ಬ್ಯಾಂಕಿನಲ್ಲಿ FD ಮಾಡುವವರಿಗೆ ಸಿಹಿ ಸುದ್ದಿ! ಈಗ ಸಿಗಲಿದೆ ಮೊದಲಿಗಿಂತ ಜಾಸ್ತಿ ಬಡ್ಡಿ, ತಿಳಿದುಕೊಳ್ಳಿ ಹೊಸ ದರ
ನವದೆಹಲಿ:- ನಮ್ಮ ಹಣವನ್ನು ಯಾವುದೇ ರೀತಿಯ ರಿಸ್ಕ್ ಇಲ್ಲದೆ ಸುರಕ್ಷಿತವಾಗಿ ಹೆಚ್ಚಳ ಮಾಡಿಕೊಳ್ಳುವ ಒಳ್ಳೆಯ ವಿಧಾನವೆಂದರೆ ಬ್ಯಾಂಕಿನಲ್ಲಿ ಇಡುವ FD ಎನ್ನಬಹುದು.
ಆದ್ದರಿಂದ ಬ್ಯಾಂಕಿನಲ್ಲಿ FD ಇಡುವವರಿಗಾಗಿ ಸಂತೋಷದ ಸುದ್ದಿಯೊಂದಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಬ್ಯಾಂಕ್ ಎಂದು ಹೆಸರು ಪಡೆದ ಕೆನರಾ ಬ್ಯಾಂಕ್ ಫಿಕ್ಸ್ ಡಿಪಾಸಿಟ್ ಬಡ್ಡಿದರದಲ್ಲಿ ಹೆಚ್ಚಳವನ್ನು ಮಾಡಿದೆ. ಈ ಬ್ಯಾಂಕು ತನ್ನ ಬಡ್ಡಿದರದಲ್ಲಿ 0.2 ಪ್ರತಿಶತ ಹೆಚ್ಚಳ ಮಾಡಿದೆ. ಯಾರು ಎರಡು ವರ್ಷಗಳಿಗಾಗಿ FD ಮಾಡುತ್ತಾರೋ ಅವರು ಈ ಲಾಭ ಪಡೆಯಬಹುದಾಗಿದೆ.
2 ವರ್ಷ ಮತ್ತು 3 ವರ್ಷಗಳಿಗಿಂತ ಕಡಿಮೆ ಮೆಚುರಿಟಿಯ FD ಮೇಲೆ ಮೊದಲು 5.4 ಪ್ರತಿಶತ ಬಡ್ಡಿ ದರ ದೊರೆಯುವುದು. ಅದಕ್ಕೂ ಮೊದಲು 5.2 ಪ್ರತಿಶತ ಬಡ್ಡಿ ದರ ದೊರೆಯುತ್ತಿತ್ತು. 3 ರಿಂದ 10 ವರ್ಷಗಳ ಮೆಚುರಿಟಿಯ FD ಮೇಲೆ 5.3 ಬಡ್ಡಿ ದರದಿಂದ 5.5 ಪ್ರತಿಶತ ಬಡ್ಡಿದರ ಹೆಚ್ಚಿಸಿದ್ದಾರೆ. ಹೀಗಾಗಿ ಇಲ್ಲಿಯೂ ಲಾಭ ಸಿಗಲಿದೆ.

ಖಾಸಗಿ HDFC ಬ್ಯಾಂಕಿನ ಗ್ರಾಹಕರಿಗೆ ಮಾತ್ರ ದೊಡ್ಡ ಪೆಟ್ಟು ಬಿದ್ದಿದೆ. ಈ ಬ್ಯಾಂಕು ಕೆಲವು ಕಾಲಾವಧಿಯ FD ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡಿದೆ. ಸದ್ಯ 0.20 ಪ್ರತಿಶತದ ಕಡಿತ ಮಾಡಿದೆ. ಹಾಗೂ ಎರಡು ವರ್ಷದ ಡಿಪಾಸಿಟ್ ಮೇಲೆ ಬ್ಯಾಂಕು 0.10 ಪ್ರತಿಶತ ಕಡಿಮೆಮಾಡಿದೆ.
ಇನ್ನೊಂದು ಸೌಲಭ್ಯದಲ್ಲಿ HDFC ಬ್ಯಾಂಕು 7 ರಿಂದ 29 ದಿನಗಳ ಡಿಪಾಸಿಟ್ ಮೇಲೆ 2.50 ಪ್ರತಿಶತ ಬಡ್ಡಿದರದ ಆಫರ್ ನೀಡುತ್ತಿದೆ. 30-90 ದಿನಗಳಲ್ಲಿ ಮ್ಯಾಚುಅರ್ ಆಗುವ ಡಿಪೋಸಿಟ್ ಮೇಲೆ ಈ ದರ 3 ಪ್ರತಿಶತವಿದೆ. ಆದ್ದರಿಂದ ಈ ಲಾಭ ಸರ್ವ ಸಾಮಾನ್ಯರಿಗೆ ಆಗಲಿದೆ.
ಬ್ಯಾಂಕಿನ ಸುಧಾರಿತ ಬಡ್ಡಿ ದರದಿಂದ ಹಿರಿಯ ನಾಗರಿಕರಿಗೆ ಅರ್ಧ ಪ್ರತಿಶತ ಬಡ್ಡಿ ಹೆಚ್ಚು ದೊರೆಯಲಿದೆ. ಬಡ್ಡಿದರದಲ್ಲಿ ಸುಧಾರಣೆಯಾದ ನಂತರ ಎರಡರಿಂದ ಹತ್ತು ವರ್ಷಗಳಲ್ಲಿ ಮೆಚುರಿಟಿ ಮುಗಿದ FD ಡಿಪಾಸಿಟ್ ಮೇಲೆ ಸಾರ್ವಜನಿಕ ಕ್ಷೇತ್ರದಲ್ಲಿಯ ಬ್ಯಾಂಕಗಳಲ್ಲಿ ಕೆನರಾ ಬ್ಯಾಂಕ್ ಹೆಚ್ಚು ಬಡ್ಡಿ ದರವನ್ನು ನೀಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಲಾಕ್ ಡೌನ್ ಕಾರಣದಿಂದ ಬ್ಯಾಂಕುಗಳು ಸಹಿತ ಅಂತ್ಯವಸ್ಥೆಗೆ ಬಂದಿದ್ದವು. ಆದರೂ ಕೆನರಾ ಬ್ಯಾಂಕ್ ನೀಡುತ್ತಿರುವ ಈ ಲಾಭ ಗ್ರಾಹಕರಿಗೆ ಒಳ್ಳೆಯದಾಗಿದೆ.