ಮನುಷ್ಯರಂತೆ ಬಾಳೆಹಣ್ಣು ತಿನ್ನುವ ಮಂಗನ ವಿಡಿಯೋ ವೈರಲ್! ಜನರಂತಿದ್ದಾರೆ “ವಾಹ್ ವಾಹ್!”

ಕೋತಿಗಳು ಬಾಳೆಹಣ್ಣನ್ನು ಎಷ್ಟು ಇಷ್ಟಪಡುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಬಾಳೆಹಣ್ಣಿನ ಸಲುವಾಗಿ ಅವು ಯಾರ ಜೊತೆಗೂ ಹೋ’ರಾಡಲು ಸಿದ್ಧವಾಗಿರುತ್ತವೆ. ಆದರೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಜನರನ್ನು ಆಶ್ಚರ್ಯಚಕಿತ ಗೊಳಿಸುತ್ತಿದೆ. ವಾಸ್ತವವಾಗಿ, ಈ ವಿಡಿಯೋದಲ್ಲಿ ಒಂದು ಕೋತಿ ಮನುಷ್ಯನ ಹಾಗೆ ಬಾಳೆ ಹಣ್ಣು ತಿನ್ನುತ್ತಿರುವದು ಕಂಡು ಬಂದಿದೆ. ಬಹುಶಃ ಇದನ್ನು ನೋಡಿದ ಮೇಲೇ ನಿಮಗೆ ಭರವಸೆ ಬರಬಹುದು. ಏಕೆಂದರೆ ಈ ಸುದ್ದಿ ಬರೆಯುವಷ್ಟರಲ್ಲಿ ಈ ವಿಡಿಯೋವನ್ನು ಸುಮಾರು 7 ಕೋಟಿಯಷ್ಟು ಜನರು ವೀಕ್ಷಣೆ ಮಾಡಿದ್ದಾರೆ, 40 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಮತ್ತು 31 ಸಾವಿರಕ್ಕಿಂತ ಹೆಚ್ಚು ಕಾಮೆಂಟ್ಸ್ ಮಾಡಿದ್ದಾರೆ.

ಹೇಗಿದೆ ನೋಡಿ ಬಾಳೆಹಣ್ಣು ತಿನ್ನುವ ಶೈಲಿ.

ಈ ವಿಡಿಯೋವನ್ನು jlatosha ಎಂಬ ಹೆಸರಿನ ಯೂಜರ್ ನಾಲ್ಕು ದಿನಗಳ ಹಿಂದೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದರು. ಇವರಿಗೆ ಟಿಕ್ ಟಾಕ್ ನಲ್ಲಿ ಸುಮಾರು 5 ಲಕ್ಷ ಜನರು ಫಾಲೋರ್ಸ್ ಇದ್ದಾರೆ. ಈ ಚಾನಲ್ ನಲ್ಲಿ ಕೋತಿಯ ಆಸಕ್ತಿದಾಯಕ ವಿಡಿಯೋ ನೋಡಲು ಸಿಗುವದು. ಈ ಪೇಜ್ ಗೆ 60 ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಒಂದು ಕೋತಿ ತನ್ನ ಮರಿಗಳೊಂದಿಗೆ ಬಾಳೆಹಣ್ಣು ತಿನ್ನುತ್ತಿದೆ. ಅದು ಎಲ್ಲಕ್ಕಿಂತ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆಯುತ್ತದೆ. ಬಾಳೆಹಣ್ಣಿನ ಸಿಪ್ಪೆ ತಗೆದ ಮೇಲೂ ಸಹ ಹಣ್ಣಿನ ಮೇಲಿರುವ ಬಿಳಿ ಬಣ್ಣದ ರೇಷೆಯನ್ನು ಸಹಿತ ತೆಗೆದುಹಾಕುತ್ತದೆ, ಹೀಗೆ ಮಾಡುವದನ್ನು ಸಾಮಾನ್ಯವಾಗಿ ನಾವು ಮನುಷ್ಯರಲ್ಲಿ ಕಾಣಬಹುದು. ಏಕೆಂದರೆ ಬಹಳಷ್ಟು ಕೋತಿಗಳು ಮೇಲಿನ ಸಿಪ್ಪೆ ತೆಗೆದು ತಕ್ಷಣವೇ ಬಾಳೆಹಣ್ಣು ತಿಂದು ಬಿಡುತ್ತವೆ. ಆದ್ರೆ ಈ ಕೋತಿ ಯ ಬಾಳೆಹಣ್ಣು ತಿನ್ನುವ ಶೈಲಿ ವಿಭಿನ್ನವಾಗಿದೆ.