ಮನೆಯವರು ನಿಮ್ಮ ಮದುವೆ ಬಗ್ಗೆ ಚರ್ಚಿಸುವಾಗ…ನಿಮ್ಮ ಮುಖದಲ್ಲಿಯ ಭಾವ ಹೇಗಿರುತ್ತೆ? ತೋರಿಸುವ ನಾಯಿಯ ಈ ಅದ್ಭುತ ವಿಡಿಯೋ ನೋಡಿ.
ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತ ಪಡಿಸಬೇಕಾದರೆ ಮಾತುಗಳ ಮುಖಾಂತರವೇ ಸಾಧ್ಯವಿದೆ, ಬೇರೆ ಯಾವುದೇ ಪ್ರಕಾರದಿಂದಲೂ ಸಾಧ್ಯವಿಲ್ಲ ಎಂದರೆ ಶುದ್ಧ ತಪ್ಪು. ಬರೀ ಮುಖದ ಮೇಲಿನ ಭಾವನೆಗಳಿಂದಲೂ ನಮ್ಮ ಮನಸ್ಸಿನಲ್ಲಿರುವ ಯಾವುದೇ ವಿಚಾರವನ್ನು ಹೊರಗೆ ಹಾಕಲು ಸಾಧ್ಯವಿದೆ. ಇದಕ್ಕೆ ಪುಷ್ಟಿಯನ್ನು ನೀಡುವ ಸಾಕುನಾಯಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಸಾಕು ನಾಯಿಯ ತುಂಬಾ ವಿಶೇಷವಾದ ಅಷ್ಟೇ ಅಪರೂಪದ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ rupesh_chaudhary1 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಒಂದು ಸಾಕುನಾಯಿಯ ತುಂಬಾ ಸುಂದರವಾದ ದೃಶ್ಯವಿದೆ. ವಿಡಿಯೋದ ಕ್ಯಾಪ್ಶನ್ ನಲ್ಲಿ “when someone discuss about my wedding at home” ಬರೆಯಲಾಗಿದೆ. (ಮನೆಯಲ್ಲಿ ನನ್ನ ಮದುವೆಯ ಬಗ್ಗೆ ಚರ್ಚೆ ನಡೆದಾಗ) ಈ ವಾಕ್ಯದಲ್ಲಿರುವ ಶಬ್ದಗಳ ಅರ್ಥಕ್ಕೆ ಸರಿಯಾಗಿ ಅಂದರೆ ನೂರಕ್ಕೆ ನೂರು ಪ್ರತಿಶತ ಹೊಂದಿಕೊಳ್ಳುವ ಹಾಗೆ ಪ್ರಸ್ತುತ ವಿಡಿಯೋದಲ್ಲಿಯ ನಾಯಿಯ ಮುಖ ಕಂಡುಬರುತ್ತಿದೆ. ಜೊತೆಗೆ ವಿಡಿಯೋದ ಬ್ಯಾಕ್ ಗ್ರೌಂಡ್ ನಲ್ಲಿ ಅಕ್ಷತೆಯ ಸಂದರ್ಭದಲ್ಲಿ ನುಡಿಸಲಾಗುವ ಸುಂದರವಾದ ಮ್ಯೂಸಿಕ್ ಸಹ ಕೇಳಿಬರುತ್ತಿದೆ. ಇದರಿಂದಾಗಿ ನಾಯಿಯ ಮುಖದ ಮೇಲಿನ ಭಾವನೆ ಮತ್ತು ವಿಡಿಯೋಗೆ ನೀಡಿದ ಕ್ಯಾಪ್ಷನ್ ಸೇಮ್ ಟು ಸೇಮ್ ಹೊಂದಿಕೊಂಡಂತೆ ಕಂಡುಬರುತ್ತಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ನೋಡಿದ ಮೇಲೆ ಹೆಚ್ಚುಕಡಿಮೆ ನೀವೂ ಸಹ ಇದು ತುಂಬಾನೇ ಕರೆಕ್ಟಾಗಿದೆಯಲ್ಲ ಎಂಬ ಮಾತನ್ನು ಹೇಳದೆ ಸಾಧ್ಯವಿಲ್ಲ, ಎಂದು ನನ್ನ ಅನಿಸಿಕೆ. ವಿಡಿಯೋಗೆ ನೀಡಿದ ಕ್ಯಾಪ್ಷನ್ ಮತ್ತು ನಾಯಿಯ ಆಕ್ಟಿಂಗ್ ಒಂದಕ್ಕೊಂದು ತುಂಬಾ ಹೊಂದಿಕೊಂಡಿವೆ. ಹೀಗಾಗಿ ಈ ವಿಡಿಯೋ ನಿಜಕ್ಕೂ ತುಂಬಾ ತಮಾಷೆಯದ್ದಾಗಿದೆ.