ಬೇಟೆಯಾಡಲು ಹೊರಟಿದ್ದ ಕಾಡಿನ ರಾಜ ಸಿಂಹ, ಆದರೆ ಎಮ್ಮೆಗಳ ಧಾಳಿಗೆ ತಾನೇ ಪ್ರಾಣ ಕಳೆದುಕೊಂಡ! ವಿಡಿಯೋ ನೋಡಿ ಅಯ್ಯೋ ಪಾಪ ಎಂದ ನೆಟ್ಟಿಗರು!

ಕಾಡಿನ ರಾಜ ಎಂದರೆ ಸಿಂಹ ಎಂದು ತಟ್ಟನೆ ಎಲ್ಲರೂ ಉತ್ತರವನ್ನು ಹೇಳುತ್ತಾರೆ. ಸಿಂಹವು ತನ್ನ ಗಾಂಭೀರ್ಯದ ನಡೆಗೆ, ಬೇಟೆಯಾಡುವ ಪರಿಗೆ ಹಾಗೂ ಅದರ ಭಯಾನಕವಾದ ನೋಟಕ್ಕೆ ಹೆಸರಾಗಿದ್ದು, ಎಲ್ಲರಿಗೂ ಅದು ಕಾಡಿನ ರಾಜ ಎನಿಸಿಕೊಳ್ಳಲು ಸೂಕ್ತವಾಗಿದೆ ಎನಿಸುತ್ತದೆ. ಸಿಂಹವು ಕಾಡಿನಲ್ಲಿ ಯಾವುದೇ ಪ್ರಾಣಿಯನ್ನು ಬೇಕಾದರೂ ಬೇಟೆಯಾಡಿ ಕೊಂ ದು ತಿನ್ನುತ್ತದೆ. ಸಾಮಾನ್ಯವಾಗಿ ಸಿಂಹಗಳು ಗುಂಪಿನಲ್ಲಿ ಬೇ ಟೆಯಾಡುತ್ತವೆ. ಸಿಂಹದ ಕೈಗೆ ಸಿಕ್ಕ ಪ್ರಾಣಿಯು ತಪ್ಪಿಸಿಕೊಂಡು ಹೋಗುವುದು ಅಸಾಧ್ಯವಾದ ವಿಷಯವೇ ಸರಿ. ಸಿಂಹಗಳು ಬೇ ಟೆ ಆಡುವ ಅದೆಷ್ಟೋ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಈಗಾಗಲೇ ವೈರಲ್ ಆಗಿವೆ. ಆದರೆ ಕೆಲವೊಮ್ಮೆ ಸಿಂಹಕ್ಕೂ ಕೂಡಾ ತಾನಾಡುವ ಬೇ ಟೆ ಅಪಾಯವನ್ನು ತಂದೊಡ್ಡುವ ಪರಿಸ್ಥಿತಿಗಳು ಎದುರಾಗುತ್ತದೆ. ಇಂತಹುದೇ ಒಂದು ಅಪರೂಪದ ಸನ್ನಿವೇಶವನ್ನು ತೋರಿಸುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೋದಲ್ಲಿ ಸಿಂಹದ ಪಾಡು ನೋಡಿದಾಗ ಇಷ್ಟು ದಿನ ಸಿಂಹದ ಧೈರ್ಯ ನೋಡಿದವರೇ ಅಯ್ಯೋ ಪಾಪ ಸಿಂಹ ಎನ್ನುವಂತಾಗುತ್ತದೆ. ಸಿಂಹದ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದೂ ಕೂಡಾ ತಿಳಿಯುವುದಿಲ್ಲ. ಅಲ್ಲದೇ ಸಿಂಹ ಇಂತಹ ಕೆಲಸವನ್ನು ಏಕೆ ಮಾಡಲು ಹೋಯಿತು ಎಂದು ಕೂಡ ಅದರ ಬಗ್ಗೆ ಕನಿಕರ ಮೂಡಬಹುದು. ವೀಡಿಯೋದಲ್ಲಿ ನೋಡಿದಾಗ ಬೇಟೆಯಾಡಲು ಹೋದ ಸಿಂಹ ಮಾಡಿದ ತಪ್ಪು ಏನೆಂದರೆ ಅದು ಎಮ್ಮೆಗಳ ಹಿಂಡಿನ ಮೇಲೆ ದಾಳಿ ಮಾಡಿರುವುದು. ಆಗ ದೊಡ್ಡ ಸಂಖ್ಯೆಯಲ್ಲಿದ್ದ ಎಮ್ಮೆಗಳು ಸಿಂಹವನ್ನು ಮೇಲೆ ಎತ್ತಿ, ನೆಲದ ಮೇಲೆ ಕುಕ್ಕಿ, ಚುಚ್ಚಿ, ತುಳಿದು ಅದನ್ನು ಕೊಂದು ಹಾಕಿವೆ.

ಇಂತಹದೊಂದು ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಕ್ರುಗಲ್ ಸೈಟಿಂಗ್ ಎನ್ನುವ ಯೂಟ್ಯೂಬ್ ಚಾನೆಲ್ ನವರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದಾಗ ಕಾಡಿನ ಒಂದು ಸರೋವರದ ದಂಡೆಯಲ್ಲಿ ಎಮ್ಮೆಗಳ ಒಂದು ದೊಡ್ಡ ದಂಡು ನೀರನ್ನು ಕುಡಿಯುತ್ತಿವೆ. ಅದೇ ಸಮಯದಲ್ಲಿ ಸಿಂಹವೊಂದು ಬೇ ಟೆ ಇದು ಸರಿಯಾದ ಸಮಯ ಎಂದು ಭಾವಿಸಿ, ಎಮ್ಮೆಗಳನ್ನು ಬೇ ಟೆಯಾಡಲು ಬಂದಿದೆ. ಎಮ್ಮೆಗಳನ್ನು ಬೇ ಟೆಯಾಡಲು ಬಂದ ಸಿಂಹ ಅವುಗಳ ಮೇಲೆ ದಾ ಳಿ ಮಾಡಲು ಎಗರಿದ್ದು, ಆಗ ಅದು ಎಮ್ಮೆಗಳ ಗುಂಪಿನೊಳಗೆ ಬಿದ್ದಿದೆ.
ಸಿಂಹದ ಧಾ ಳಿ ಯನ್ನು ಕಂಡು ಎಮ್ಮೆಗಳ ಹಿಂಡಿನಲ್ಲಿದ್ದ ಎಮ್ಮೆಗಳು ಭಯ ಪಟ್ಟು ಅಲ್ಲಿಂದ ಓಡಿಲ್ಲ.

ಅವು ಸಿಂಹವನ್ನು ಕಂಡು ದಿಕ್ಕಾಪಾಲಾಗಿ ಓಡುವ ಬದಲಾಗಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ ಎಮ್ಮೆಗಳೆಲ್ಲಾ ಒಗ್ಗಟ್ಟಾಗಿ ಬಹಳ ಧೈರ್ಯದಿಂದ ಸಿಂಹವನ್ನು ಎದುರಿಸಲು ಸಜ್ಜಾಗಿದೆ. ಇದಾದ ನಂತರ ಸಿಂಹದ ಕೈಯಿಂದ ಏನು ಮಾಡಲಾಗಿಲ್ಲ. ಅಲ್ಲಿದ್ದ ಕೆಲವು ಎಮ್ಮೆಗಳಂತೂ ಸಿಂಹ ಅಲ್ಲಿದೆ ಎನ್ನುವ ಭ ಯ ಆ ತಂ ಕ ಕೂಡಾ ಇಲ್ಲದೇ ಆರಾಮವಾಗಿ ಓಡಾಡಿಕೊಂಡಿವೆ. ಒಂದಷ್ಟು ಎಮ್ಮೆಗಳಲ್ಲಾ ಸೇರಿಕೊಂಡು ತಮ್ಮ ಕೊಂಬಿನಿಂದ ಸಿಂಹವನ್ನು ಚುಚ್ಚಲು ಆರಂಭಿಸಿದೆ. ಎಮ್ಮೆಯ ಕೊಂಬಿನ ದಾ ಳಿ ಗೆ ಸಿಂಹದ ಪರಿಸ್ಥಿತಿ ಹದಗೆಟ್ಟಿದೆ. ಅದಕ್ಕೆ ಎಮ್ಮೆಗಳ ನಡುವಿನಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವಾಗಿಲ್ಲ. ಎಮ್ಮೆಗಳು ಒಂದೊಂದಾಗಿ ಸಿಂಹವನ್ನು ಕೊಂಬುಗಳಿಂದ ಚುಚ್ಚಲು ಆರಂಭಿಸುತ್ತವೆ.

ವಿಡಿಯೋ ನೋಡಿ

ಇದಾದ ನಂತರ ಶಕ್ತಿ ಹೀನವಾಗಿದ್ದ ಸಿಂಹವನ್ನು ಎಮ್ಮೆಗಳು ತಮ್ಮ ಕೊಂಬುಗಳ ಸಹಾಯದಿಂದ ಮೇಲಕ್ಕೆ ಎತ್ತಿ ಬಲವಾಗಿ ನೆಲದ ಮೇಲಕ್ಕೆ ಕುಕ್ಕಿವೆ‌. ಎಮ್ಮೆಗಳು ಶಕ್ತಿಹೀನವಾಗಿ ನೆಲದ ಮೇಲೆ ಬಿದ್ದಂತಹ ಸಿಂಹವನ್ನು ತಮ್ಮ ಕಾಲಿನಿಂದ ತುಳಿಯಲು ಆರಂಭಿಸುತ್ತವೆ. ಎಮ್ಮೆ ಗಳ ಆ ಭೀ ಕ ರ ಧಾ ಳಿಗೆ ಸಿಂಹದ ಪ್ರಾಣ ಹಾರಿ ಹೋಗುತ್ತದೆ. ಸಿಂಹವು ಸತ್ತ ನಂತರ ಅದರ ಮೃತದೇಹವು ಸರೋವರದ ಬಳಿ ಬಿದ್ದಿರುವುದು ಕಾಣುತ್ತದೆ. ಆದರೆ ಅದು ಸತ್ತ ಮೇಲೂ ಎಮ್ಮೆಗಳ ಕೋಪ ಕಡಿಮೆಯಾಗದೆ ಅವು ಮತ್ತೆ ಬಂದು ಸಿಂಹದ ಶರೀರದ ಮೇಲೆ ಕೊಂಬಿನಿಂದ ದಾ ಳಿ ಯನ್ನು ಮಾಡಿ, ತಮ್ಮ ಕೋಪ ತಣ್ಣಗಾದ ಮೇಲೆ ಸರೋವರದ ಬಳಿಯಿಂದ ಹೊರಟು ಹೋಗುತ್ತವೆ.