ಮನೆಗೆ ಕೂಡಿಸಿದ ಜುಗಾಡು ಗೇಟ್ ನೋಡಿ ಆಶ್ಚರ್ಯ ವ್ಯಕ್ತ ಮಾಡಿದರು ಆನಂದ್ ಮಹೀಂದ್ರಾ; ಶೇರ್ ಮಾಡಿದರು Video.

ತಮ್ಮ ಪ್ರತಿಯೊಂದು ಟ್ವೀಟ್ ನಿಂದ ಸಮಾಜಕ್ಕೆ ಏನಾದರೂ ಒಂದು ಮಹತ್ವದ ಸಂದೇಶವನ್ನು ಅಥವಾ ತಮಾಷೆಯ ದೃಶ್ಯವನ್ನು ತೋರಿಸುವುದರಲ್ಲಿ ಆನಂದ್ ಮಹೀಂದ್ರಾ ಅವರು ಯಾವತ್ತೂ ಕ್ರಿಯಾಶೀಲರಾಗಿರುತ್ತಾರೆ. ಆನಂದ್ ಮಹೀಂದ್ರಾ ಅವರು ಈಗ ಶೇರ್ ಮಾಡಿರುವ ವಿಡಿಯೋ ನೋಡಿದಾಗ ಮೊದಲು ತುಂಬಾ ಕನ್ಫ್ಯೂಜನ್ ಆಗುತ್ತದೆ. ಕೆಲವರಂತೂ ಆನಂದ್ ಮಹೀಂದ್ರಾ ಅವರಿಗೆ ಈ ರೀತಿಯ ಜನ ಎಲ್ಲಿ ಸಿಗುತ್ತಾರೆ ಎಂಬ ಪ್ರಶ್ನೆ ಹುಟ್ಟಿದೆ. ಯಾಕೆಂದರೆ ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿಯ ಜುಗಾಡ್ ನೋಡಿದರೆ ತುಂಬಾ ಆಶ್ಚರ್ಯ ಉಂಟಾಗುತ್ತದೆ. ಅದಕ್ಕಾಗಿ ಮೊದಲು ಆನಂದ್ ಮಹೀಂದ್ರಾ ಅವರಿಗೆ ಒಂದು ಥ್ಯಾಂಕ್ಯೂ ಹೇಳಿ, ಕಾರಣ ಈ ರೀತಿಯ ಜುಗಾಡ್ ನೀವು ಈ ಮೊದಲು ಎಲ್ಲಿಯೂ ನೋಡಲಿಕ್ಕಿಲ್ಲ.

ವೈರಲ್ ಆಗುತ್ತಿರುವ ಈ ವಿಡಿಯೋದ ದೃಶ್ಯವು ನೋಡಲು ವಿಶೇಷದ ಜೊತೆಗೆ ತುಂಬಾ ತಮಾಷೆಯಿಂದಲೂ ಕೂಡಿದೆ. ಈ ಗೇಟ್ ನ ಒಳಗಡೆ ಒಂದು ಆಲ್ಟೊ ಕಾರ್ ಮರ್ಜ್ ಆಗಿದೆ. ಆಲ್ಟೊ ಕಾರಿನ ಅರ್ಧಭಾಗವನ್ನು ಗೇಟ್ ನಲ್ಲಿಯೇ ಸೆಟ್ ಮಾಡಿಸಿದ್ದಾನೆ. ಯಾರೇ ಆಗಲಿ ಮೊದಲು ನೋಡಿದಾಗ ಕಾರನ್ನು ಗೇಟ್ ಮುಂದೆ ಪಾರ್ಕ್ ಮಾಡಿದ ಹಾಗೆ ಕಂಡು ಬರುತ್ತದೆ. ಕಾರಿನ ಬಾಗಿಲನ್ನೇ ಗೇಟಿನ ಡೋರ್ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದಾನೆ. ವ್ಯಕ್ತಿ ಹೊರಗೆ ಬರುವಾಗ ಕಾರಿನ ಡೋರ್ ಓಪನ್ ಮಾಡಿಯೇ ಹೊರಗೆ ಬರುತ್ತಾನೆ. ಈ ದೃಶ್ಯ ನೋಡಲು ನಿಜಕ್ಕೂ ವಿಶೇಷವಾಗಿದೆ ಅಲ್ಲವೇ?

ವಿಡಿಯೋ ನೋಡಿ

ಈ ವಿಡಿಯೋವನ್ನು ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಮತ್ತು ತರತರದ ಪ್ರಶ್ನೆಗಳನ್ನು ತಮ್ಮ ಪ್ರತಿಕ್ರಿಯೆಗಳಲ್ಲಿ ಆನಂದ್ ಸರ್ ಅವರಿಗೆ ಕೇಳುತ್ತಿದ್ದಾರೆ.