ಬಿಸಿಲಿಗೆ ಬರುತ್ತಲೇ ಯುವತಿಯ ಡ್ರೆಸ್ “ಕಲರ್” ಚೇಂಜ್! ಯುವತಿಯರ ಸಖತ್ ಆಕರ್ಷಣೆ ಈ ಜಾದೂ ಡ್ರೆಸ್ …

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಅನೇಕ ರೀತಿಯ ಅದ್ಭುತ ಹಾಗೂ ವಿಶೇಷ ದೃಶ್ಯಗಳ ವಿಡಿಯೋ ನೋಡಲು ಸಿಗುತ್ತವೆ. ಈ ದೃಶ್ಯಗಳನ್ನು ನೋಡಿದಾಗ ಕೆಲವೊಮ್ಮೆ ತಮಾಷೆ ಎನಿಸಿದರೆ ಇನ್ನೂ ಕೆಲವೊಮ್ಮೆ ಅದ್ಭುತವೆನಿಸುತ್ತದೆ. ಸದ್ಯ ಇದೇ ರೀತಿಯ ಆಶ್ಚರ್ಯದ ವಿಡಿಯೋ ಒಂದು ನೋಡಲು ಸಿಗುತ್ತಿದೆ. ಇದನ್ನು ನೋಡಿದಾಗ ನಮ್ಮ ಕಣ್ಣುಗಳೇ ನಂಬಲು ಅಸಾಧ್ಯವಾಗುತ್ತದೆ.

ನಿಸರ್ಗದಲ್ಲಿ ಅನೇಕ ರೀತಿಯ ಜೀವ ಜಂತುಗಳು, ವನಸ್ಪತಿಗಳು ಮತ್ತು ಅನೇಕ ರೀತಿಯ ಹೂವುಗಳು ಸೂರ್ಯನ ಕಿರಣ ಬಿದ್ದಾಗ ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಈಗ ಸೂರ್ಯನ ಬಿಸಿಲು ತಾಗುತ್ತಲೇ ತನ್ನ ಬಣ್ಣವನ್ನು ಬದಲಾಯಿಸುವ ಡ್ರೆಸ್ ಎಲ್ಲಾದರೂ ಎಂದಾದರೂ ನೋಡಿದ್ದೀರಾ? ಇಲ್ಲವಲ್ಲಾ ಹಾಗಾದರೆ ಇಲ್ಲಿ ನೋಡಿ…

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬೆಳ್ಳನೆಯ ಬಣ್ಣದ ಡ್ರೆಸ್ ಹಾಕಿಕೊಂಡು ಬಿಸಿಲಿನಲ್ಲಿ ಬರುತ್ತಾಳೆ. ಆಕೆ ಬಿಸಿಲಿನಲ್ಲಿ ಬರುತ್ತಲೇ ಆಕೆಯ ಡ್ರೆಸ್ ಬಣ್ಣ ಕ್ಷಣದಲ್ಲಿ ಗುಲಾಬಿ ಬಣ್ಣಕ್ಕೆ ಬದಲಾಗಿ ಬಿಡುತ್ತದೆ. ಇದನ್ನು ನೋಡಿದಾಗ ನಿಜಕ್ಕೂ ಅದ್ಭುತ ಎನಿಸದೆ ಇರಲಾರದು. ಯುವತಿಯು ನೆರಳಿನಲ್ಲಿ ಹೋಗಲು ಮತ್ತೆ ಆಕೆಯ ಡ್ರೆಸ್ ಬಣ್ಣ ಮೊದಲಿನ ಹಾಗೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈ ವೀಡಿಯೋವನ್ನು ನೋಡಿದಾಗ ವಿಜ್ಞಾನ ಎಷ್ಟು ಬೇಗ ದಾಪುಗಾಲು ಇಡುತ್ತಿದೆ ಎಂಬುದು ತಿಳಿದು ಬರುತ್ತದೆ. ಹಾಗೂ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಹೇಗೆ ಜನ್ಮ ಪಡೆಯುತ್ತಿವೆ ಎಂಬುದು ತಿಳಿದು ಬರುತ್ತದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by IZZI (@izzipoopi)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ
@izzipoopi ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ಸುದ್ದಿಯನ್ನು ಬರೆಯುವ ಹೊತ್ತಿಗೆ ಪ್ರಸ್ತುತ ವಿಡಿಯೋವನ್ನು 2 ಕೋಟಿಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 22 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಜನರು ಈ ವಿಡಿಯೋ ನೋಡಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.