ಭಾರತ-ಪಾಕಿಸ್ತಾನ ಪಂದ್ಯದ ದಿವಸ ಸಾನಿಯಾ ಮಿರ್ಜಾ ಮಾಡಿದ್ದಾರೆ ಈ ಪ್ಲಾನ್; ತೆಗೆದುಕೊಂಡರು ಈ ದೊಡ್ಡ ನಿರ್ಣಯ…..

ಮುಂಬರುವ t20 ವರ್ಲ್ಡ್ ಕಪ್ ಹೋರಾಟದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 24ರಂದು ಮುಖಾಮುಖಿಯಾಗಲಿವೆ. ಈ ಸ್ಪರ್ಧೆಯಲ್ಲಿಯ ಫಸ್ಟ್ ರೌಂಡ್ ಪಂದ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಅಕ್ಟೋಬರ್ 23 ರಿಂದ ಸೂಪರ್ 12 ಹಣಾಹಣಿ ನೋಡಲು ಕ್ರಿಕೆಟ್ ರಸಿಕರು ದಾರಿ ಕಾಯುತ್ತಿದ್ದಾರೆ. ಅಕ್ಟೋಬರ್ 24 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ದಿನ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಬೇರೆಯೇ ಪ್ಲಾನ್ ಮಾಡಿದ್ದಾರೆ. ಇವರು ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರನ್ನು ಮದುವೆಯಾದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಭಾರತ-ಪಾಕಿಸ್ತಾನ ಪಂದ್ಯದಂದು ಸಾನಿಯಾ ಯಾರಿಗೆ ಚಿಯರ್ ಮಾಡಲಿದ್ದಾರೆ ಎಂಬ ಉತ್ಸುಕತೆ ಪ್ರತಿ ಸಲದಂತೆ ಈ ಸಲವೂ ಇದೆ. ಆದರೆ ಸಾನಿಯಾ ಅವರ ಮನದಲ್ಲಿ ಮಾತ್ರ ಬೇರೆಯೇ ವಿಚಾರ ನಡೆದಿದೆ. ಇದೇ ಕಾರಣಕ್ಕಾಗಿ ಅವರು ಒಂದು ದೊಡ್ಡ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ಅವರು ಪ್ರತಿಸಲ ನೆಟ್ಟಿಗರ ರೋಷವನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಸಲ ಅವರಿಗೆ ತುಂಬಾ ಕೆಳದರ್ಜೆಯ ಶಬ್ದಗಳಿಂದ ದೂಷಿಸುತ್ತಾರೆ. ಇದೇ ಮನಸ್ತಾಪದಿಂದ ದೂರ ಉಳಿದುಕೊಳ್ಳಲು ಸಾನಿಯಾ ಮಿರ್ಜಾ ಅವರು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ದಿವಸ ಸೋಶಿಯಲ್ ಮೀಡಿಯಾದಿಂದಲೇ ಕಣ್ಮರೆಯಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಪೋಸ್ಟ್ ಬರೆದು ತಿಳಿಸಿದ್ದಾರೆ.