ಮಗ ತಂದೆಯ ಹೆಸರು ಕೇಳಿದಾಗ ಶಾಕಿಂಗ್ ಸತ್ಯ ಬಹಿರಂಗ ಪಡಿಸಿದ ತಾಯಿ; 27 ವರ್ಷದ ನಂತರ ಕೇಸ್ ದಾಖಲು ಮಾಡಿದರು!
ಈಗಿನ ಕಾಲದಲ್ಲಿ ಯಾವುದೇ ಹಂತದಲ್ಲಿ ಬಹಳೇ ಜಾಗರೂಕವಾಗಿ ಇರಬೇಕಾಗಿದೆ. ಕಾರಣ ಎಂದೋ ಮಾಡಿದ ತಪ್ಪಿಗೆ 27 ವರ್ಷಗಳು ಸರಿದು ಹೋದ ಮೇಲೆ ಒಬ್ಬ ವ್ಯಕ್ತಿಯ ವಿರುದ್ಧ ನೋಡಿ ಈಗ ಕೇಸು ದಾಖಲಾಗಿದೆ.
ವಿಸ್ತೃತ ವರದಿಯ ಪ್ರಕಾರ, ಯೂಪಿಯ ಶಹಾಜನಪೂರ್ ನಲ್ಲಿ ನಡೆದ ಘಟನೆ ಇದೆ. ಇಲ್ಲಿ ಒಬ್ಬ ಮಗನು ತಾಯಿಗೆ ತನ್ನ ತಂದೆ ಯಾರು ಎಂದು ಕೇಳಿದ್ದಾನೆ. ಆಗ ಆ ತಾಯಿಯು 27 ವರ್ಷಗಳ ಹಿಂದೆ ತನ್ನ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ ವ್ಯಕ್ತಿಯ ಮೇಲೆ ಕೇಸು ದಾಖಲಿಸಿದ್ದಾಳೆ.
ಈ ಮಹಿಳೆ 12 ವರ್ಷದವಳಿದ್ದಾಗ ಶಹಾಜಾನಪೂರ್ ನಲ್ಲಿ ತನ್ನ ಅಕ್ಕ ಮತ್ತು ಸೋದರಮಾವನೊಂದಿಗೆ ಇರುತ್ತಿದ್ದಳು. ಆಗ ಈಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ನಾಕಿ ಹಸನ್ ಹೆಸರಿನ ವ್ಯಕ್ತಿ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ಅತ್ಯಾ ಚಾರ ಎಸಗಿದ್ದಾನೆ ಎಂದು ಅಲ್ಲಿಯ ಪೊಲೀಸ್ ರಿಪೋರ್ಟ್ ಹೇಳುತ್ತಿದೆ.
ಈಗ ಈ ಮಹಿಳೆ ಮಾಡಿದ ತಕರಾರಿನ ಪ್ರಕಾರ ಆತನ ಸೋದರ ಗುಡ್ಡು ಸಹ ಆಕೆಯ ಮೇಲೆ ಅತ್ಯಾ ಚಾರ ಎಸಗಿದನು. ಈ ರೀತಿ ಆಕೆ 13 ವರ್ಷದವಳಾಗುವ ವರೆಗೆ ನಡೆದೇ ಇತ್ತು. ಅದೇ ಹೊತ್ತಿಗೆ ಆಕೆ ಗರ್ಭ ಧರಿಸಿದಳು. ಮುಂದೆ 1994 ರಲ್ಲಿ ತನ್ನ ಹಸುಗೂಸನ್ನು ಉಧಮಪೂರ್ ನಲ್ಲಿರುವ ಪರಿಚಿತರ ಮನೆಯಲ್ಲಿ ಬಿಟ್ಟು ಬಂದರು. ಆದಾದ ಮೇಲೆ ಮಾವನ ಟ್ರಾನ್ಸಫರ್ ರಾಮಪೂರಗೆ ಆಯಿತು. ಎಲ್ಲರೂ ವಾಸ್ತವ್ಯಕ್ಕೆ ಅಲ್ಲಿಗೆ ಹೋದರು

ಮುಂದೆ ಸೋದರಮಾವನು ಆಕೆಯ ಮದುವೆಯನ್ನು ಗಾಜೀಪೂರ್ ನಲ್ಲಿರುವ ವ್ಯಕ್ತಿಯ ಜೊತೆಗೆ ಮಾಡಿಕೊಟ್ಟನು. ಆಕೆಯ ಮೇಲೆ ಬಲಾ ತ್ಕಾರ ವಾಗಿದ್ದನ್ನು ತಿಳಿದ ಮೇಲೆ ಆತ ಆಕೆಯನ್ನು ವಿ ಚ್ಛೇದನ ನೀಡಿದನು. ಈ ಕಾರಣದಿಂದ ಆಕೆ ಮತ್ತೆ ಮರಳಿ ಉಧಮಪೂರ್ ಗೆ ಬಂದಳು.
ಏತನ್ಮಧ್ಯೆ ಆಕೆಯ ಮಗು ದೊಡ್ಡದಾಗಿ ತನ್ನ ತಾಯಿ ಮತ್ತು ತಂದೆಯ ಬಗ್ಗೆ ಕೇಳಲು ಶುರು ಮಾಡಿದ. ಆಗ ಆತನನ್ನು ಸಾಕಿದವರು ತಾಯಿಯ ಹೆಸರು ಹೇಳಿದರು. ಮಗ ತನ್ನ ತಾಯಿಗೆ ಮೊದಲು ಭೇಟಿಯಾದ. ಆನಂತರ ಆಕೆಯ ತಕರಾರಿನ ಮೇರೆಗೆ ಪೊಲೀಸ್ ಸ್ಟೇಶನ್ ನಲ್ಲಿ ನಾಕಿ ಹಸನ್ ವಿರುದ್ಧ ಕೇಸು ದಾಖಲಿಸಲಾಯಿತು.
ಈಗ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಶುರು ಮಾಡಿದ್ದಾರೆ. ಇದರಲ್ಲಿ ಮಗನ DNA ಟೆಸ್ಟ್ ಮಾಡಲಾಗುವದೆಂದು ಪೊಲೀಸರು ಹೇಳಿದ್ದಾರೆ. ಮೊದಮೊದಲು ಪೊಲೀಸರು ಈ ಕೇಸ್ ದಾಖಲಿಸಿ ಕೊಳ್ಳಲು ನಿರಾಕರಿಸುತ್ತಿದ್ದರು. ಆಮೇಲೆ ಮಹಿಳೆ ಕೋರ್ಟಿನ ಮೆಟ್ಟಲೇರಿದಾಗ ಮಾತ್ರ ಈ ಪ್ರಕರಣವನ್ನು ದಾಖಲು ಮಾಡಿಕೊಂಡರು.