Articles

ಈ ಅಕ್ಕ ಒಂದು ಪ್ರಶ್ನೆ ಕೇಳಿದ್ದಾಳೆ, ನೀವು ಬುದ್ಧಿವಂತರಾಗಿದ್ದರೆ ಈ ಅಕ್ಕನ ಪ್ರಶ್ನೆಗೆ ಉತ್ತರ ಹೇಳಿ ನೋಡೋಣ!

ಕಲೆ ಯಾರ ಸ್ವತ್ತೂ ಇಲ್ಲ. ಒಂದು ವೇಳೆ ನಿಮ್ಮಲ್ಲಿ ಅದ್ಭುತವಾದ ಕಲೆ ಏನಾದರೂ ಇದ್ದರೆ ಸಾಕು ಸೋಶಿಯಲ್ ಮೀಡಿಯಾ ಮುಖಾಂತರ ಕ್ಷಣದಲ್ಲೇ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಅದಕ್ಕೆ ಕಾರಣ ಇಂಟರ್ನೆಟ್ ಜಗತ್ತಿನಲ್ಲಿರುವ ವಿವಿಧ ಪ್ಲಾಟ್ ಫಾರ್ಮ್ ಗಳು. ಇಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ. ಇದರಿಂದಲೇ ಅನೇಕರು ಯಾವುದೇ ರೀತಿಯ ಗಾಡ್ ಫಾದರ್ ಇಲ್ಲದೆ ಫೋಕಸ್ ನಲ್ಲಿ ಬಂದಿದ್ದಾರೆ. ಅದರಲ್ಲೂ ಇರುವ ಅನೇಕ ಕಲೆಗಳಲ್ಲಿ ನಿಮಗೆ ಡಾನ್ಸ್ ಬರುತ್ತಿದ್ದರೆ ನೀವು ಬಹುಬೇಗ ಫೇಮಸ್ ಆಗುತ್ತೀರಿ. ಕಾರಣ ಸೋಶಿಯಲ್ ಮೀಡಿಯಾದಲ್ಲಿ ನೃತ್ಯವನ್ನು ತುಂಬಾ ಇಷ್ಟಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಮಾಡಿದ ತುಂಬಾ ಸಿಂಪಲ್ ಡ್ಯಾನ್ಸ್ ಫುಲ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.

ಇಂದಿನ ಯುವಪೀಳಿಗೆ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಬುದ್ಧಿ ತುಂಬಾನೇ ಸ್ಪೀಡ್ ಆಗಿ ಬೆಳೆಯುತ್ತಿದೆ. ಅಲ್ಲದೆ ಮೊಬೈಲ್ ಹಾಗೂ ಅಂತರಜಾಲದ ಸಹಾಯದಿಂದ ಪ್ರತಿಯೊಬ್ಬರೂ ತಮಗೆ ಗೊತ್ತಿರದ ವಿಷಯದ ಬಗ್ಗೆ ಕೆಲ ಸೆಕೆಂಡಗಳಲ್ಲೇ ಮಾಹಿತಿ ಪಡೆದುಕೊಳ್ಳುವರು. ಮೊಬೈಲ್ ಹೊಂದಿದ ಪ್ರತಿ ವ್ಯಕ್ತಿ ತಾನು ಸಹ ಏನಾದರೂ ಮಾಡಿ ಎಲ್ಲೆಡೆಗೆ ಹೆಸರು ಗಳಿಸಬೇಕು ಅನ್ನೋ ಉದ್ದೇಶದಿಂದ ವಿವಿಧ ಪ್ರಕಾರದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಡುತ್ತಾರೆ. ಯಾರ ಅದೃಷ್ಟ ಮತ್ತು ವಿಡಿಯೋದಲ್ಲಿಯ ಕಂಟೆಂಟ್ ಸೂಪರ್ ಆಗಿರುತ್ತದೆಯೋ ಅವರು ರಾತ್ರೋ ರಾತ್ರಿ ಫೇಮಸ್ ಆಗಿ ಬಿಡುತ್ತಾರೆ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಬ್ಬ ಅಕ್ಕನ ವೀಡಿಯೋ ತುಂಬಾನೆ ವೈರಲ್ ಆಗುತ್ತಿದೆ ಏಕೆಂದರೆ ಈ ವೀಡಿಯೋದಲ್ಲಿ ಅಕ್ಕ ನೇರವಾಗಿ ನೆಟ್ಟಿಗರಿಗೆ ಒಂದು ಸವಾಲ್ ಹಾಕಿದ್ದಾಳೆ, ಸವಾಲ್ ಕೇಳಿ ಅದರ ಉತ್ತರ ಗೊತ್ತಿರುವವರು ಕಾಮೆಂಟ್ ಮಾಡಿ ತಿಳಿಸಿ ಎಂದು ಸಹ ಹೇಳಿದ್ದಾಳೆ. ಆಕೆ ಕೇಳಿರುವ ಪ್ರಶ್ನೆ ಎಂದರೆ’ ರಾಜಾ ರಾಣಿ ಇರುತ್ತಾರೆ ಆದರೆ ಅದು ರಾಜ್ಯವಲ್ಲ, ಹೂಬಳ್ಳಿ ಇರುತ್ತೆ ಆದರೆ ಅದು ತೋಟವಲ್ಲ, ಅಕ್ಷರಗಳಿರುತ್ತೆ ಆದರೆ ಅದು ಪುಸ್ತಕವಲ್ಲ ಹಾಗಾದರೆ ಏನದು?’ ಅಂತ ಪ್ರಶ್ನೆ ಕೇಳಿದ್ದಾಳೆ. ನಮಗೆ ಗೊತ್ತು ನೀವು ತುಂಬಾನೇ ಬುದ್ಧಿವಂತರು ಅಂತ ಹಾಗಿದ್ದರೆ ಈ ಪ್ರಶ್ನೆಯ ಗೊತ್ತಾದ್ರೆ ಕಾಮೆಂಟ್ ಮಾಡಿ ತಿಳಿಸಿ.

ವೀಡಿಯೋ ನೋಡಿ.

 

View this post on Instagram

 

A post shared by Namma_uk_Troll (@namma_uk_troll)

ಪ್ರಸ್ತುತ ಈ ಅಕ್ಕನ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಕನ್ನಡ ಯುಕೆ ಟ್ರೋಲ್ ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ ಅಲ್ಲದೆ ಒಂದು ಲಕ್ಷ ಐವತ್ತೇಳು ಸಾವಿರ ಲೈಕ್ ಸಹ ಪಡೆದಿದೆ

Leave a Comment

Your email address will not be published. Required fields are marked *