Articles

ಕೊಕ್ಕರೆಯು ಮೀನಿನ ಬೇಟೆಯಾಡುವಾಗ ಆಯಿತು ಸ್ವಲ್ಪ ಯಡವಟ್ಟು! ಆನಂತರ ಮೀನು ಉಳಿಯಿತೋ, ಇಲ್ಲ ನೋಡಿ ಈ ವಿಡಿಯೋದಲ್ಲಿ?

ಪ್ರಾಣಿ ಮತ್ತು ಪಕ್ಷಿಗಳು ಬೇಟೆಯಾಡಿದ ನಂತರ ಕೆಲಸ ಮುಗೀತು, ಇನ್ನು ಬೇಟೆಯಾಡಿದ ಜೀವಿಯನ್ನು ಆರಾಮಾಗಿ ಕುಳಿತು ತಿನ್ನಬಹುದು ಎಂಬ ಮಾತಿಲ್ಲ. ಕೆಲವೊಂದು ಸಲ ತುಂಬಾ ಕಷ್ಟದಿಂದ ಪರಿಶ್ರಮವಹಿಸಿ ಆಡಿದ ಬೇಟೆ ಬೇರೆ ಪ್ರಾಣಿಗಳ ಪಾಲಾಗುತ್ತದೆ. ಇಲ್ಲವೇ ಶಿಕಾರಿ ಚಾಣಾಕ್ಷದಿಂದ ಪಲಾಯನವಾಗುತ್ತವೆ. ಆಗ ಮುಖ ಸಪ್ಪಗೆ ಮಾಡಿಕೊಂಡು ಕುಳಿತುಕೊಳ್ಳುವ ಹೊರತು ಬೇರೆನು ಮಾಡಲಿಕ್ಕಾಗುವದಿಲ್ಲ.

ಈಗ ಇಲ್ಲಿ ನೋಡುವ ವಿಡಿಯೋ ಸ್ವಲ್ಪ ಬೇರೆಯಾಗಿದೆ. ಏನೆಂದರೆ, ಕೊಕ್ಕರೆ ಒಂದು ಮೀನಿನ ಬೇಟೆಯನ್ನೇನೋ ಆಡಿದೆ. ಆದರೆ ಬೇಟೆಯಾಡುವಾಗ ಕೊಕ್ಕರೆಯ ಚೂಪಾದ ಕೊಕ್ಕು ಅಥವಾ ಚುಂಚು ಮೀನಿನ ದೇಹದಲ್ಲಿ ಸಿಲುಕಿದೆ. ಆಗ ಕೊಕ್ಕರೆಗೆ ಥಟ್ಟನೆ ಏನು ಮಾಡಬೇಕೆಂಬುದು ಬೇಗನೆ ತಿಳಿದಿಲ್ಲ. ಆದರೂ ಸ್ವಲ್ಪ ಸಮಯ ತೆಗೆದುಕೊಂಡು ತನ್ನ ಬೇಟೆಯನ್ನು ವ್ಯರ್ಥ ಹೋಗಗೊಡದೆ ತುಂಬಾ ಜಾಣತನದಿಂದ ಬ್ಯಾಲೆನ್ಸ್ ಮುಖಾಂತರ ಯಾವ ರೀತಿ ಬೇಟೆಯನ್ನು ತನ್ನ ಬಾಯಿಗೆ ಹಾಕಿಕೊಂಡಿದೆ ಎಂಬುದನ್ನು ನೋಡಿ ಈ ವೈರಲ್ ವಿಡಿಯೋದಲ್ಲಿ…

ನೋಡಿ ಈ ವಿಡಿಯೋ…

ಈ ವೀಡಿಯೋವನ್ನು ಬರ್ಡ್ ನೇಚರ್ ಲವರ್ಸ್ ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 378 ಸಾವಿರ ಜನರು ಲೈಕ್ ಮಾಡಿದ್ದು ಪ್ರಸ್ತುತ ವಿಡಿಯೋವನ್ನು 6.9 ಮಿಲಿಯನ್ ಜನರು ನೋಡಿದ್ದಾರೆ.

Leave a Comment

Your email address will not be published. Required fields are marked *