ಮದುವೆಯಾಗದೆ ತಂದೆಯಾದರು ಈ 6 ಸ್ಟಾರ್ ಕ್ರಿಕೆಟರ್ಸ್ ಗಳು. ಈ ಲಿಸ್ಟ್ ನಲ್ಲಿವೆ ಅಚ್ಚರಿ ಪಡುವಂತಹ ಹೆಸರು…

ಕ್ರಿಕೆಟ್ ಜಗತ್ತಿನಲ್ಲಿಯ ಈ 6 ಆಟಗಾರರು ಪ್ರೀತಿಯಲ್ಲಿ ಬಿದ್ದು ಮದುವೆಗೆ ಮೊದಲೇ ತಂದೆಯಾಗುವ ಸಂತೋಷವನ್ನು ಪಡೆದಿದ್ದಾರೆ. ಇವರು ಮದುವೆಗೂ ಮೊದಲು ತಮ್ಮ ಗರ್ಲ್ಫ್ರೆಂಡ್ ಜೊತೆಗೆ ರಿಲೇಶನ್ ನಲ್ಲಿ ಇದ್ದು ತಂದೆಯಾಗಿದ್ದಾರೆ. ಇಂಥ ಕ್ರಿಕೆಟಿಗರ ಲಿಸ್ಟ್ ನಲ್ಲಿ ಒಬ್ಬ ಭಾರತೀಯನೂ ಸಹ ಶಾಮೀಲಾಗಿದ್ದಾನೆ. ಮದುವೆಗೂ ಮೊದಲು ತಂದೆಯಾದ ಕ್ರಿಕೆಟರ್ ಗಳ ಲಿಸ್ಟ್ ಈ ಕೆಳಗಿನಂತಿದೆ.

  1. ಹಾರ್ದಿಕ್ ಪಾಂಡ್ಯ :-

ಹಾರ್ದಿಕ್ ಪಾಂಡ್ಯ ವರು ಒಂದು ಆಲ್ರೌಂಡರ್ ರಾಗಿ ಭಾರತೀಯ ತಂಡದ ಸದಸ್ಯರಾಗಿದ್ದಾರೆ. ಇವರು 1 ಜನವರಿ 2020 ರಂದು ಬಾಲಿವುಡ್ ಆಕ್ಟ್ರೆಸ್ ನತಾಶ ಸ್ಟೇನ್ ಕೋವಿಕ್ ಜೊತೆಗೆ ದುಬೈನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡರು. ಮುಂದೆ 30 ಜುಲೈ 2020ರಲ್ಲಿ ತಮ್ಮ ಗರ್ಲ್ ಫ್ರೆಂಡ್ ಪ್ರೆಗ್ನೆಂಟ್ ಇದ್ದಾಳೆಂದೂ ಮತ್ತು ಶೀಘ್ರದಲ್ಲಿಯೇ ತಾನು ತಂದೆಯಾಗಲಿದ್ದೇನೆಂದು ಹೇಳಿದರು. ಹಾರ್ದಿಕ ಅವರು ತಮ್ಮ ಮಗನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಿದರು.

  1. ಜೋ ರೂಟ್:-

ಇಂಗ್ಲೆಂಡ್ ತಂಡದ ನಾಯಕರಾದ ಜೋ ರೂಟ್ ಸಹ ಈ ಲಿಸ್ಟ್ ನಲ್ಲಿ ಬರುತ್ತಾರೆ. ಇವರು ಸಹ ಮದುವೆಯಾಗದೆ ತಂದೆಯಾಗಿದ್ದಾರೆ. 2014ರಲ್ಲಿ ತಮ್ಮ ಗರ್ಲ್ಫ್ರೆಂಡ್ ಕ್ಯಾರಿ ಕಾರ್ಟೆಲ್ ಜೊತೆಗೆ ಡೇಟ್ ಮಾಡುತ್ತಿದ್ದರು. ಇವರಿಬ್ಬರು 2016 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದೆ ಮದುವೆಗೂ ಮೊದಲೇ ಅಂದರೆ 7 ಜನೆವರಿ 2017 ರಲ್ಲಿ ರೂಟ್ ಅವರ ಮಗ ಆಲ್ಫ್ರೆಡ್ ನ ಜನ್ಮವಾಯಿತು. ತದನಂತರ ಇಬ್ಬರು ಮದುವೆ ಮಾಡಿಕೊಂಡರು.

  1. ಡೇವಿಡ್ ವಾರ್ನರ್:-

ಆಸ್ಟ್ರೇಲಿಯಾದ ಈ ಸ್ಟಾರ್ ಓಪನರ್ ಆಟಗಾರ ಡೇವಿಡ್ ವಾರ್ನರ್ ಅವರು ಸಹ ಮದುವೆಗೆ ಮೊದಲೇ ತಂದೆಯಾಗಿದ್ದಾರೆ. 2014ರಲ್ಲಿ ಡೇವಿಡ್ ವಾರ್ನರ್ ಅವರ ಗರ್ಲ್ಫ್ರೆಂಡ್ ಕ್ಯಾಂಡೀಸ್ ಮಗಳಿಗೆ ಜನ್ಮ ನೀಡಿದಳು. ನಂತರ 2015ರಲ್ಲಿ ವಾರ್ನರ್ ಅವರು ಕ್ಯಾಂಡಿಸ್ ಜೊತೆಗೆ ಮದುವೆಯಾದರು. ವಾರ್ನರ್ ಮತ್ತು ಕ್ಯಾಂಡಿಸ್ ಜೋಡಿಗೆ ಈಗ ಇವಿ, ಇಂಡಿ ಮತ್ತು ಇಸ್ಲಾ ಹೆಸರಿನ ಮೂರು ಹುಡುಗಿಯರಿದ್ದಾರೆ.

  1. ಇಮ್ರಾನ್ ಖಾನ್:-

ಪಾಕಿಸ್ತಾನದ ಮಾಜಿ ನಾಯಕ ಮತ್ತು ಈಗಿನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರು ಸಹ ಮದುವೆಯಾಗುವ ಮೊದಲೆ ತಂದೆಯಾಗಿದ್ದಾರೆ. ಇಮ್ರಾನ್ ಖಾನ್ ಅವರ ಸಂಬಂಧ ಸೀಟಾ ವೈಟ್ ಜೊತೆಗೆ ಇತ್ತು. ಇಬ್ಬರು 87-88 ರಲ್ಲಿ ಸನಿಹ ಬಂದಿದ್ದರು. ತದನಂತರ 92ರಲ್ಲಿ ಸಿಟಾ ಒಂದು ಮಗುವಿಗೆ ಜನ್ಮ ನೀಡಿದರು. ಮೊದಮೊದಲು ಇಮ್ರಾನ್ ಖಾನ್ ಅವರು ಈ ಮಗು ತನ್ನದಲ್ಲವೆಂದು ವಾದ ಮಾಡಿದರು. ಆಮೇಲೆ ಡಿಎನ್ಎ ಟೆಸ್ಟ್ ಮುಖಾಂತರ ಆ ಮಗು ಇಮ್ರಾನ್ ಖಾನ್ ಅವರ ಮಗುವೆ ಆಗಿದೆಯೆಂದು ಸಾಬೀತಾಯಿತು.

  1. ವಿವಿಯನ್ ರಿಚರ್ಡ್ಸ್:-

1980 ರಲ್ಲಿ ಭಾರತ ಪ್ರವಾಸಕ್ಕೆ ಬಂದ ವಿವಿಯನ್ ರಿಚರ್ಡ್ಸ್ ಅವರ ಭೇಟಿ ಭಾರತದ ಬಾಲಿವುಡ್ ತಾರೆ ನೀನಾ ಗುಪ್ತ ಅವರ ಜೊತೆಗೆ ಆಯಿತು. ಇಬ್ಬರ ಚರ್ಚೆ ಬಹಳ ದಿನಗಳವರೆಗೆ ನಡೆಯಿತು. ಇಬ್ಬರು ತುಂಬಾ ಸಮಯದವರೆಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಮುಂದೆ 1989 ರಲ್ಲಿ ನೀನಾ ಗುಪ್ತ ಒಂದು ಹುಡುಗಿಗೆ ಜನ್ಮ ನೀಡಿದರು. ಆಕೆಯ ಹೆಸರು ಮಸಾಬಾ ಇದೆ. ಇದಕ್ಕೂ ಮೊದಲು ವಿವಿಯನ್ ರಿಚರ್ಡ್ಸ್ ಅವರ ಮೊದಲ ಮದುವೆ ಮರಿಯಮ್ ಜೊತೆಗೆ ಆಗಿತ್ತು. ಮತ್ತು ಅವರಿಗೆ ಎರಡು ಮಕ್ಕಳು ಇವೆ.

  1. ಕ್ರಿಸ್ ಗೇಲ್:-

ಜಗತ್ತಿನ ಎಲ್ಲಕ್ಕೂ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಸಹ ಈ ಲಿಸ್ಟ್ ನಲ್ಲಿ ಇದ್ದಾರೆ. 2017ರ ಐಪಿಎಲ್ ಪಂದ್ಯಗಳು ನಡೆದಾಗ ಅವರ ಗರ್ಲ್ಫ್ರೆಂಡ್ ನತಾಶ ಬೇರಿಸ್ ಒಂದು ಮಗುವಿಗೆ ಜನ್ಮ ನೀಡಿದಳು. ಕ್ರಿಸ್ ಗೇಲ್ ಅವರ ಹೆಸರಿನ ಜೊತೆಗೆ ಹಾಗೆ ನೋಡಲಾಗಿ ಅನೇಕ ವಿವಾದಗಳು ತಳಕುಹಾಕಿಕೊಂಡಿವೆ. ಈ ಕೆಲಸವನ್ನು ಸಹ ಕ್ರಿಸ್ ಗೇಲ್ ಅವರು ಮಾಡಿ ತೋರಿಸಿದ್ದಾರೆ.