ಮನೆಯೊಳಗೆ ನುಗ್ಗುತ್ತಿದ್ದ ಹಾವಿನ ಎದುರು ನಿಂತು ” ಮನೆಯೊಳಗೆ ನುಗ್ಗಬೇಡ” ಎಂದು ಬೆದರಿಕೆ ನೀಡಿದ ರೈತ, ಹಾವು ಮುಂದೆ ಮಾಡಿದ್ದೇನು?

ಹಾವು ಎಂದರೆ ಸಾಕು ನಮ್ಮೆಲ್ಲರ ದೇಹವು ಬೆವರುತ್ತದೆ. ಆದರೆ ಕೆಲವೊಮ್ಮೆ ಹಾವು ಎದುರಿಗೆ ಬಂದರೆ ನಮ್ಮ ಬಾಯಿಂದ ಮಾತು ಸಹ ಬರುವುದಿಲ್ಲ. ಯಾವ ಬುದ್ಧಿವಂತನೂ ಹಾವನ್ನು ಒಲಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಆದರೆ ಒಬ್ಬ ರೈತ ಈ ಸಾಹಸ ಮಾಡಿದ್ದಾನೆ. ಅವನು ತನ್ನ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಹಾವಿನ ಮುಂದೆ ಎದೆಯನ್ನು ತಟ್ಟಿನಿಂತು ನೇರವಾಗಿ ಬೆದರಿಕೆ ಹಾಕಿದನು ನಂತರ ನಡೆದ ಘಟನೆ ಮಾತ್ರ ತುಂಬಾ ಆಘಾ#ತಕಾರಿಯಾಗಿದೆ.

ತಮಿಳುನಾಡುನಲ್ಲಿ ನಡೆದ ಘಟನೆ ಇದಾಗಿದೆ. ಕೊಯಿಮತ್ತೂರು ಜಿಲ್ಲೆಯಲ್ಲಿಯ ಥುಡಿಯಲ್ಲೂರು ನಲ್ಲಿ ಗುರುವಾರದಂದು ಸಾಯಂಕಾಲದ ಸುಮಾರು 6 ಗಂಟೆಯ ಸಮಯದಲ್ಲಿ ಒಂದು ಹಾವು ಒಂದು ಮನೆಯಲ್ಲಿ ನುಗ್ಗಲು ಪ್ರಯತ್ನ ಪಡುತ್ತಿತ್ತು. ಸುಮಾರು ನಾಲ್ಕು ಫೀಟ್ ನಷ್ಟು ಉದ್ದವಾಗಿತ್ತು ಈ ಹಾವು. ಈ ಹಾವು ಮನೆಯೊಳಗೆ ನುಗ್ಗುವದನ್ನು ಆ ಮನೆಯ ಮಾಲೀಕ ಕನಗರಾಜ್ ನೋಡಿದರು. ಒಮ್ಮಿಂದೊಮ್ಮಿಗೆ ಹಾವು ನೋಡಿದಾಗ ಹೇಗಾಗುತ್ತದೆ ಎಂಬುದು ನಮಗೆ ಗೊತ್ತೇ ಇದೆ. ಆದರೆ ಹಾವು ನೋಡಿದಾಗ ಮಾಲೀಕನು ಸ್ವಲ್ಪವೂ ಸಹ ಹೆದರದೇ ಅದರ ಮುಂದೆ ನಿಂತನು. ತದನಂತರ ನಾವು ಮನುಷ್ಯರಿಗೆ ಹೇಗೆ ಬೆದರಿಕೆ ಹಾಕುತ್ತವೆಯೋ ಹಾಗೆ ಈ ಮಾಲೀಕ ಹಾವಿಗೆ ಬೆದರಿಕೆ ಹಾಕಿದನು.

ಮನೆಯೊಳಗೆ ನುಗ್ಗುವ ಹಾವನ್ನು ಕಂಡು ‘ ಇಲ್ಲಿ ಬರಬೇಡ, ಮನೆಯೊಳಗೆ ನುಗ್ಗಬೇಡ, ಮರಳಿ ಕಾಡಲ್ಲಿ ಹೋಗು” ಎಂದು ಹಾವಿಗೆ ಆದೇಶ ನೀಡಿದನು. ನಾವೆಲ್ಲ ಮನುಷ್ಯರು ನಾವು ಬೇರೊಬ್ಬರ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತೇವೆ ಆದರೆ ಹಾವು ಹೇಗೆ ಅರ್ಥ ಮಾಡಿಕೊಳ್ಳುತ್ತೇ, ಹಾವು ಮನೆಯಲ್ಲಿ ನುಗ್ಗಿರಬಹುದು ಅಂತ ನೀವೆಲ್ಲ ಯೋಚನೆ ಮಾಡುತ್ತಿರಬೇಕು ಆದರೆ ಮುಂದೆ ನಡೆದ ಘಟನೆ ಮಾತ್ರ ತುಂಬಾ ಆ#ಶ್ಚರ್ಯಗೊಳಿಸುವ ಸಂಗತಿಯಾಗಿದೆ.

ಈ ರೈತ್ ಜೋರಾಗಿ ಬೆದರಿಕೆ ಹಾಕಿದಾಗ ಹಾವು ಇಷ್ಟೊಂದು ಹೆದರಿತು ಅಂದರೆ ಅದು ಆತನ ಮನೆಯೊಳಗೆ ಹೋಗುವ ಪ್ರಯತ್ನ ಸಹ ಮಾಡಲಿಲ್ಲ. ರೈತನ ಆದೇಶದ ಪಾಲನೆ ಮಾಡಿ ಹಾವು ಅಲ್ಲಿಂದ ನೇರವಾಗಿ ಕಾಡಿನ ಕಡೆಗೆ ಹೋಗಲು ಪ್ರಯತ್ನ ಮಾಡಿತು. ಹಾವು ಹೆದರಿ ಓಡುತ್ತ ಓಡುತ್ತ ಅಲ್ಲಿದ್ದ ಒಂದು ನೀರಿನ ಹೊಂಡದಲ್ಲಿ ಬಿದ್ದಿತು.

ತದನಂತರ ರೈತ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಿದನು. ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಆ ಹೊಂಡದಲ್ಲಿ ಬಿದ್ದ ಹಾವನ್ನು ಹೊರಗಡೆ ತಗೆದರು. ಅದನ್ನು ಹಿಡಿದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟರು. ಝೀ ನ್ಯೂಸ್ ವರದಿಯ ಅನುಸಾರ ಸೋಶಿಯಲ್ ಮಿಡಿಯಾದಲ್ಲಿ ಈ ಘಟನೆ ವೈರಲ್ ಆಗಿದೆ.