ಬಿಲ್ ಗೇಟ್ಸ್ ದಂಪತಿಗಳು ಕೊಂಡುಕೊಂಡ 328 ಕೋಟಿ ₹ ಮೌಲ್ಯದ ಅಲಿಶಾನ್ ಬಂಗಲೆ ಹೇಗಿದೆ ಗೊತ್ತಾ? ಫೋಟೋ ನೋಡಿದರೆ ಬೆರಗಾಗುವಿರಿ!!!

ಜಗತ್ಪ್ರಸಿದ್ಧ ಮಯಕ್ರೋಸಾಫ್ಟ ಕಂಪನಿಯ ಮಾಲೀಕ ಮತ್ತು ಸಹ ಸಂಸ್ಥಾಪಕರಾದ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೇಲಿಂಡಾ ಗೇಟ್ಸ್ ಇವರು ಅಮೇರಿಕೆಯ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಪಟ್ಟದಲ್ಲಿಯ ಅತ್ಯಂತ  ಶ್ರೀಮಂತ ವಸತಿಯಲ್ಲಿ ಒಂದು ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈ ಬಂಗಲೆಯ ಮೌಲ್ಯ 42 ಮಿಲಿಯನ್ ಡಾಲರ್ ಅಂದರೆ 328 ಕೋಟಿ ರೂಪಾಯಿಯಷ್ಟಿದೆ.  ಈ ಸಂದರ್ಭದ ಮಾಹಿತಿ ನ್ಯೂ ಯಾರ್ಕ್ ಪೋಸ್ಟ್ ನೀಡಿದೆ.

ಬಿಲ್ ಮತ್ತು ಮೆಲಿಂಡಾ ಇವರು ತಗೆದುಕೊಂಡ ಬಂಗಲೆ ಸಮುದ್ರದ ದಂಡೆಯಲ್ಲಿದೆ. ಈ ಬಂಗಲೆಯ ಒಟ್ಟು ಕ್ಷೇತ್ರಫಲ 5 ಸಾವಿರದ 800 ಚೌ ಸೆ ಮಿ ಯಷ್ಟಿದೆ. ಬಂಗಲೆಯಲ್ಲಿ 6 ದೊಡ್ಡ ಆಕಾರದ ಮಾಸ್ಟರ್ ಬೆಡ್ ರೂಮ್ ಇವೆ, ಬಂಗಲೆಯ ಹಿಂದಿನ ಬದಿಯಲ್ಲಿರುವ ಸಮುದ್ರ ದಂಡೆಯು ಸಹ ಇವರ ಅಧೀನದಲ್ಲಿ ಬರುವದು ಎಂದು ತಿಳಿಸಲಾಗಿದೆ. ಈ ಬಂಗಲೆಯಲ್ಲಿ ಒಂದು ದೊಡ್ಡ ಸ್ವಿಮ್ಮಿಂಗ್ ಫೂಲ್ ಇದೆ, ಅಲ್ಲದೆ ಅದರಲ್ಲಿ ಹತ್ತು ಜನಕ್ಕಿಂತ ಹೆಚ್ಚು ಒಮ್ಮೆಲೇ ಸ್ವಿಮ್ ಮಾಡುವಷ್ಟು ಸ್ಥಳ ಸ್ವಿಮಿಂಗ್ ಫೂಲ್ ಹೊಂದಿದೆ. ಈ ಪರಿಸರದಲ್ಲಿಯ ಎಲ್ಲಕ್ಕಿಂತ ಹೆಚ್ಚು ಮೌಲ್ಯದ ವ್ಯವಹಾರಗಳಲ್ಲಿ ಈ ಒಂದು ವ್ಯವಹಾರವಾಗಿದೆ ಎಂದು ದ ವಾಲ್ ಸ್ಟ್ರೀಟ್ ಜರ್ನಲ್ ಅವರು ಹೇಳಿದ್ದಾರೆ.


ಇದಕ್ಕಿಂತ ಮೊದಲು ಅಮೆಜಾನ್ ಇ-ಕಾಮರ್ಸ್ ಕಂಪನಿಯ ಸಂಸ್ಥಾಪಕರಾದ ಜೆಫ್ ಬೆಜೋಸ್ ರು ಜನೇವರಿ ತಿಂಗಳಿನಲ್ಲಿ ತನ್ನ ಪ್ರೇಯಸಿ ಲಾರಾ ಸಾಂಚೆಜ ಸಲುವಾಗಿ ವ್ಯಾಲೆಂಟೈನ್ ಗಿಫ್ಟ್ ಎಂದು ಒಂದು ಸಾವಿರದ 178 ಕೋಟಿಯ ಬಂಗಲೆಯನ್ನು ಖರೆದಿ ಮಾಡಿದ್ದರು. ಅಮೇರಿಕೆಯಲ್ಲಿಯ ಪ್ರಸಿದ್ಧ ಉದ್ಯೋಗಪತಿ ಡೇವಿಡ್ ಜಿಫಿನ್ ಇವರು ಲಾಸ್ ಎಂಜಿಲನಲ್ಲಿಯ ಅಲಿಶಾನ್ ಬಂಗಲೆಯೊಂದನ್ನು ಜೆಫ್ ಅವರು ತಮ್ಮ ಪ್ರೇಯಸಿಯ ಸಲುವಾಗಿ ಪ್ರೀತಿಯ ಕೊಡುಗೆ ಎಂದು ಖರೆದಿ ಮಾಡಿದ್ದರು.  ಈ ಒಂದು ವ್ಯವಹಾರ ಅಲ್ಲಿಯ ಎಲ್ಲಕ್ಕಿಂತ ದುಬಾರಿ ವ್ಯವಹಾರವೆಂದು ನಿರ್ಧರಿಸಲಾಗಿತ್ತು. ಬಿಲ್ ಗೇಟ್ಸ್ ದಂಪತಿಗಳು ತಗೆದುಕೊಂಡ ಬಂಗ್ಲೆಯು ಸಹ ಈ ದುಬಾರಿ ವ್ಯವಹಾರಗಳಲ್ಲಿ ಒಂದಾಗಿದೆ.