ಬಂಜರು ಭೂಮಿಯನ್ನು ಹಣ್ಣಿನ ಮರಗಳ ಅರಣ್ಯವನ್ನಾಗಿ ಪರಿವರ್ತಿಸಿ, ಹಣ್ಣನ್ನೇ ತಿಂದು ಬದುಕುತ್ತಿದೆ ಈ ಕುಟುಂಬ!
ಹಣ್ಣು ಪ್ರತಿಯೊಬ್ಬರಿಗೂ ಇಷ್ಟ. ಜೀವಕ್ಕೆ ಹೊಸ ಚೇತನವನ್ನು ನೀಡುವ ಇಂಥ ಹಣ್ಣಗಳನ್ನು ಯಾರು ಪ್ರೀತಿಸುವುದಿಲ್ಲ? ಹೇಳಿ. ಪ್ರತಿಯೊಬ್ಬರೂ ಕೆಲವು ರೀತಿಯ ಹಣ್ಣುಗಳನ್ನು ಇಷ್ಟಪಟ್ಟೆ ಪಡುತ್ತಾರೆ. ಆದರೆ ಯಾರಾದರೂ ಕೇವಲ ಹಣ್ಣುಗಳನ್ನು ತಿಂದು ಜೀವನ ತೆಗೆಯುತ್ತಾರೆ ಎಂದರೆ ನೀವು ನಂಬುತ್ತೀರಾ? ಇಲ್ಲ ಅಲ್ವಾ? ಆದರೆ ಇಲ್ಲೊಂದು ಕುಟುಂಬ ಬರೀ ಹಣ್ಣುಗಳನ್ನು ತಿಂದು ತಮ್ಮ ಜೀವನ ತಾಜಾತನದಿಂದ ನಡೆಸುತ್ತಿದ್ದಾರೆ.
ಕೇರಳದ ತಿರುವನಂತಪುರಂನ ಅಲ್ಡೊ ಪಚಿಲಕದ್ದನ್ ಹೆಸರಿನ ಯುವಕ ಮತ್ತು ಈತನ ಕುಟುಂಬ ಈ ಸಾಧನೆಯನ್ನು ಮಾಡುತ್ತಿದ್ದಾರೆ.
ವ್ಯವಸಾಯ ಕ್ಷೇತ್ರದಲ್ಲಿ ಆರ್ಕಿಟೆಕ್ಚರ್ ಇಂಜಿನಿಯರ್ ಆಗಿದ್ದ ಇವರು ಈಗ ಬರೀ ಹಣ್ಣುಗಳನ್ನು ಮಾತ್ರ ತಿನ್ನುತ್ತಿದ್ದಾರೆ, ವಿಶೇಷವೆಂದರೆ ಅವರ ಆಹಾರದ 90 ಪ್ರತಿಶತದಷ್ಟು ಹಣ್ಣುಗಳನ್ನೇ ತಿನ್ನುತ್ತಾರೆ. ಇದೆ ಆಹಾರ ಕ್ರಮವನ್ನು ಅವರ ಪತ್ನಿ, ಮಗ ಮತ್ತು ಮಗಳು ಸಹ ಅನುಸರಿಸುತ್ತಾರೆ.

ಆಲ್ಡೋ ಅವರು ಹೇಳುವ ಪ್ರಕಾರ, ಬೇಯಿಸಿದ ಆಹಾರವು ದೇಹಕ್ಕೆ ಹೆಚ್ಚು ಪ್ರಯೋಜನವಲ್ಲ. ಕುದಿಸುವದರಿಂದ ಆಹಾರದಲ್ಲಿಯ ಜೀವಸತ್ವಗಳು ನಷ್ಟವಾಗುತ್ತವೆ. ಅದಕ್ಕಿಂತ ಹೆಚ್ಚಾಗಿ ನೇರ ಹಣ್ಣಗಳನ್ನೇ ತಿನ್ನುವುದು ಯಾವಾಗಲೂ ಉತ್ತಮ, ಹಣ್ಣುಗಳ ಮೇಲಿನ ಅವರ ಮೋಹ, ಪ್ರೀತಿಯೇ ಅವರನ್ನು ಈ ಗುರಿಯತ್ತ ಕೊಂಡೊಯ್ದಿತು ಎನ್ನಬಹುದು.
ಆಲ್ಡೋ ಅವರ ಮನಸು ಈ ಕಡೆಗೆ ತಿರುಗಲು ಕಾರಣವೇನು ನೋಡಿ?
ಭಾರತದಲ್ಲಿಯ ಪುಣೆ-ಮುಂಬೈಗಳಂತಹ ಮೆಟ್ರೋ ನಗರಗಳಲ್ಲಿ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ, ಅದು ಪ್ಲಾಸ್ಟಿಕ್ ಚೀಲದಿಂದ ಬರುತ್ತದೆ ಉತ್ತರ ಸಿಗುತ್ತದೆ.
ಜಗತ್ತಿನಲ್ಲಿ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಸಾಧನಗಳು ಎಷ್ಟೊಂದು ವಿಪರೀತವಾಗಿವೆ ಎಂದರೆ ಅವು ಮನುಷ್ಯನಿಗೆ ಪ್ರಕೃತಿಯಿಂದ ದೂರವಿಟ್ಟಿವೆ ಎಂಬ ದುಃಖ ಅವರನ್ನು ಸತಾಯಿಸುತ್ತಿತ್ತು. ಪ್ರಕೃತಿಯಿಂದ ದೂರವಾಗಲು ಇಷ್ಟವಿಲ್ಲದ ಆಲ್ದೋ ತಮ್ಮ ಕೆಲಸದಿಂದ 30 ನೇ ವರ್ಷಕ್ಕೆ ರಿಟಾಯರ್ ಆದರು.

ಅವರ ಮಿತ್ರನೊಬ್ಬ 2008 ರಲ್ಲಿ NGO ಪ್ರಾರಂಭಿಸಿದರು. ಅವರ ಡೀಲ್ ಪ್ರಕಾರ ಪ್ರತಿ ವರ್ಷ ಪಕ್ಷಿ ವೀಕ್ಷಣೆ ಮತ್ತು ವಿವಿಧ ರೀತಿಯ ಚಿಟ್ಟೆಗಳ ವೀಕ್ಷಣೆಗಾಗಿ ಅರಣ್ಯಕ್ಕೆ ಕಡ್ಡಾಯವಾಗಿ ಭೇಟಿ ನೀಡಲು ನಿರ್ಧರಿಸಲಾಯಿತು. ಇದಕ್ಕೆಂದೇ ಅವರು 2009 ರಲ್ಲಿ ಆಲ್ಡೋ ಅವರು ತಮ್ಮ ಸ್ನೇಹಿತ ವಿವೇಕ್ ವಿಲಾಸಿನಿ ಅವರೊಂದಿಗೆ ಮುನ್ನಾರ್ ಬಳಿಯ ಇಡುಕ್ಕಿನಲ್ಲಿರುವ ಸ್ವರ್ಗಮ್ ಮೇಡು ಬೆಟ್ಟದ ಮೇಲೆ 10 ಎಕರೆ ಬಂಜರು ಭೂಮಿಯನ್ನು ಖರೀದಿಸಿ ಆ ಬಂಜರು ಭೂಮಿಯನ್ನು ಬೆಳೆಸುವ ಕೆಲಸವನ್ನು ಕೈಗೆತ್ತಿಕೊಂಡರು. ಆನಂತರ ಅವರು ಸ್ವತಃ ಅಲ್ಲಿಯೇ ವಾಸಿಸಲು ಶುರು ಮಾಡಿದರು. ಮತ್ತು ಅಲ್ಲಿ ವಿವಿಧ ಹಣ್ಣುಗಳ ಗಿಡಗಳನ್ನು ಮತ್ತು ಹೂವಿನ ಗಿಡಗಳನ್ನು ನೆಟ್ಟರು.
ಆಲ್ಡೋ ಪ್ರಕಾರ, “ಆಹಾರ ಎಷ್ಟು ಮನುಷ್ಯನಿಗೆ ಮುಖ್ಯ ಎಂದು ನಾನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ” ಎಂದು ಅವರು ಹೇಳುತ್ತಾರೆ.
ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿಗಳು ಏನು ತಿನ್ನುತ್ತವೆ ಮತ್ತು ಅದು ಆಹಾರ ಸರಪಳಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಗಮನಿಸಲು ಪ್ರಾರಂಭಿಸಿದೆನು. ಇದರೊಂದಿಗೆ ನಾನು ಹತ್ತಿರದ ಇತರ ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ಪ್ರಾರಂಭಿಸಿದೆನು. ಪ್ರಕೃತಿ ನಮಗೆ ಆಹಾರವನ್ನು ನೀಡುವ ಮೂಲಕ ನಮ್ಮೆಲ್ಲರನ್ನೂ ಆರೋಗ್ಯವಂತರನ್ನಾಗಿರಲು ಸಹಾಯ ಮಾಡುತ್ತದೆ. ಪ್ರಕೃತಿಯಲ್ಲಿ ವಿಷವೂ ಇದೆ, ರೋಗಗಳು ಸಹಿತ ಇವೆ, ಅದರ ಜೊತೆಗೆ ಔಷಧವೂ ಇದೆ.
ನಾವು ಪ್ರಕೃತಿಯ ವಿರುದ್ಧ ಹೋಗುವಾಗ ಅನಾರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪ್ರಕೃತಿ ಎಷ್ಟು ನಿಜ ಇದೆ ಮತ್ತು ಅದು ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಲು, ಅಲ್ಡೋ ತನ್ನ ಕುಟುಂಬದೊಂದಿಗೆ ಪ್ರಕೃತಿಯ ಸಮೀಪದಲ್ಲಿ ಇಡುಕ್ಕುವಿನ ಪ್ಯಾರಡೈಸ್ ಮೆಡೋವ್‌ನಲ್ಲಿ ವಾಸಿಸಲು ಹೋದನು. ಆ ಪ್ರಯೋಗ ನಿಜಕ್ಕೂ ಯಶಸ್ವಿಯಾಯಿತು. ಮತ್ತು ಇದರ ಪರಿಣಾಮ ಕ್ರಮೇಣ ಅವರ ದೇಹದ ಮೇಲೆ ಉತ್ತಮ ಬದಲಾವಣೆಗಳನ್ನು ತರಲು ಪ್ರಾರಂಭಿಸಿತು. ಕಳೆದ 10 ವರ್ಷಗಳಿಂದ ಹಣ್ಣುಗಳೇ ಅವರ ಆಹಾರವಾಗಿದೆ. ಯಾವುದೇ ಔಷಧಿಗಳಿಲ್ಲದೆ ಅವರ ದೇಹದ ಬೊಜ್ಜು ಸಹ ಕಡಿಮೆಯಾಗಿದೆ. ಅವರು ಮೊದಲು 90 ಕೆಜಿ ತೂಕವನ್ನು ಹೊಂದಿದ್ದರು ಆದರೆ ಈಗ ಅವರ ತೂಕ 63 ಕೆಜಿ ಗೆ ಇಳಿದಿದೆ.
ಸ್ವರ್ಗಂ ಮೇಡು ಈಗ ಸುಂದರವಾದ ಅರಣ್ಯವಾಗಿ ಮಾರ್ಪಟ್ಟಿದೆ. ಈಗ ಅಲ್ಲಿ ಎಲೆಗಳು-ಹೂಬಿಡುವ ಪೊದೆಗಳು ಮತ್ತು ಹಣ್ಣುಗಳು ಹೇರಳವಾಗಿವೆ. ಇಲ್ಲಿ ಎಲ್ಲ ರೀತಿಯ ಹಣ್ಣುಗಳ ಗಿಡಗಳನ್ನು ಕಾಣಬಹುದು.

“ಸ್ವರ್ಗಮ್ ಮೇಡು ಇದು ನನಗೆ ಒಂದು ಒಳ್ಳೆಯ ಪುಸ್ತಕದ ರೀತಿ ಇದೆ. ಇದರಲ್ಲಿ ನಾನು ಪ್ರಕೃತಿಯನ್ನು ಓದಲು ಕಲಿತಿದ್ದೇನೆ. ಪ್ರಕೃತಿಯಲ್ಲಿನ ಅನೇಕ ವಿಷಯಗಳು ಪರಸ್ಪರ ಅವಲಂಬಿತವಾಗಿವೆ, ಅದರಲ್ಲಿ ನಾನು ಕೂಡಾ ಎನ್ನುತ್ತಾರೆ ” ಆಲ್ಡೋ.
ಆಲ್ಡೋ ಮತ್ತು ಅವರ ಟೀಮ್ ಈಗ ಎರ್ನಾಕುಲಂ ಮತ್ತು ಕೊಟ್ಟಾಯಂನಲ್ಲಿರುವ ತಮ್ಮ ಮನೆಗಳ ಬಳಿ ಇಂತಹ ಸ್ವಾವಲಂಬಿ ಕೃಷಿಯನ್ನು ಪ್ರಾರಂಭಿಸಿದೆ. ಸ್ವಾವಲಂಬಿ ವಾತಾವರಣದಲ್ಲಿ ನಿಮ್ಮ ಕುಟುಂಬಕ್ಕೆ ಸಾಕಾಗುವಷ್ಟು ವರ್ಷವಿಡಿ ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸಲಾಗುತ್ತದೆ. ಆದರೆ ಒಂದು ಮಾತು ಪ್ರತಿದಿನ ಬಂದು ಹೊಲಗಳಲ್ಲಿ ದಿನಕ್ಕೆ ಕೆಲವು ಗಂಟೆಗಳ ಕಾಲ ಕೆಲಸ ಮಾಡಬೇಕು.
ಆಲ್ಡೋನ ಜೀವನಶೈಲಿ ಮತ್ತು ಅವನ ಆಹಾರಕ್ರಮ ಆತ ನಿಶ್ಚಿತ ಮಾಡಿದ್ದಾನೆ. ಆದರೆ ಹತ್ತು ಎಕರೆ ಬಂಜರು ಭೂಮಿಯನ್ನು ಖರೀದಿಸಿ ಅದರ ಮೇಲೆ ಸ್ವರ್ಗವನ್ನು ನಿರ್ಮಿಸುವುದು ನಿಜವಾಗಿಯೂ ಕಷ್ಟಸಾಧ್ಯ. ವ್ಯಕ್ತಿ ಮುಖ್ಯವಾಗಿ, ಪರಿಸರದ ಬಗ್ಗೆ ವಿಚಾರ ಮಾಡಿ ಅದನ್ನು ಕಾರ್ಯಗತಗೊಳಿಸುವುದು ನಿಜಕ್ಕೂ ಇನ್ನೂ ಕಷ್ಟ. ಆದರೆ ಅಲ್ಡೋ ಇದನ್ನು ಮಾಡಿ ತೋರಿಸಿದ್ದಾರೆ. ಹಾಗಾಗಿ ಅವರನ್ನು ಶ್ಲಾಘಿಸಲೇಬೇಕು.