ಬೇಸಿಗೆಯ ಬಿಸಿಯಿಂದ ಕಂಗೆಟ್ಟು ತಂಪಾದ ಗಾಳಿಗಾಗಿ ದೇಸಿ ಉಪಾಯ ಮಾಡಿದ ಗ್ರಾಮಸ್ಥರು; ನಕ್ಕು ನಕ್ಕು ಸಾಕಾಯಿತು ಎಂದ ಜನ!

ಬೇಸಿಗೆ ಕಾಲ ಬಂತೆಂದರೆ ಸಾಕು ಸೂರ್ಯನ ಬಿಸಿಯನ್ನು ತಡೆಯಲು ಆಗುವುದಿಲ್ಲ. ಇಡೀ ದೇಶದಲ್ಲಿ ತಾಪಮಾನ ಹೆಚ್ಚುತ್ತದೆ. ಶ್ರೀಮಂತ ವರ್ಗದ ಜನರು ಹಾಗೂ ಸೆಲೆಬ್ರಿಟಿಗಳಾದರೆ ಬೇಸಿಗೆ ಬರುವ ವೇಳೆಗೆ ತಂಪಾದ ಸ್ಥಳಗಳನ್ನು ಅರಸಿ ಹೋಗುತ್ತಾರೆ. ಆದರೆ ಸಾಮಾನ್ಯ ಜನರು ಮಾತ್ರ ತಾವು ಇರುವ ಕಡೆಯೇ ತಂಪಾದ ಗಾಳಿ ಬೀಸಲಿ ಎಂದು ಆಶಿಸುತ್ತಾರೆ. ಬೇಸಿಗೆ ಕಾಲ ಆರಂಭವಾದಂತೆ ದೇಶದ ಅನೇಕ ಭಾಗಗಳಲ್ಲಿ ಈ ಸಮಯದಲ್ಲಿ ಉಷ್ಣತೆಯು ತೀವ್ರವಾಗಿ ಏರಿಕೆಯಾಗುವುದರಿಂದ ಬೆಳಗಿನ ಸಮಯದಲ್ಲೂ ಮನೆಗಳಿಂದ ಹೊರಗೆ ಬರುವುದು ಕೂಡ ಕಠಿಣ ಎನಿಸಿಬಿಡುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಂತೂ ಬೇಸಿಗೆಯ ಧಗೆಯು ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಲೇ ಇದೆ. ಬೇಸಿಗೆ ಕಾಲ ಪ್ರಾರಂಭವಾಯಿತು ಎಂದರೆ ಅಲ್ಲಿ ಜನರು ಉಷ್ಣತೆಗೆ ತತ್ತರಿಸಿ ಹೋಗುತ್ತಾರೆ. ಬಿಸಿಲಿನ ಬೇಗೆಗೆ ಅನೇಕ ಕಡೆಗಳಲ್ಲಿ ಸಾವು-ನೋವುಗಳು ಕೂಡ ಸಂಭವಿಸುವುದು ಸಹಜವಾಗಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಹಾಗೂ ಅರಣ್ಯನಾಶದಿಂದ ವರ್ಷದಿಂದ ವರ್ಷಕ್ಕೆ ಬೇಸಿಗೆಯ ಬಿಸಿಯು ಹೆಚ್ಚಾಗುತ್ತದೆ.

ಈ ಬಾರಿಯ ಬೇಸಿಗೆಯು ಈಗಾಗಲೇ ಬಂದಾಗಿದೆ. ಎಲ್ಲೆಡೆ ಸೂರ್ಯನ ಶಾಖ ಹೆಚ್ಚುತ್ತಿದೆ. ಜನ ಹೆಚ್ಚಿರುವ ಈ ತಾಪಮಾನಕ್ಕೆ ಕಂಗೆಟ್ಟಿದ್ದಾರೆ. ನಗರ-ಪಟ್ಟಣಗಳಲ್ಲಿ ಜನರು ಎಸಿ ಹಾಗೂ ಏರ್ ಕೂಲರ್ ಗಳ ಮೊರೆ ಹೋಗಿದ್ದಾರೆ. ಇನ್ನು ಗ್ರಾಮಗಳಲ್ಲಿ ಕೂಡಾ ಜನರು ಸುಡುವ ಬಿಸಿಲಿನಿಂದ ತಮ್ಮನ್ನು ತಾವು ತಂಪಾಗಿ ಇಟ್ಟುಕೊಳ್ಳುವ ಸಲುವಾಗಿ ಹಲವು ದೇಶಿಯ ಉಪಾಯಗಳನ್ನು ಮಾಡಲು ಮುಂದಾಗಿದ್ದಾರೆ. ಐಪಿಎಸ್ ಆಫೀಸರ್ ರುಪಿನ್ ಶರ್ಮಾ ಅವರು ಇಂತಹದೇ ಒಂದು ಸನ್ನಿವೇಶವನ್ನು ಕುರಿತಾದ ಆಸಕ್ತಿಕರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ಗಮನಿಸಿ ನೋಡಿದಾಗ, ಇದನ್ನು ನೋಡಿ ಪ್ರತಿಯೊಬ್ಬರಿಗೂ ನಗು ಬರುವುದು ಖಂಡಿತ.‌ ಹಳ್ಳಿಯ ಜನರು ಬಿಸಿಲಿನಿಂದ ಪಾರಾಗಲು, ತಂಪಾದ ಗಾಳಿಯನ್ನು ಪಡೆಯಲು ಒಂದು ಕತ್ತೆಯನ್ನು ಬಳಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವೀಡಿಯೋ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಾ ಸಾಗಿದೆ. ವಿಡಿಯೋದಲ್ಲಿರುವ ಆಸಕ್ತಿಕರ ವಾದ ದೃಶ್ಯದ ಬಗ್ಗೆ ಹೇಳುವುದಾದರೆ, ಗ್ರಾಮವೊಂದರಲ್ಲಿ ಜನರು ಮನೆಯ ಹೊರಗಡೆ ಕುಳಿತುಕೊಳ್ಳಲು ಹಾಕುವಂತಹ ಮರದ ಮಂಚದ ಮೇಲೆ ಕುಳಿತು ಕೊಂಡಿದ್ದಾರೆ. ಅಲ್ಲೇ ಹತ್ತಿರದಲ್ಲಿ ಸ್ವಲ್ಪ ಎತ್ತರದಲ್ಲಿ ಒಂದು ಕೋಲನ್ನು ಕಾಣಬಹುದಾಗಿದೆ. ಈ ಕೋಲನ್ನು ಗಾಣದಂತ ಒಂದು ಮಾದರಿಯ ವಸ್ತುವಿಗೆ ಜೋಡಿಸಿದ್ದಾರೆ. ಮೇಲೆ ಇರುವ ಕೋಲಿನ ಎರಡೂ ಬದಿಗಳಲ್ಲಿ ಬಟ್ಟೆಗಳನ್ನು ನೇತು ಹಾಕಲಾಗಿದೆ.

ಕೆಳಗೆ ಒಂದು ಕತ್ತೆಯನ್ನು ಗಾಣದಂತೆ ತಿರುಗುವ ಯಂತ್ರಕ್ಕೆ ಕಟ್ಟಲಾಗಿರುವುದನ್ನು ಗಮನಿಸಬಹುದು. ಕತ್ತೆಯು ಕೋಲಿನ ಸುತ್ತ ಸುತ್ತಲೂ ಆರಂಭಿಸಿದ ಕೂಡಲೇ, ಮೇಲೆ ನೇತಾಡುತ್ತಿರುವ ಕೋಲು ಕೂಡ ಸುತ್ತಲೂ ಪ್ರಾರಂಭಿಸುತ್ತದೆ. ಆಗ ಅದಕ್ಕೆ ನೇತು ಹಾಕಿರುವ ಬಟ್ಟೆಗಳು ತಿರುಗಲು ಆರಂಭಿಸುತ್ತದೆ. ಆಗ ಮಂಚದ ಮೇಲೆ ಕುಳಿತಿರುವವರಿಗೆ ತಣ್ಣನೆಯ ಗಾಳಿಯನ್ನು ಅದು ನೀಡುತ್ತದೆ. ಆಫೀಸರ್ ರುಪಿನ್ ಶರ್ಮ ಅವರು ಹೇಗೆ ವಿಡಿಯೋವನ್ನು ಶೇರ್ ಮಾಡಿಕೊಂಡು ಅದರ ಶೀರ್ಷಿಕೆಯಲ್ಲಿ ಬಿಸಿಲಿಗೆ ಉಪಾಯ: ಬೇಸಿಗೆಯ ಬಿಸಿ ನಿಂದ ತಪ್ಪಿಸಿಕೊಳ್ಳಲು ದೇಶಿಯ ಉಪಾಯ ಎಂದು ಬರೆದುಕೊಂಡಿದ್ದಾರೆ

ವಿಡಿಯೋ ನೋಡಿ

ರುಪಿನ್ ಶರ್ಮಾ ಅವರ ಪ್ರಕಾರ ಈ ವಿಡಿಯೋ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ನಡೆದ ಘಟನೆ ಎನ್ನಲಾಗಿದೆ. ಅವರು ಈ ವಿಡಿಯೋವನ್ನು ಏಪ್ರಿಲ್ 19 ರಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಬಹಳಷ್ಟು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದು ಅನೇಕ ಮಂದಿ ಕಾಮೆಂಟ್ ಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಅದರಲ್ಲೂ ಬೇಸಿಗೆಯಲ್ಲಿ ವಿದ್ಯುತ್ ಇರುವುದು ಅಪರೂಪವೇ ಸರಿ. ಇಂತಹ ಸಮಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾದಾಗ ಜನರು ಅದರಿಂದ ತಪ್ಪಿಸಿಕೊಳ್ಳಲು ಇಂತಹ ದೇಶೀಯ ಉಪಾಯಗಳನ್ನು ಮಾಡುವುದು ಸಹಜವಾದರೂ, ವೈರಲ್ ವೀಡಿಯೋದಲ್ಲಿನ ದೃಶ್ಯ ಸ್ವಲ್ಪ ತಮಾಷೆಯದ್ದಾಗಿದೆ.