Articles

ಮುಂಜಾನೆ ಆಂಬ್ಯುಲೆನ್ಸ್ ಡ್ರೈವರ್ ಆಗಿ ಮನೆಯಿಂದ ಹೊರಬಿದ್ದ ವ್ಯಕ್ತಿ, ಮಧ್ಯಾಹ್ನ ಆಗುವಷ್ಟರಲ್ಲಿ ಕೋಟ್ಯಾಧೀಶನಾದ!

ಪಶ್ಚಿಮ ಬಂಗಾಲದಲ್ಲಿಯ ಒಬ್ಬ ಆಂಬುಲೆನ್ಸ್ ಡ್ರೈವರ್ ಮುಂಜಾನೆ ವೇಳೆ ತನ್ನ ಹತ್ತಿರ ಕೇವಲ 300 ರೂಪಾಯಿ ತಗೆದುಕೊಂಡು ಮನೆಯಿಂದ ಹೊರಗೆ ಬಿದ್ದ ಆದರೆ ಮಧ್ಯಾಹ್ನ ಆಗುವಷ್ಟರಲ್ಲಿ ಆತನು ಕೋಟ್ಯಾಧೀಶ ನಾಗಿದ್ದ. ಆತ ಕೋಟ್ಯಾಧೀಶ ಹೇಗೆ ಆದ ಅಂತ ನಿಮ್ಮ ತಲೆಯಲ್ಲಿ ಪ್ರಶ್ನೆ ಓಡಾಡುತ್ತಿರಬಹುದು ಆದರೆ ಇದು ಸತ್ಯವಾಗಿದೆ.

ಈ ಆಂಬ್ಯುಲೆನ್ಸ್ ಚಾಲಕನ ಹೆಸರು ಶೇಖ್ ಹೀರಾ ಇದೆ. ಶೇಖ್ ಮುಂಜಾನೆ ತನ್ನ ದಿನನಿತ್ಯದ ಕಾರ್ಯಗಳನ್ನು ಮುಗಿಸಿ ತನ್ನ ಕೆಲಸಕ್ಕೆ ಹೊರಡುತ್ತಾನೆ. ಹೊರಡುವಾಗ ಆತನ ಜೇಬಿನಲ್ಲಿ ಕೇವಲ 300 ರೂಪಾಯಿಗಳಿರಿತ್ತವೆ. ಆದರೆ ಆತನಿಗೆ ಒಂದು ಹವ್ಯಾಸ ವಿತ್ತು ಅದೆಂದರೆ ಲಾಟರಿ ಟಿಕೇಟ್ ಖರೀದಿ ಮಾಡುವದು. ಸುಮಾರು ವರ್ಷಗಳಿಂದ ಲಾಟರಿ ಟಿಕೇಟ್ ನ್ನು ಖರೀದಿ ಮಾಡುತ್ತಿದ್ದ. ಆದರೆ ಇವತ್ತು ಸಹ ಒಂದು ಲಾಟರಿ ಟಿಕೇಟ್ ಖರೀದಿ ಮಾಡಬೇಕು ಎಂದು ಮನದಲ್ಲಿ ಯೋಚಿಸಿ ತನ್ನ ಬಳಿಯಲಿದ್ದ 300 ರೂಪಾಯಿ ಹಣದಲ್ಲಿಯ 270 ರೂಪಾಯಿ ಕೊಟ್ಟು ಒಂದು ಲಾಟರಿ ಟಿಕೇಟ್ ಖರೀದಿಸಿದ.

ಈ ಹಿಂದೆ ಸಹ ಹಲವಾರು ಬಾರಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು ಆದರೆ ಒಂದು ಬಾರಿ ಸಹ ಇವರಿಗೆ ಲಾಟರಿ ಹತ್ತಿರಲಿಲ್ಲ. ಆದರೆ ಇವರು ಒಂದಲ್ಲ ಒಂದು ದಿವಸ ಲಾಟರಿ ಹತ್ತುತ್ತೇ ಎಂಬ ಭರವಸೆಯಿಂದ ಲಾಟರಿ ಟಿಕೇಟ್ ಪಡೆಯುತ್ತಿದ್ದರು. ಆದರೆ ಇಂದು ಅವರ ಅದೃಷ್ಟ ಚೆನ್ನಾಗಿತ್ತೋ ಏನೋ ಗೊತ್ತಿಲ್ಲ ಅವರು ಪಡೆದ ಟಿಕೆಟ್ ನಂಬರ್ ಮೇಲೆ ಒಂದು ಕೋಟಿ ರೂಪಾಯಿ ಲಾಟರಿ ಇತ್ತು ಹೀಗಾಗಿ ಅವರ ನಂಬರ ಆಯ್ಕೆ ಆಗಿದ್ದರಿಂದ ಅವರಿಗೆ ಒಂದು ಕೋಟಿ ರೂಪಾಯಿ ಲಾಟರಿ ಹತ್ತಿತ್ತು. ಮುಂಜಾನೆ ಸಮಯದಲ್ಲಿ ಒಬ್ಬ ಸಾಮನ್ಯ ವ್ಯಕ್ತಿ ಯಾಗಿದ್ದ ಈತ ಮದ್ಯಾಹ್ನವಾಗುವಷ್ಟರಲ್ಲಿ ಕೋಟ್ಯಾಧೀಶ ನಾದ.

ಈ ವಿಷಯ ತಿಳಿದ ಕೂಡಲೇ ಆತ ಹೇಳಿದ್ದೇನೆಂದರೆ’ ನನ್ನ ತಾಯಿ ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳುತ್ತಿದ್ದಾಳೆ ಅವಳಿಗೆ ಉಪಚಾರ ಮಾಡಲು ನನ್ನ ಹತ್ತಿರ ಅಷ್ಟೊಂದು ಹಣ ವಿರಲಿಲ್ಲ ಸದ್ಯಕ್ಕೆ ಈ ಕೋಟಿ ರೂಪಾಯಿ ಬಂದಾಯಿತು ಈಗ ಮೊದಲು ತಾಯಿಯನ್ನು ಗುಣಮುಖ ಮಾಡುವ ಸಲುವಾಗಿ ಎಷ್ಟೇ ಖರ್ಚು ಆದರೂ ಸಹ ಮೊದಲು ತಾಯಿಗೆ ಉಪಚಾರ ಮಾಡಿಸುವೆ’ ಎಂದು ಹೇಳಿದ್ದಾರೆ, ಇಷ್ಟೊಂದು ದೊಡ್ಡ ಮೊತ್ತದ ಹಣದ ಲಾಟರಿ ಹತ್ತಿದ ಕೊಡಲೇ ತಮ್ಮ ಬಳಿಯಲಿದ್ದ ಟಿಕೇಟ್ ಸಲುವಾಗಿ ಏನಾದರೂ ವಿಪ#ರೀತ ಘಟನೆ ಘಟಿಸಬಹುದು ಎಂದು ಊಹಿಸಿ ಇವರು ನೇರವಾಗಿ ಪೊಲೀಸ್ ಸ್ಟೇಷನ್ ಗೆ ಹೋಗಿ ಪೊಲೀಸರಿಂದ ಸುರಕ್ಷತೆ ಪಡೆದರು ತದನಂತರ ಪೊಲೀಸರು ಇವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದರು.

Leave a Comment

Your email address will not be published. Required fields are marked *