ಭ್ರಮೆಯ ಮಾಯಾಜಾಲ ಹರಡಿದ ಫೋಟೋ: ಹಿಮದ ಮೇಲೆ ಓಡುತ್ತಿರುವುದು ಮನುಷ್ಯನಾ ಅಥವಾ ಯಾವುದೋ ಪ್ರಾಣಿನಾ?

ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುವ ಫೋಟೋಗಳು ಜನರ ಮನಸ್ಸನ್ನು ಬಹುಬೇಗ ಸೆಳೆಯುತ್ತದೆ. ಅದರಲ್ಲೂ ಫೋಟೋ ಗಳಲ್ಲಿ ಏನಾದರೊಂದು ವಿಶೇಷ ಅಥವಾ ವೈವಿದ್ಯಮಯವಾಗಿತ್ತೆಂದರೆ ಬಹು ಬೇಗ ವೈರಲ್ ಆಗಿ ಬಿಡುತ್ತದೆ. ಇಂತಹುದೇ ಒಂದು ಭ್ರಮೆಯನ್ನು ಉಂಟು ಮಾಡುವ ಫೋಟೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಹೌದು ಇದೊಂದು ಭ್ರಮೆಯನ್ನುಂಟು ಮಾಡುವ ಫೋಟೋ ಏಕೆ ಎಂಬುದನ್ನು ನಾವು ಗಮನಿಸಿದಾಗ ತಿಳಿಯುತ್ತದೆ. ಆ ಭ್ರಮೆಯ ಕಾರಣದಿಂದಲೇ ಜನರು ಈ ಫೋಟೋದತ್ತ ತಮ್ಮ ಗಮನವನ್ನು ಹರಿಸುತ್ತಿದ್ದಾರೆ ಎನ್ನುವುದು ಕೂಡಾ ನಿಜ. ಈ ಫೋಟೋ ಏಕೆ ಇಷ್ಟೆಲ್ಲಾ ವೈರಲ್ ಆಗುತ್ತಿದೆ ಎಂದು ತಿಳಿಯಬೇಕಾದರೆ ನೀವು ಈ ವಿಷಯವನ್ನು ಸಂಪೂರ್ಣವಾಗಿ ತಿಳಿಯಲೇಬೇಕು. ಸುತ್ತಲೂ ಹಿಮದಿಂದ ಆವೃತ್ತವಾಗಿರುವ ಒಂದು ಪ್ರದೇಶದಲ್ಲಿನ ಫೋಟೋ ಒಂದು ಇಂಟೆರ್ನೆಟ್ ನಲ್ಲಿ ವೈರಲ್ ಆಗುತ್ತಾ ಸಾಗಿದ್ದು, ಈ ಫೋಟೋ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಈ ಫೋಟೋದಲ್ಲಿ ಪತ್ರಕರ್ತರೊಬ್ಬರು ನೋಡುಗರನ್ನು ಆಪ್ಟಿಕಲ್ ಮಾಯಾ ಜಾಲದಲ್ಲಿ ಸಿಲುಕುವಂತೆ ಮಾಡರುವುದೇ ಇದರ ಪ್ರಮುಖ ಆಕರ್ಷಣೆಯಾಗಿದೆ ಎಂದು ನಾವು ಹೇಳಬಹುದಾಗಿದೆ. ಇದೊಂದು ರೀತಿಯಲ್ಲಿ ಆಪ್ಟಿಕಲ್ ಭ್ರಮೆಯಲ್ಲಿ ಸಿಲುಕಿಸುವ ಫೋಟೋ ಎಂದರೂ ಕೂಡಾ ತಪ್ಪಾಗುವುದಿಲ್ಲ. ಈ ಫೋಟೋ ವನ್ನು ಪತ್ರಕರ್ತ ನಿಕೊಲಸ್ ಥಾಮ್ಸನ್ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಎಲ್ಲರೊಡನೆ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಮೊದಲು ನೋಡಿದಾಗ ವ್ಯಕ್ತಿಯೊಬ್ಬರು ಹಿಮ ಬಿದ್ದಿರುವ ಕಡೆ ಮಂಜಿನ ಮೇಲೆ ಓಡುತ್ತಿರುವ ಹಾಗೆ ಕಾಣುತ್ತದೆ. ಆದರೆ ನಿಜವಾಗಿಯೂ ಅಲ್ಲಿ ವ್ಯಕ್ತಿ ಓಡುತ್ತಿದ್ದಾನೆಯೆ? ಅಥವಾ ಇದೊಂದು ಭ್ರಮೆಯೋ? ಏನೋ ತಿಳಿಯೋಣ ಬನ್ನಿ.

ಫೋಟೋವನ್ನು ನಾವು ಗಮನಿಸಿದಾಗ ಒಂದು ಹಿಮಾವೃತ ಪ್ರದೇಶದಲ್ಲಿ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿರುವ ವ್ಯಕ್ತಿಯು ಮಂಜಿನ ಮೇಲೆ ಏರಿ ಹೋಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಆದರೆ ನಾವು ಈ ಚಿತ್ರವನ್ನು ಬಹಳ ಎಚ್ಚರಿಕೆಯಿಂದ ನೋಡಿದಾಗ ಇಷ್ಟು ಹೊತ್ತು ಕಂಡಿದ್ದ ದೃಶ್ಯಕ್ಕಿಂತ ಭಿನ್ನವಾದ ದೃಶ್ಯವು ಕಾಣಲು ಸಿಗುತ್ತದೆ. ಗಮನವಿಟ್ಟು ನೋಡಿದಾಗ ನಿಜಕ್ಕೂ ಪ್ರತಿಯೊಬ್ಬರೂ ಕೂಡಾ ಆಶ್ಚರ್ಯ ಪಡುವಂತಹ ಒಂದು ದೃಶ್ಯವು ಕಣ್ಮುಂದೆ ಬರುವುದು ಮಾತ್ರವೇ ಅಲ್ಲದೇ ಒಂದು ಕ್ಷಣ ನಮ್ಮ ಕಣ್ಣನ್ನು ನಾವೇ ನಂಬಲು ಸಾಧ್ಯವಾಗುವುದಿಲ್ಲ. ಹೌದು ಏಕೆಂದರೆ ನಾವು ಈ ಫೋಟೋವನ್ನು ಸರಿಯಾಗಿ ಗಮನಿಸಿ ನೋಡಿದಾಗ ಇಷ್ಟು ಹೊತ್ತು ನಾವು ನೋಡಿದ್ದು ನಮ್ಮ ಭ್ರಮೆಯಾ? ಎನಿಸಿಬಿಡುತ್ತದೆ.

ಹೌದು, ಗಮನವಿರಿಸಿ ನೋಡಿದಾಗ ನಮಗೆ ಈ ಫೋಟೋದಲ್ಲಿ ಮಂಜಿನ ಮೇಲೆ ನಡೆದು ಮೇಲೇರಿ ಹೋಗುತ್ತಿರುವುದು ಯಾವುದೇ ಮನುಷ್ಯನಲ್ಲ, ಬದಲಾಗಿ ಅದೊಂದು ಹಿಮ ಪ್ರಾಣಿಯೆಂದು. ಫೋಟೋ ವನ್ನು ಗಮನಿಸಿದ ನಂತರ ಬಹುಶಃ ಅದು ಹಿಮ ಪ್ರದೇಶಗಳಲ್ಲಿ ವಾಸಿಸುವ ಹಿಮಕರಡಿಯೋ ಅಥವಾ ನಾಯಿಯೋ ಆಗಿರಬಹುದು ಎನ್ನಲಾಗಿದೆ. ನಿಕೋಲಾಸ್ ಥಾಂಪ್ಸನ್ ಅವರು ಫೋಟೋವನ್ನು ಹಂಚಿಕೊಂಡು ಅದರ ಶೀರ್ಷಿಕೆಯಲ್ಲಿ, ಈ ರಾತ್ರಿಗಾಗಿ ಒಂದು ಆಪ್ಟಿಕಲ್ ಭ್ರಮೆ. ನೀವು ಮೊದಲ ಹಿಮದಲ್ಲಿ ಒಬ್ಬ ಮನುಷ್ಯನು ಓಡುತ್ತಿರುವುದನ್ನು ನೋಡುವಿರಿ, ಆದರೆ ಅನಂತರ?? ಎಂದು ಬರೆದುಕೊಂಡು ಚಿತ್ರವನ್ನು ಗಮನವಿಟ್ಟು ನೋಡುವಂತೆ ಸೂಚನೆಯನ್ನು ನೀಡುತ್ತಿದ್ದಾರೆ.‌

ಸೋಶಿಯಲ್ ಮೀಡಿಯಾದಲ್ಲಿ ನಿಕೊಲಸ್ ಥಾಂಪ್ಸನ್ ಅವರು ಹಂಚಿಕೊಂಡಿರುವ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಆಪ್ಟಿಕಲ್ ಭ್ರಮೆಯನ್ನು ಉಂಟು ಮಾಡುವ ಈ ವಿಶೇಷವಾದ ಫೋಟೋವನ್ನು ಈಗಾಗಲೇ ಎರಡು ಲಕ್ಷಕ್ಕಿಂತ ಜನರು ನೋಡಿದ್ದಾರೆ ಹಾಗೂ ಲೈಕ್ ಗಳನ್ನು ನೀಡಿದ್ದಾರೆ. ಅಲ್ಲದೇ 28 ಸಾವಿರಕ್ಕಿಂತ ಅಧಿಕ ಮಂದಿ ಈ ಅದ್ಭುತ ಎನಿಸುವ ಫೋಟೋವನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ಈ ವೈರಲ್ ಫೋಟೋ ವನ್ನು ನೋಡಿದ ನೆಟ್ಟಿಗರು ಕೂಡಾ ವೈವಿದ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದು ಕೂಡಾ ಜನರನ್ನು ಈ ಫೋಟೋ ಎಷ್ಟು ಸೆಳೆದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.