಿಗೆ ಚೆಲ್ಲಾಪಿಲ್ಲಿ ಮಾಡಿರುತ್ತವೆ. ತಪ್ಪು ಮಾಡಿದ ನಂತರ ಮಾಲೀಕರಿಗೆ ಹೆದರಿ ಪಶ್ಚಾತ್ತಾಪವನ್ನು ಸಹ ಮಾಡಿಕೊಳ್ಳುವದು ಎಷ್ಟೋ ಸಲ ಅನೇಕ ವಿಡಿಯೋಗಳಲ್ಲಿ ಕಂಡುಬಂದಿದೆ. ಈ ವಿಡಿಯೋದಲ್ಲಿ ಫ್ರಿಜ್ಜಿನಲ್ಲಿಯ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿ ತಿಂದು ಸಿಕ್ಕಿಬಿದ್ದ ನಂತರ ಎರಡು ಸಾಕು ನಾಯಿಗಳ ಅವಸ್ಥೆ ಹೇಗಾಗಿದೆ ಎಂಬುದನ್ನು ನೀವಿಲ್ಲಿ ನೋಡಲಿದ್ದೀರಿ.

ವಿಡಿಯೋದಲ್ಲಿ ಕಂಡುಬರುವ ಹಾಗೆ ವ್ಯಕ್ತಿಯೊಬ್ಬ ತೆರೆದ ಫ್ರಿಜ್ಜಿನ ಮುಂದೆ ನಿಂತಿದ್ದಾನೆ. ಆತನು ಮುಂದೆ ಕುಳಿತ ಒಂದು ನಾಯಿಗೆ ಅನ್ನ ಪದಾರ್ಥಗಳ ಪಾಕೆಟ್ ತೋರಿಸಿ ಯಾರು ತಿಂದಿದ್ದಾರೆ ಎಂದು ಪ್ರಶ್ನೆ ಮಾಡಿತ್ತಾನೆ. ಆ ಪ್ರಶ್ನೆಗೆ ಉತ್ತರವಾಗಿ ಆ ನಾಯಿಯು ತುಂಬಾ ಜಾಣತನದಿಂದ ಅಷ್ಟೇ ಮುಗ್ಧವಾಗಿ ಸನ್ನೆಯಿಂದ ತಪ್ಪನ್ನು ಬೇರೆ ನಾಯಿಯ ಮೇಲೆ ಹಾಕುವದನ್ನು ಇಲ್ಲಿ ಚೆನ್ನಾಗಿ ನೋಡಬಹುದು.

ವಿಡಿಯೋ ನೋಡಿ

ಇಷ್ಟಾದ ಮೇಲೆ ಮಾಲೀಕನು ಅಲ್ಲಿಯೇ ಕುಳಿತ ಬೇರೆ ಚಿಕ್ಕ ನಾಯಿಯ ಕಡೆಗೆ ನೋಡಲು ಆ ನಾಯಿಯು ಭೀತಿಯಿಂದ ಥರಥರನೆ ಕಂಪಿಸಲು ಪ್ರಾರಂಭ ಮಾಡುತ್ತದೆ. ಇದರ ಮೇಲಿಂದ ಆ ಪುಟ್ಟ ನಾಯಿಯೇ ಕಳ್ಳತನ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ. ತಾನು ಕಳ್ಳತನ ಮಾಡಿದ್ದು ಮಾಲೀಕನಿಗೆ ಗೊತ್ತಾಗಿದೆ ಎಂದು ಹೆದರಿ ನಾಯಿಯು ಕುಳಿತಲ್ಲಿಯೇ ನಡುಗುತ್ತಿದೆ. ಈ ವಿಡಿಯೋ ನೋಡಿ ನೇಟಿಜನ್ಸ್ ಗಳು ತುಂಬಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಯೂಸರ್ಸ್ ಗಳು ತುಂಬಾ ತಮಾಷೆಯ ಕಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.