ಮಧ್ಯರಾತ್ರಿ ರಸ್ತೆ ಮೇಲೆ ಎರಡು ಮೊಲಗಳ ಕದನ; ಬಾಕ್ಸಿಂಗ್ ಪ್ಲೇಯರ್ ನಾಚುವ ರೀತಿಯಲ್ಲಿವೆ ಪಂಚ್ ಗಳು! ವಿಡಿಯೋ ವೈರಲ್;

ಸೋಶಿಯಲ್ ಮೀಡಿಯಾದಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ನೇಟಿಜನ್ಸ್ ಗಳು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ಮೊಲ ಮತ್ತು ಜಿಂಕೆಯಂತಹ ಪ್ರಾಣಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡುತ್ತಾರೆ. ಈಗ ರಸ್ತೆಯಲ್ಲಿ ಎರಡು ಮೊಲಗಳ ಕದನದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ನಿಮ್ಮ ಮುಖದ ಮೇಲೆ ಹಾಸ್ಯ ಉಕ್ಕಿ ಬರುತ್ತದೆ.

ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾತ್ರಿಯ ಕಗ್ಗತ್ತಲಿನಲ್ಲಿ ರಸ್ತೆ ಮಧ್ಯೆ ಎರಡು ಮೊಲಗಳು ಜೋರಾಗಿ ಹೊಡೆದಾಡುತ್ತಿವೆ. ಇದೇ ದಾರಿಯಿಂದ ಹೋಗುವ ಒಬ್ಬ ಕಾರು ಚಾಲಕ ಮೊಲಗಳ ಈ ಜಗಳದ ವಿಡಿಯೋ ಮಾಡಿಕೊಂಡಿದ್ದಾನೆ. ಸಾಮಾನ್ಯವಾಗಿ ಮೊಲ ಶಾಂತ ಮತ್ತು ನಾಚಿಕೆಯ ಸ್ವಭಾವದ ಪ್ರಾಣಿಯಾಗಿದೆ. ಮನುಷ್ಯರು ವಾಸಿಸುವ ಸ್ಥಳಗಳ ಕಡೆಗೆ ಹೆಚ್ಚಾಗಿ ಅವು ಬರುವದಿಲ್ಲ. ಮತ್ತು ಕಾಡಿನಲ್ಲಿಯೇ ಇರಲು ಇಷ್ಟಪಡುತ್ತವೆ. ಆದರೆ ಈಗ ಮಾತ್ರ ಯಾರಿಗೂ ಹೆದರದೆ ನಿರ್ಭಯದಿಂದ ರಸ್ತೆಯ ಮೇಲೆ ಕದನ ಶುರುಮಾಡಿವೆ.

ಎರಡೂ ಮೊಲಗಳು ಎದುರುಬದುರಾಗಿ ತಮ್ಮ ಮುಂದಿನ ಕಾಲುಗಳಿಂದ ಬಾಕ್ಸಿಂಗ್ ಆಟದಲ್ಲಿಯ ಆಟಗಾರರು ಸಹ ಪಂಚ್ ಹೊಡೆಯುವ ರೀತಿಯಲ್ಲಿ ಜಗಳವಾಡುತ್ತಿವೆ. ಮೊಲಗಳ ಈ ಬಾಕ್ಸಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಮೊಲಗಳ ಜಗಳದ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ ಮತ್ತು ಸಾವಿರಾರು ಜನರು ಈ ವಿಡಿಯೋಗೆ ಲೈಕ್ ಸಹ ಮಾಡಿದ್ದಾರೆ. ವೀಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಅದರಲ್ಲಿ ಒಬ್ಬನು ಇದು ಬಹುಶಃ ಲವ್ ಮ್ಯಾಟರ್ ಇರಬಹುದು ಎಂದಿದ್ದಾನೆ.

ವಿಡಿಯೋ ನೋಡಿ