ಬಾಲಿವುಡ್’ನ ಅಂಬಾನಿ ಇದ್ದಾರೆ ಸುನಿಲ್ ಶೆಟ್ಟಿ ಅವರ ಪತ್ನಿ, ಈ ಬ್ಯುಸಿನೆಸ್’ಗಳನ್ನು ಮಾಡಿ ಗಳಿಸುತ್ತಾರೆ ಕೋಟಿ ಕೋಟಿ ಹಣ!
ಭಾರತದ ಎಲ್ಲಕ್ಕೂ ದೊಡ್ಡ ‘ಬ್ಯುಸಿನೆಸ್ ವುಮನ್’ ಬಗ್ಗೆ ಹೇಳುವುದಾದರೆ ನೀತಾ ಅಂಬಾನಿಯ ಹೆಸರು ಎಲ್ಲಕ್ಕೂ ಮೊದಲು ಬರುತ್ತದೆ. ಚಿತ್ರ ಲೋಕದ ಬಗ್ಗೆ ಹೇಳುವುದಾದರೆ ನಾವು ಸುನಿಲ್ ಶೆಟ್ಟಿ ಅವರ ಪತ್ನಿಯನ್ನು ಬಾಲಿವುಡ್ ನ ಅಂಬಾನಿ ಇಲ್ಲವೇ ‘ಸೂಪರ್ ಬ್ಯುಸಿನೆಸ್ ವುಮನ್’ ಅಂತಾನೂ ಹೇಳಬಹುದು. ಹೀಗೆ ಹೇಳಲು ಕಾರಣವೇನೆಂದರೆ ಸುನಿಲ್ ಶೆಟ್ಟಿ ಅವರ ಪತ್ನಿ ‘ಮಾನಾ’ ಮಾಡುವ ಬ್ಯುಸಿನೆಸ್ ಗಳಿಂದ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಅವರ ಮನೆ ಸೇರುತ್ತದೆ.

ಸಾಮಾನ್ಯವಾಗಿ ಫಿಲ್ಮಿ ತಾರೆಗಳ ಹೆಂಡತಿಯರು ತಮ್ಮ ಗಂಡನ ಹೆಸರಿನಿಂದ ಪ್ರಸಿದ್ದಿಯಾಗಿರುತ್ತಾರೆ. ಜನರಿಗಂತೂ ಅವರು ಆರಾಮವಾಗಿ ಮನೆಯಲ್ಲಿ ಇದ್ದು ಗಂಡನ ಹಣದಲ್ಲಿ ಶೋಕಿ ಮಾಡುತ್ತಾ ಕಾಲ ಕಳೆಯುತ್ತಾರೆ ಎಂದು ಅನಿಸುತ್ತದೆ. ಆದರೆ ಎಲ್ಲರ ಹೆಂಡತಿಯರು ಹಾಗೆ ಇರುವುದಿಲ್ಲ. ಕೆಲವರಿಗೆ ತಮ್ಮ ಕಾಲಮೇಲೆ ತಾವು ನಿಲ್ಲುವುದು ಇಷ್ಟವಿರುತ್ತದೆ. ಅಂಥವರ ಒಂದು ಪ್ರೊಫೆಷನಲ್ ಕರಿಯರ್ ಇರುತ್ತದೆ, ಅದರಿಂದ ಅವರು ತಮ್ಮ ಹೆಸರು ಮಾಡುತ್ತಾರೆ. ಶಾರುಖ್ ಖಾನ್ (ಗೌರಿ ಖಾನ್), ಜಾನ್ ಅಬ್ರಾಹಂ (ಪ್ರಿಯ ರುಂಚಲ್), ಇಮ್ರಾನ್ ಹಾಶ್ಮಿ (ಪರ್ವಿನ್ ಶಾಹನಿ), ವಿವೇಕ್ ಒಬೇರೊಯ್ (ಎಲ್ವಾ) ಇತ್ಯಾದಿ ಅವರ ಹೆಂಡತಿಯರು ಈ ಗುಂಪಿಗೆ ಸೇರುತ್ತಾರೆ.

ಇರಲಿ, ಇವತ್ತು ನಾವು ಸುನಿಲ್ ಶೆಟ್ಟಿ ಅವರ ಹೆಂಡತಿ ‘ಮಾನಾ’ ಅವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಹೇಳುತ್ತೇವೆ. ‘ಅಂಡರ್ ವುಮನ್’ ಹೆಸರಿನಿಂದ ಫೇಮಸ್ ಇರುವ ಮಾನಾ ತಮ್ಮ ಪತಿ ಸುನಿಲ್ ಶೆಟ್ಟಿ ಅವರೊಂದಿಗೆ S2 ಹೆಸರಿನ ರಿಯಲ್ ಏಸ್ಟೇಟ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ್ದಾರೆ. ಇದರ ಅಡಿಯಲ್ಲಿ ಅವರು 21 Luxury Villas ನಿರ್ಮಿಸಿದ್ದರು. ಇದರೊಳಗೆ ಅವರು ಭೋಗ ವಿಲಾಸದ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರು. ಈ ವಿಲ್ಲಾಗಳ ಸೈಜ್ ಸುಮಾರು 6500 sq ft ಇತ್ತು. ಇದಲ್ಲದೆ ಮಾನಾ ಅವರ ಒಂದು ಲೈಫ್ ಸ್ಟೈಲ್ ಸ್ಟೋರ್ ಕೂಡ ಇದೆ. ಇದರಲ್ಲಿ ಮನೆ ಹಾಗೂ ಆಫೀಸ್ ಡೆಕೋರೇಷನ್ ಗಾಗಿ ಬೇಕಾಗುವ ಎಲ್ಲ ವಸ್ತುಗಳು ಈ ಸ್ಟೋರ್ ನಲ್ಲಿ ಸಿಗುತ್ತವೆ. ಇದೊಂದು ದುಬಾರಿ ಸ್ಟೋರ್ ಇರುವುದರಿಂದ ಇಲ್ಲಿ ಎಲ್ಲ ವಸ್ತುಗಳು ದುಬಾರಿ ಹಾಗೂ ಉನ್ನತ ಕ್ವಾಲಿಟಿಯವು ಇರುತ್ತವೆ.
ಬ್ಯುಸಿನೆಸ್ ಅಷ್ಟೇ ಅಲ್ಲ ಮಾನಾ ಸಾಮಾಜಿಕ ಕಾರ್ಯಗಳಲ್ಲೂ ಬ್ಯುಸಿಯಾಗಿರುತ್ತಾರೆ. ಅವರು ‘ಸೇವ್ ದ ಚಿಲ್ಡ್ರೆನ್ ಇಂಡಿಯಾ’ ಹೆಸರಿನ ಎನ್ ಜಿ ಓ ದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಸಂಸ್ಥೆಗಾಗಿ ಅವರು ಯಾವಾಗಲೂ ಫಂಡ್ ಪೂರೈಸುವ ಸಲುವಾಗಿ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿಯೇ ಅವರು ‘ಆರಾಇಜ್’ ಹೆಸರಿನ ಎಗ್ಸಿಬಿಷನ್ ಕೂಡ ಏರ್ಪಡಿಸುತ್ತಾರೆ. ಇದರಿಂದ ಬಂದ ಹಣವನ್ನು ಅವರು ನಿರ್ಗತಿಕ ಹುಡುಗಿಯರ ಹಾಗೂ ಮಹಿಳೆಯರ ಏಳಿಗೆಗಾಗಿ ಖರ್ಚು ಮಾಡುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುನಿಲ್ ಶೆಟ್ಟಿ ಅವರ ಕುಟುಂಬದ ವಾರ್ಷಿಕ ಆದಾಯವು 150 ಕೋಟಿಗಿಂತಲೂ ಅಧಿಕವಿದೆ ಎಂದು ಹೇಳುತ್ತಾರೆ. ಅವರ ಈ ಒಟ್ಟು ಆದಾಯದಲ್ಲಿ ಬಹು ದೊಡ್ಡ ಪಾಲು ಮಾನಾ ಅವರದೂ ಇದೆ. ಇದರಿಂದ ಒಂದು ತಿಳಿದುಬರುವುದೇನೆಂದರೆ ಗಂಡ ಎಷ್ಟೇ ಹಣ ಗಳಿಸಿದರೂ ನಿಜವಾದ ಮಜಾ ಇರೋದು ಸ್ವಂತ ಕಷ್ಟ ಪಟ್ಟು ಗಳಿಸುವಲ್ಲಿಯೇ!
ಒಬ್ಬ ಮಹಿಳೆ ಜಾಬ್ ಅಥವಾ ಬ್ಯುಸಿನೆಸ್ ಮಾಡಿ ತನ್ನ ಕಾಲಿನ ಮೇಲೆ ನಿಲ್ಲುತ್ತಾಳೆಂದರೆ ಅದೊಂದು ಹೆಮ್ಮೆಯ ಸಂಗತಿಯಾಗಿರುತ್ತದೆ. ಅವರು ತಮ್ಮ ಖರ್ಚಿಗಾಗಿ ಬೇರೆಯವರ ಮೇಲೆ ಡಿಪೆಂಡ್ ಇರುವುದಿಲ್ಲ. ಇಂಥ ಪ್ರೊಫೆಷನಲ್ ಬಾಲಿವುಡ್ ಹೆಂಡತಿಯರಿಂದ ನೀವೂ ಕೂಡ ತುಂಬಾ ಕಲಿಯಬಹುದು. ಅದಕ್ಕಾಗಿಯೇ ಹೇಳುತ್ತಾರೆ ಹೆಣ್ಣು ಮಕ್ಕಳನ್ನು ಓದಿಸಿ ಅವರನ್ನು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಿಸಿ ಎಂದು!
ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.