ಭರ್ಜರಿ ಟ್ರಿಕ್ಸ್! ಎದುರಿನವರಿಗೆ ಗೊತ್ತಾಗದ ಹಾಗೆ ರಹಸ್ಯವಾಗಿ ನೋಡಬಹುದು What’s app ಸ್ಟೇಟಸ್! ಹೇಗಾ? ಇಲ್ಲಿ ನೋಡಿ…

ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆಪ್ ಗಳಲ್ಲಿ ವಾಟ್ಸ್ ಆಪ್ ಕೂಡ ಒಂದಾಗಿದೆ. ಇಲ್ಲಿ ಫೋಟೋ, ವಿಡಿಯೋ ಮತ್ತು ಫೈಲ್ ಗಳನ್ನು ಶೇರ್ ಮಾಡುತ್ತಾ ಒಬ್ಬರಿಂದೊಬ್ಬರು ಕನೆಕ್ಟ್ ಆಗಿರಲು ಸಾಧ್ಯವಾಗುತ್ತದೆ. ಈ ಆಪ್ ನಲ್ಲಿ ಅನೇಕ ಫೀಚರ್ಸ್ ಗಳು ಇವೆ. ಇದರಲ್ಲಿರುವ ಸ್ಟೇಟಸ್ಗಳು 24 ಗಂಟೆಗಳಲ್ಲಿ ತನ್ನಂತಾನೆ ಮಾಯವಾಗಿಬಿಡುತ್ತವೆ. Viewing Option ಮುಖಾಂತರ ಸ್ಟೇಟಸ್ ಗಳನ್ನು ಯಾರು ಯಾರು ನೋಡಿದ್ದಾರೆ ಎಂಬುದು ನಮಗೆ ಗೊತ್ತಾಗುತ್ತದೆ. ಆದರೆ ನೀವು ಇನ್ನೊಬ್ಬರ ಸ್ಟೇಟಸ್ ಗಳನ್ನು ಕದ್ದುಮುಚ್ಚಿ ಅಥವಾ ರಹಸ್ಯವಾಗಿ ಎದುರಿನವರಿಗೆ ಗೊತ್ತಾಗದಂತೆ ನೋಡಲು ಸಾಧ್ಯವಿದೆ.

Facebook ಮಾಲೀಕತ್ವದ ಇನ್ಸ್ಟಂಟ್ ಮೆಸೇಜಿಂಗ್ ಆಪ್ ಇರುವ ವಾಟ್ಸಪ್ ನಲ್ಲಿ ರೀಡ್ ರಿಸೀಪ್ಟ್ಸ್ ಹೆಸರಿನ ಫೀಚರ್ ಇದೆ. ರೀಡ್ ರಿಸೀಪ್ಟ್ಸ್ ಫೀಚರ್ ಮುಖಾಂತರ ಎದುರಿನ ವ್ಯಕ್ತಿಗೆ ಮೆಸೇಜ್ ಮುಟ್ಟಿದೆಯೋ ಅಥವಾ ಇಲ್ಲ ಎಂಬುದು ನಮಗೆ ತಿಳಿಯುತ್ತದೆ. ಮೆಸೇಜ್ ಓದಿದ ನಂತರ ಬ್ಲೂ ಟಿಕ್ ಕಂಡುಬರುತ್ತದೆ. ಒಂದು ವೇಳೆ ನೀವು ಆಪ್ ‘Read Receipt’ ಫೀಚರ್ ಬಂದ್ ಮಾಡಿದರೆ ಎದುರಿನ ಯೂಜರ್ ಗೆ ನೀವು ಮೆಸೇಜ್ ಓದಿದ್ದೀರಾ ಅಥವಾ ಇಲ್ಲ ಮತ್ತು ಸ್ಟೇಟಸ್ ನೋಡಿದ್ದೀರಾ ಅಥವಾ ಇಲ್ಲವೆಂಬುದು ಗೊತ್ತಾಗುವುದೇ ಇಲ್ಲ.

ಕದ್ದು ಮುಚ್ಚಿ ಈ ರೀತಿಯಾಗಿ ನೋಡಿ WhatsApp Status…

ಇದಕ್ಕಾಗಿ ಮೊದಲು WhatsApp ಓಪನ್ ಮಾಡಿ. ಈಗ ಹೋಂಸ್ಕ್ರೀನ್ ಮೇಲಿನ ಎಡಬದಿಗೆ ಇರುವ 3 ಡಾಟ್ಸ್ ಗಳ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಿ. ಸೆಟ್ಟಿಂಗ್ಸ್ ನಲ್ಲಿ ಅಕೌಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ಪ್ರೈವಸಿ ಒಪ್ಷನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ Read Receipt ಫೀಚರ್ ಬಂದ್ ಮಾಡಿ. ರೀಡ್ ರಿಸೀಪ್ಟ್ಸ್ ಫೀಚರ್ ಬಂದ್ ಮಾಡಿದ ನಂತರ ನೀವು WhatsApp ಸ್ಟೇಟಸ್ ನೋಡಿದ್ದಿರಾ ಅಥವಾ ಇಲ್ಲ ಎಂಬುದು ಗೊತ್ತಾಗುವುದಿಲ್ಲ. ಆದರೆ ಅದರ ಜೊತೆಗೆ ನಿಮ್ಮ ಸ್ಟೇಟಸ್ ಸಹ ಯಾರ್ಯಾರು ನೋಡಿದ್ದಾರೆ ಎಂಬುದು ನಿಮಗೂ ಗೊತ್ತಾಗುವುದಿಲ್ಲ.

ಇತರ ಮಾಧ್ಯಮಗಳ ಮುಖಾಂತರವೂ ಸಹಿತ ಸ್ಟೇಟಸ್ ನ್ನು ಕದ್ದುಮುಚ್ಚಿ ನೋಡಬಹುದು. ಇದಕ್ಕಾಗಿ ಮೊಬೈಲ್ ಡೇಟಾ ಮತ್ತು ವೈಫೈ ಬಂದ್ ಮಾಡಿ. ಈ ಮುಖಾಂತರ ನೀವು ಸ್ಟೇಟಸ್ ನೋಡಬಹುದಾಗಿದೆ. ಆದರೆ ನೀವು ಆನ್ಲೈನ್ ಬಂದ ನಂತರ ಅವರಿಗೆ ನೀವು ಸ್ಟೇಟಸ್ ನೋಡಿರುವುದು ಗೊತ್ತಾಗುತ್ತದೆ.