ಭಾರತದಲ್ಲಿ ಬರೀ ಈ ನಾಲ್ಕೇ ವ್ಯಕ್ತಿಗಳ ಹತ್ತಿರ ಇವೆ Tesla ಕಂಪನಿಯ ಕಾರು! ಯಾರವರು? ನೋಡಿ.

ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಎಲೆನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಕಾರುಗಳ ಆಗಮನವನ್ನು ಭಾರತದಲ್ಲಿ ಅನೇಕ ದಿವಸಗಳಿಂದ ನಿರೀಕ್ಷಿಸಲಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ ರಿಜಿಸ್ಟರ್ ಮಾಡಿದ ನಂತರ ಟೆಸ್ಲಾ ಲಾಂಚ್ ಮಾಡುವ ದಿನಾಂಕ ಇನ್ನೂ ನಿಶ್ಚಿತವಾಗಿಲ್ಲ.

ಭಾರತಿಯರಲ್ಲಿ ಟೆಸ್ಲಾ ಕಾರನ್ನು ಇಷ್ಟಪಡುವ ಕೆಲವು ವ್ಯಕ್ತಿಗಳು ಈ ವಾಹನ ಭಾರತದಲ್ಲಿ ಲಾಂಚ್ ಮಾಡುವ ಪ್ರತೀಕ್ಷೆ ಮಾಡುತ್ತಾ ಕುಳಿತುಕೊಳ್ಳದೆ ವಿದೇಶದಿಂದ ಆಮದು ಮಾಡಿಕೊಂಡರು. ವಿಶೇಷವೆಂದರೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಗಣನೆಯಾಗುವ ಮುಕೇಶ್ ಅಂಬಾನಿ ಅವರು ಸಹ ಈ ಕಾರಿನ ಮೋಹದಲ್ಲಿ ಬಿದ್ದಿದ್ದಾರೆ.

ಸದ್ಯ ಭಾರತದಲ್ಲಿ ಬರೀ ನಾಲ್ಕು ಎಂದರೆ ನಾಲ್ಕೇ ಜನರ ಹತ್ತಿರ ಟೆಸ್ಲಾ ಕಂಪನಿಯ ಕಾರುಗಳಿವೆ. ಪ್ರತಿಯೊಬ್ಬರಿಗೂ ವಿದೇಶದಲ್ಲಿ ಕಾರು ಖರೀದಿಸಿದ ನಂತರ ಕೊಟ್ಯಾವಧಿ ರೂಪಾಯಿಗಳ ಇಂಪೋರ್ಟ್ ಟ್ಯಾಕ್ಸ್ ತುಂಬಲು ಸಾಧ್ಯವಿಲ್ಲ.

  • ಟೆಸ್ಲಾ ಕಾರು ಇರುವ ಆ ನಾಲ್ಕು ಪ್ರಸಿದ್ಧ ಭಾರತೀಯ ವ್ಯಕ್ತಿಗಳು ಯಾರು?

ಪ್ರಶಾಂತ್ ರುಯಿಯಾ – ಈ ಲಿಸ್ಟ್ ನಲ್ಲಿ ಪ್ರಶಾಂತ್ ರುಯಿಯಾ ಅವರ ಹೆಸರು ಮೊದಲು ಬರುತ್ತದೆ. ಎಸ್ಆರ್ ಗ್ರೂಪಿನ ಮಾಲೀಕರಾದ ಪ್ರಶಾಂತ್ ರುಯಿಯಾ ಅವರ ಹತ್ತಿರ ಟೆಸ್ಲಾ ಕಂಪನಿಯ ಕಾರಿದೆ. ಭಾರತದಲ್ಲಿ ಟೆಸ್ಲಾ ಕಾರು ಖರೀದಿಸಿದ ಮೊದಲ ಭಾರತೀಯರೆಂದರೆ ಪ್ರಶಾಂತ ರುಯಿಯಾ. ಇವರು 2017 ರಲ್ಲಿಯೇ ಟೆಸ್ಲಾ ಕಂಪನಿಯ ನೀಲಿಬಣ್ಣದ ಮಾಡೆಲ್ ಎಕ್ಸ್ ಕಾರು ಖರೀದಿಸಿದ್ದಾರೆ. ಇವರ ಈ ಎಲೆಕ್ಟ್ರಿಕ್ SUV ನಲ್ಲಿ ಎರಡು ಮೋಟಾರ್ ಗಳಿದ್ದು ಅದರಲ್ಲಿ 7 ಸೀಟುಗಳಿವೆ. ಈ ಕಾರು 4.8 ಸೆಕೆಂಡ್ಗಳಲ್ಲಿ 100 kmph ವೇಗ ತಲುಪುತ್ತದೆ.

ಮುಕೇಶ್ ಅಂಬಾನಿ:– ಮುಕೇಶ್ ಅಂಬಾನಿ ಅವರ ಹತ್ತಿರವೂ ಟೆಸ್ಲಾ ಕಂಪನಿಯ ಕಾರು ಒಂದಲ್ಲ ಎರಡು ಇವೆ. 2019 ರಲ್ಲಿ S100D ಟೆಸ್ಲಾದ ಮೊದಲ ಕಾರು ಖರೀದಿಸಿದ್ದರು. ನಂತರ X100D ಕಾರೊಂದನ್ನು ಖರೀದಿಸಿದರು. ಮೊದಲ ಮಾಡೆಲ್ ನ ಕಾರು ಸಂಪೂರ್ಣವಾಗಿ ಚಾರ್ಜ್ ಮಾಡಲಾಗಿ 495 ಕಿಲೋ ಮೀಟರ್ ಗಳ ಅಂತರ ಕ್ರಮಿಸಲು ಸಿದ್ಧವಾಗುತ್ತದೆ. ಈ ಕಾರಿನ ಟಾಪ್ ಸ್ಪೀಡ್ 249 ಕಿ. ಮೀ. ಪ್ರತಿ ಗಂಟೆ ಇದೆ. ಈ ಕಾರು 4.3 ಸೆಕೆಂಡಿನಲ್ಲಿ 0 ದಿಂದ 100 ಕಿ. ಮೀ. ಪ್ರತಿಗಂಟೆ ವೇಗ ಪಡೆದುಕೊಳ್ಳುತ್ತದೆ.

X100D ಈ ಬಿಳಿ ಬಣ್ಣದ ಕಾರು ರೋಡ್ ಮೇಲೆ ಆಗಾಗ ಕಂಡು ಬರುತ್ತದೆ. ಇದು ಸಹ ಸಂಪೂರ್ಣವಾಗಿ ಚಾರ್ಜ್ ಆದಾಗ 475 ಕಿ ಮೀ ಮೈಲೇಜ್ ನೀಡುತ್ತದೆ. 2.5 ಸೆಕೆಂಡಿನಲ್ಲಿಯೇ ಸೊನ್ನೆಯಿಂದ 100 ರಷ್ಟು ವೇಗ ಪಡೆಯುತ್ತದೆ.

ರಿತೇಶ್ ದೇಶಮುಖ್ – ಎರಡನೆಯದಾಗಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ಹತ್ತಿರ ಟೆಸ್ಲಾ ಕಂಪನಿಯ ಕಾರು ಇದೆ. ಈ ಕಾರು ರಿತೇಶ್ ಅವರಿಗೆ ಪತ್ನಿಯಾದ ಜೆನಿಲಿಯಾ ಅವರ ಕಡೆಯಿಂದ ಗಿಫ್ಟ್ ರೂಪದಲ್ಲಿ ದೊರಕಿದೆ. ರಿತೇಶ್ ದೇಶಮುಖ್ ಅವರ ಕಡೆಗೆ ಇರುವ ಈ ಕಾರಿನ ಬೆಲೆ 55 ಲಕ್ಷ ರೂಪಾಯಿಗಳು ಎಂದು ಹೇಳಲಾಗುತ್ತದೆ.

ಪೂಜ ಬತ್ರಾ – ಮಾಜಿ ಮಿಸ್ ಇಂಡಿಯಾ ಪೆಸಿಫಿಕ್ ವಿನ್ನರ್ ಪೂಜ ಬತ್ರಾ ಅವರ ಹೆಸರು ಸಹ ಇದರಲ್ಲಿ ಶಾಮೀಲಾಗಿದೆ. ಇವರ ಕಡೆ entry-level ಟೆಸ್ಲಾ ಮೊಡೆಲ್ 3 ಕಾರು ಇದೆ. ಬೇಸ್ ಮಾಡೆಲ್ ಇದ್ದರೂ ಸಹ ಈ ಕಾರು ಬರೀ 5 ಸೆಕೆಂಡುಗಳಲ್ಲಿ 100 ರ ಸ್ಪೀಡ್ ತೆಗೆದುಕೊಳ್ಳುತ್ತದೆ. ಇದರ ರೇಂಜ್ 386 ಕಿಲೋಮೀಟರ್ ಪ್ರತಿ ಗಂಟೆ ಇದ್ದು ಟಾಪ್ ಸ್ಪೀಡ್ 200 ಕಿಲೋಮೀಟರ್ ಪ್ರತಿ ಗಂಟೆಗೆ ಇದೆ.