ಮದುವೇಲಿ ಮಗಳಿಗೆ ವಿದಾಯ ಹೇಳುವಾಗ ಇಮೋಷನಲ್ ಆದ ತಂದೆ ಕ್ಷಣದಲ್ಲಿ ಮಾಡಿದ್ದೇನು? ನೋಡಿ ಈ ವೈರಲ್ ವಿಡಿಯೋದಲ್ಲಿ…😯

ಮದುವೆಯಲ್ಲಿ ನಡೆದ ತಮಾಷೆಯ ವಿಡಿಯೋಗಳಿಗೆ ಏನೂ ಕಮ್ಮಿ ಇಲ್ಲ. ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೇ ಆಗುತ್ತವೆ. ಸದ್ಯ ಆಶ್ಚರ್ಯ ಪಡುವಂತಹ ಮದುವೆಯಲ್ಲಿ ದೃಶ್ಯವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಂದೆಯು ಮಗಳಿಗೆ ವಿದಾಯ ಹೇಳುವಾಗ ಫುಲ್ ಇಮೋಷನ್ ಆಗಿದ್ದಾನೆ. ಏತನ್ಮಧ್ಯೆ ಕ್ಷಣದಲ್ಲಿಯೇ ತಂದೆ ಒಂದು ನಾಟಕ ಮಾಡುತ್ತಾನೆ. ತಂದೆಯ ಈ ನಾಟಕ ನೋಡಿ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಯ ದೃಶ್ಯ ಕಂಡು ಬರುತ್ತಿದೆ. ತಂದೆ ಮಗಳಿಗೆ ಗಂಡನ ಮನೆಗೆ ವಿದಾಯ ಹೇಳುತ್ತಿರುವ ಸೀನ್ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ತಂದೆ ಮಗಳಿಗೆ ಗಂಡನ ಮನೆಗೆ ಕಳುಹಿಸುವಾಗ ತುಂಬಾನೇ ಇಮೋಷನ್ ಆಗಿದ್ದಾನೆ. ಈ ಸಂದರ್ಭದಲ್ಲಿ ಮಗಳು ತಂದೆಗೆ ತಬ್ಬಿ ಅತ್ತು ಕರೆದು ಸ್ವಲ್ಪ ತಿರುಗುತ್ತಾಳೆ. ಆಕೆ ತಂದೆಯ ಕಡೆಗೆ ಬೆನ್ನು ಮಾಡುತ್ತಲೇ ತಂದೆ ಒಮ್ಮೆಲೆ ಖುಷಿಯಿಂದ ಎರಡು ಕೈಗಳನ್ನು ಮೇಲೆ ಮಾಡಿ ಸಖತ್ ಡಾನ್ಸ್ ಮಾಡಲು ಶುರು ಮಾಡುತ್ತಾನೆ. ಅಷ್ಟರಲ್ಲಿ ಮಗಳು ಮತ್ತೆ ತಿರುಗಿ ನೋಡಲು ಮೊದಲಿನಂತೆ ಇಮೋಷನ್ ಆಗಿ ಅಳುವ ನಾಟಕ ಶುರು ಮಾಡುತ್ತಾನೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ನೋಡಲು ತುಂಬಾ ತಮಾಷೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು @SabjiHunter ಹೆಸರಿನ ಅಕೌಂಟ್ ನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ.