ಮಗ IAS ಆದರೂ ಬಳೆ ಮಾರುತ್ತಿರುವ ತಾಯಿ! ಯಾಕೆಂದು ಕೇಳಿದರೆ ಅಂತಾಳೆ ‘ಇದೆ ಹಣದಿಂದ ಮಗನನ್ನು ಕಲೆಕ್ಟರ್ ಮಾಡಿದ್ದೇನೆ!’
ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಮಹಾಗಾಂವ್ ಊರಿನಲ್ಲಿ ಜನ್ಮಿಸಿದ ರಮೇಶ್ ಘೋಲಪ್ ಇವರು ಬಡತನದಲ್ಲಿ ಬೆಂದು ಕಷ್ಟವನ್ನು ಸಹಿಸಿ ಮೇಲೆ ಬಂದು ಇಂದು IAS ಆಫೀಸರ್ ಆಗಿದ್ದಾರೆ.
ಪರಿಸ್ಥಿತಿ ಹೇಗೆ ಇರಲಿ, ಅವುಗಳನ್ನು ಕಡೆಗಣಿಸಿ ತಮ್ಮ ಹತ್ತಿರವಿದ್ದ ಸಂಪನ್ಮೂಲಗಳಲ್ಲೇ ಹೊಸ ಮಾರ್ಗವನ್ನು ಹುಡುಕಿ ಮುಂದೆ ಸಾಗಿ ಇನ್ನೊಬ್ಬರಿಗೆ ದಾರಿದೀಪವಾಗುವನೇ ಜೀವನದಲ್ಲಿ ಯಶಸ್ಸನ್ನು ಸಾಧಿಸುವನು.

ತಾಯಿ ಮನೆಯನ್ನು ನಡೆಸಲಿಕ್ಕಾಗಿ ಊರೂರು ಸುತ್ತಿ ಬಳೆಗಳನ್ನು ಮಾರುತ್ತಿದ್ದಳು. ಹೀಗಾಗಿ ಜೀವನವೆಂದರೆ ಏನು? ಕಷ್ಟವೆಂದರೆ ಏನು? ಇವೆಲ್ಲವನ್ನೂ ರಮೇಶ್ ಅವರು ಚಿಕ್ಕಂದಿನಿಂದಲೇ ತಿಳಿದುಕೊಂಡು ಬಂದರು.
10 ವರ್ಷದವರಿಂದಲೇ ತಾಯಿಯ ಕೆಲಸದಲ್ಲಿ ಸಹಾಯ ಮಾಡುತ್ತ ತಾಯಿಯ ಜೊತೆಗೆ ಕಷ್ಟಗಳನ್ನು ಅನುಭವಿಸಿದವರು ರಮೇಶ್.

ಬಳೆಗಳನ್ನು ಮಾರಿ ಬಂದ ಹಣ ಸ್ವಲ್ಪ ಉಳಿತಾಯವಾಗಿದೆ ಎನ್ನುವಷ್ಟರಲ್ಲಿ ಆ ದುಡ್ಡು ಮನೆಯ ಖರ್ಚಿಗೆ ಮತ್ತು ತಂದೆ ಮಾಡುವ ನಶೆಗೆ ಇಲ್ಲವಾಗಿ ಬಿಡುತ್ತಿದ್ದವು.
ದಿನಪೂರ್ತಿ ಊರೂರು ಅಲೆದು ಕೂಡಿ ಹಾಕಿದ ಹಣವು ಈ ರೀತಿ ಒಂದೇ ಗಳಿಗೆಯಲ್ಲಿ ಹಾಳಾಗಿ ಹೋಗುವದನ್ನು ರಮೇಶ್ ರಿಗೆ ಕಣ್ಣಿನಿಂದ ನೋಡಲಾಗುತ್ತಿರಲಿಲ್ಲ.
ಇನ್ನೇನು SSLC ಎಕ್ಜಾಮ್ ಸಮೀಪ ಬಂದಿದೆ ಎನ್ನುವಷ್ಟರಲ್ಲಿ ಒಂದು ತಿಂಗಳ ಮುಂಚೆ ರಮೇಶ್ ಅವರ ತಂದೆಯ ನಿಧನವಾಯಿತು. ಆದರೂ ತನ್ನ ದುಃಖವನ್ನು ಹತೋಟಿಯಲ್ಲಿಟ್ಟು ಎಕ್ಜಾಮ್ ಬರೆದು 88.50 ಪ್ರತಿಶತ ಮಾರ್ಕ್ಸ್ ಗಳನ್ನು ಪಡೆದು ತಾಯಿಗೆ ಖುಷಿ ತಂದುಕೊಟ್ಟರು.
ರಮೇಶ್ ಅವರು ಮುಂದಿನ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಆದರೆ ಮುಂದಿನ ದಾರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಪ್ರಾಮುಖ್ಯವಾಗಿ ಹಣದ ಅವಶ್ಯಕತೆ.

ಇತ್ತ ತಾಯಿ ಮಗನಿಗಾಗಿ ಯಾವುದೋ ಒಂದು ಸರಕಾರದ ಯೋಜನೆಯ ಅಡಿಯಲ್ಲಿ 18 ಸಾವಿರ ರೂಪಾಯಿಗಳನ್ನು ಸಾಲ ಮಾಡಿ ಹೊಂದಿಸಿದಳು. ಅತ್ತ ಮಗ ದಿನಬೆಳಿಗ್ಗೆ ದಾರಿಯಲ್ಲಿ ವಿವಿಧ ರೀತಿಯ add. ಚೀಟಿಗಳನ್ನು ಹಂಚಿ ಮತ್ತು ಗೋಡೆಯ ಮೇಲೆ ಪೇಂಟಿಂಗ್ ಮಾಡುತ್ತಿದ್ದರು. ರಮೇಶ್ ಅವರು ಹಣಗಳಿಸುವ ಯಾವುದೇ ಮಾರ್ಗವನ್ನು ಬಿಡುತ್ತಿರಲಿಲ್ಲ. ರಾತ್ರಿ ಮಾತ್ರ IAS ಸ್ಟಡಿಗೆ ಮೀಸಲಿಡುತ್ತಿದ್ದರು.
ಮೊದಮೊದಲು ರಮೇಶ್ ಅವರು ಇದರಲ್ಲಿ ಯಶಸ್ಸು ಕಾಣಲಿಲ್ಲ, ನಂತರ ಮಾತ್ರ 2011 ರಲ್ಲಿ ಜಿದ್ದು ಬಿಡದೆ ಯಶಸ್ಸಿನ ಬೆನ್ನು ಹತ್ತಿಯೇ ಬಿಟ್ಟರು. ತನ್ನಲ್ಲಿದ್ದ ಕೌಶಲ್ಯವನ್ನು ಮಹಾರಾಷ್ಟ್ರದ ಜೊತೆಗೆ ಇಡೀ ದೇಶಕ್ಕೆ ಪರಿಚಯ ಮಾಡಿ ಕೊಟ್ಟರು.

ಸದ್ಯಕ್ಕೆ ಝಾರಖಂಡ್ ದ ಕೊಡರಮಾ ಜಿಲ್ಲೆಯಲ್ಲಿ ಕಲೆಕ್ಟರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಿವಿಧ ಸುದ್ದಿಗಳು ವರ್ತಮಾನ ಪತ್ರದಲ್ಲಿ ಮತ್ತು ಸೋಶಿಯಲ್ ಮಿಡಿಯಾದಲ್ಲಿ ಬರಲು ಆರಂಭಿಸಿದಾಗ ಅವುಗಳನ್ನು ನೋಡಿ ಸ್ವತಃ ರಮೇಶ್ ಘೋಲಪ್ ಅವರೇ ಒಂದು ಟ್ವೀಟ್ ಮಾಡಿ ಹೇಳಿದ್ದಾರೆ, ‘ನಾನು IAS ಆಗಿ 9 ವರ್ಷಗಳೇ ಆಗಿವೆ, ತಾಯಿ ಇನ್ನುವರೆಗೆ ಬಳೆಗಳನ್ನು ಮಾರುತ್ತಾಳೆ ಯಾಕೆ ಅಂತ ಕೇಳಿದರೆ ಹೇಳ್ತಾಳೆ, ಈ ಬಳೆಗಳಿಂದ ಬಂದ ಹಣದಿಂದಲೇ ನೀನು IAS ಆಗಿರುವೆ ಮಗ, ಅಂತ’. ಎಲ್ಲಿಯವರೆಗೆ ನನ್ನ ಕೈ ಕಾಲುಗಳು ಗಟ್ಟಿಯಾಗಿರುತ್ತವೆ ಅಲ್ಲಿಯವರೆಗೆ ನಾನು ಈ ಕೆಲಸ ಬಿಡುವದಿಲ್ಲ, ಸಂಕಟ ಸಮಯದಲ್ಲಿ ಯಾರು ನಮ್ಮ ಕೈ ಹಿಡಿದಿರುತ್ತಾರೆ ಅವರನ್ನು ಯಾವತ್ತೂ ಸ್ಮರಿಸುತ್ತಲೇ ಇರಬೇಕು ಅಂತ ರಮೇಶ್ ಅವರ ತಾಯಿ ಹೇಳುತ್ತಾರೆ.

ರಮೇಶ್ ಘೋಲಪ್ ಅವರಿಂದ ಹಾಗೂ, ತಾಯಿಯು ಮಾಡುವ ಚಿಕಪುಟ್ಟ ಸಹಾಯದಿಂದ ಮತ್ತು ಅವರ ಸರಳತೆಯ ಜೀವನದಿಂದ ಊರಿನಲ್ಲಿ ರಮೇಶ್ ಅವರ ತಾಯಿಯ ಸನ್ಮಾನ ಮತ್ತಷ್ಟು ಹೆಚ್ಚಾಗಿದೆ. ರಮೇಶ್ ಅವರ ತಾಯಿ ಇನ್ನು ತನ್ನೂರಲ್ಲಿಯೇ ಸರಳತೆಯ ಜೀವನ ನಡೆಸುತ್ತಿದ್ದಾರೆ.