Articles

23 ವರ್ಷದ ಮಹಿಳೆಗೆ ಒಂದೇ ಸಲಕ್ಕೆ ಆರು ಡೋಸ್ ಲಸಿಕೆ ನೀಡಲಾಯಿತು! ನಂತರ ಆಗಿದ್ದೇನು?

ಲಸಿಕೆಯನ್ನು ಕರೋನಾ ವೈರಸ್ ಎದುರಿಸಲು ವಿಶ್ವದ ಅತಿದೊಡ್ಡ ಅಸ್ತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಇರುವುದರಲ್ಲಿ ಭಾರತದಲ್ಲೇ ವೇಗವಾಗಿ ಲಸಿಕೆ ಹಾಕಲಾಗುತ್ತಿದೆ, ಈಗಾಗಲೇ 45+ ನವರಿಗೆ ಸಾಕಷ್ಟು ಕವರ್ ಮಾಡಿರುವ ಆರೋಗ್ಯ ಇಲಾಖೆ, ಮೇ 1 ರಿಂದ 18+ ನವರಿಗೂ ಲಸಿಕೆ ಹಾಕಲು ಸುರು ಮಾಡಿದೆ.

ಈ ಮಧ್ಯೆ ಹಲವು ಅಪಸವ್ಯಗಳೂ ನಡೆಯುತ್ತಿವೆ, ಬೇಜವಾಬ್ದಾರಿಯಿಂದ ವರ್ತಿಸುವ ಕೆಲವರಿಂದಾಗಿ ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಜೊತೆಗೆ ಜನರೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಅನೇಕ ನಿರ್ಲಕ್ಷ್ಯದ ವರದಿಗಳು ಬಂದಿವೆ. ನಮ್ಮಲ್ಲಿ ಮಾತ್ರವಲ್ಲ, ಬೇರೆ ದೇಶದಲ್ಲೂ ಇಂಥ ಪ್ರಕರಣಗಳು ನಡೆದಿವೆ. ಅಂತಹ ಒಂದು ಪ್ರಕರಣ ಇಲ್ಲಿದೆ ನೋಡಿ.

ಉದಾಹರಣೆಗೆ ಇಟಲಿಯ 23 ವರ್ಷದ ಮಹಿಳೆಗೆ ಒಮ್ಮೆಲೇ ಆರು ಡೋಸ್ ಕರೋನಾ ಲಸಿಕೆ ನೀಡಲಾಗಿಬಿಟ್ಟಿದೆ. ಇದೊಂದು ತೀರ ನಿರ್ಲಕ್ಷ್ಯದ ಪ್ರಕರಣವಾಗಿದ್ದು ಮಹಿಳೆಯ ಪ್ರಾ”ಣ ಉಳಿದಿದ್ದೇ ಹೆಚ್ಚು. ತಕ್ಷಣ ಅವರನ್ನು ಎಡ್ಮಿಟ್ ಮಾಡಿಕೊಂಡು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಿ, ನಂತರ ಅಬ್ಸರ್ವೇಶನ್ ನಲ್ಲಿ ಇಟ್ಟು ಅಪಾಯ ಿಲ್ಲ ಎಂದು ಗೊತ್ತಾದ ಮೇಲೆ ಮಹಿಳೆಯನ್ನು ಬಿಡುಗಡೆ ಮಾಡಲಾಗಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಟಸ್ಕನಿಯ ನೋವಾ ಆಸ್ಪತ್ರೆಯ ಮಹಿಳೆಯೊಬ್ಬರು ಭಾನುವಾರ ಲಸಿಕೆ ಪಡೆಯಲು ಹೋದರು, ಆದರೆ ಆಕಸ್ಮಿಕವಾಗಿ ಆಕೆಗೆ ಆರು ಡೋಸ್ ಲಸಿಕೆಯನ್ನು ಏಕಕಾಲದಲ್ಲಿ ನೀಡಿಬಿಟ್ಟರು. ಆಸ್ಪತ್ರೆಯ ವಕ್ತಾರರು ರೋಗಿಯ ಸ್ಥಿತಿ ಈಗ ಉತ್ತಮವಾಗಿದೆ ಮತ್ತು ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ರೋಗಿಯನ್ನು 24 ಗಂಟೆಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಿದ ನಂತರ ಬಿಡುಗಡೆ ಮಾಡಲಾಗಿದೆ. ವಾಸ್ತವವಾಗಿ, ಆರೋಗ್ಯ ಕಾರ್ಯಕರ್ತ ಆಕಸ್ಮಿಕವಾಗಿ ಸಿರಿಂಜ್ನಲ್ಲಿ ಲಸಿಕೆಯ ಬಾಟಲ್ ನಲ್ಲಿ ಇರುವ ಎಲ್ಲ ಔಷಧವನ್ನು ತುಂಬಿದರು. ಒಂದು ಸೀಸೆಯಲ್ಲಿ ಆರು ಡೋಸೇಜ್‌ಗಳಿರುತ್ತವೆ. ಯಾವುದೋ ಯೋಚನೆ ಮಾಡುತ್ತಾ ಅಷ್ಟನ್ನೂ ಭರ್ತಿ ಮಾಡಿಕೊಂಡು ನೀಡಿಬಿಟ್ಟಿದ್ದಾರೆ!

ಲಸಿಕೆ ನೀಡಿದ ಕೂಡಲೆ ಆರೋಗ್ಯ ಕಾರ್ಯಕರ್ತ ತನ್ನ ತಪ್ಪನ್ನು ಅರಿತುಕೊಂಡ. ತಕ್ಷಣ ಇತರರಿಗೆ ವಿಷಯ ತಿಳಿಸಿದಾಗ ಹೈ ಪ್ರಯಾರಿಟಿಯಲ್ಲಿ ಚಿಕಿತ್ಸೆ ನಿಡತೊಡಗಿದರು. ಆಸ್ಪತ್ರೆಯ ಪ್ರಕಾರ, ವೈದ್ಯರು ಇವರ ರೋಗನಿರೋಧಕ ಶಕ್ತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದರು, ಇನ್ನೂ ಅಚ್ಚರಿಯೆಂದರೆ ಲಸಿಕೆ ಹಾಕಿಸಿಕೊಂಡವರು ಸೈಕಾಲಜಿ ವಿಭಾಗದ ವಿದ್ಯಾರ್ಥಿ ಕೂಡ ಹೌದು
-Team Infotrend

Leave a Comment

Your email address will not be published. Required fields are marked *