ಮನೆ ಬಾಡಿಗೆಗೆ ನೀಡಿ ವರ್ಲ್ಡ್ ಟೂರ್ ಗೆ ಹೋದ ಮಹಿಳೆ: ಇತ್ತ ಮನೆಯನ್ನು ಗಾಂ ಜಾ ಫಾರ್ಮ್ ಮಾಡಿದ ಬಾಡಿಗೆದಾರ!

ಮನೆಯನ್ನು ಬಾಡಿಗೆಗೆ ನೀಡುವಾಗ ಅದರ ಮಾಲೀಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಬಾಡಿಗೆದಾರರು ಒಳ್ಳೆಯವರಾಗಿದ್ದರೆ ಮಾತ್ರ ನಮ್ಮ ಮನೆಯಲ್ಲಿ ಕೂಡಾ ಯಾವುದೇ ಸಮಸ್ಯೆ ಇಲ್ಲದೇ ಇರಲು ಸಾಧ್ಯ. ಆದರೂ ಅನೇಕ ಸಲ ಬಾಡಿಗೆದಾರರು ಮನೆಗೆ ಬರುವಾಗ ಬಹಳ ಒಳ್ಳೆಯವರಂತೆ ಇರುತ್ತಾರೆ. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ನಿಜ ರೂಪವನ್ನು ತೋರಿಸಿದಾಗ ಶಾ ಕ್ ಆಗುವ ಸರದಿ ಓನರ್ ದೇ ಆಗಿರುತ್ತದೆ. ಅಲ್ಲದೇ ಬಾಡಿಗೆದಾರರ ಬಗ್ಗೆ ಎಚ್ಚರ ವಹಿಸಿದೇ ಹೋದರೆ ಅವರು ಮನೆಯನ್ನು ಯಾವ ಪರಿಸ್ಥಿತಿಗೆ ತಂದಿಡುತ್ತಾರೆ ಎನ್ನುವುದನ್ನು ಕೂಡಾ ನಾವು ಊಹಿಸಲು ಸಾಧ್ಯವಾಗುವುದಿಲ್ಲ ಎಂದೇ ಹೇಳಬಹುದು. ಬ್ರಿಟನ್ ನಲ್ಲಿ ಇಂತಹ ಘಟನೆಯೊಂದು ನಡೆದಿದ್ದು ಮನೆಯ ಮಾಲೀಕಳಿಗೆ ಬಾಡಿಗೆದಾರರು ಊಹೆ ಮಾಡದ ಶಾ ಕ್ ನೀಡಿದ್ದಾರೆ.

ಬ್ರಿಟನ್ ನಲ್ಲಿ ಮನೆ ಮಾಲೀಕ ಮಹಿಳೆಯೊಬ್ಬರು ತನ್ನ ಮನೆಯನ್ನು ಬಾಡಿಗೆಗೆ ನೀಡಿ ವಿಶ್ವ ಪ್ರವಾಸವನ್ನು ಕೈಗೊಂಡಿದ್ದಾರೆ. ಹೀಗೆ ಪ್ರವಾಸ ಹೋದ ಮಹಿಳೆ ಪ್ರವಾಸ ಮುಗಿಸಿಕೊಂಡು ಮರಳಿದಾಗ ಮನೆಯ ವಾತಾವರಣ ನೋಡಿ ಪ್ರಜ್ಞೆ ತಪ್ಪುವುದೊಂದೇ ಬಾಕಿ ಇತ್ತು ಎನ್ನುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. 45 ವರ್ಷ ವಯಸ್ಸಿನ ತಾನ್ಯ ಲೆವರ್ಟಿ ಎನ್ನುವ ಮಹಿಳೆಯೊಬ್ಬರು ತನ್ನ ಮನೆಯನ್ನು ಒಂದು ಕೊರಿಯನ್ ಕುಟುಂಬಕ್ಕೆ ಬಾಡಿಗೆಗೆ ನೀಡಿದ್ದರು. ನಂತರ ಆಕೆ ತನ್ನ ಬಾಯ್ ಫ್ರೆಂಡ್ ಜೊತೆಗೆ ವರ್ಲ್ಡ್ ಟೂರ್ ಗೆಂದು ಹೊರಟು ಹೋಗಿದ್ದಾರೆ. ಹಾಗೆ ಟೂರ್ ಹೋಗಿದ್ದ ಆಕೆಗೆ ಯಾರೋ ಕರೆ ಮಾಡಿ ಆಕೆಯ ಮನೆಯ ಮುಂದೆ ಒಂದು ದೊಡ್ಡ ಪೈಪ್ ಕಾಣುತ್ತಿದೆ ಎಂಬ ವಿಷಯವನ್ನು ಮುಟ್ಟಿಸಿದ್ದಾರೆ.

ವಿಷಯ ತಿಳಿದ ಕೂಡಲೇ ತಾನ್ಯ ಅವರು ಟೂರ್ ನಿಂದ ಮರಳಿ ಬಂದು, ಮನೆಯನ್ನು ನೋಡಲು ಬಂದಾಗ ಕಾದಿತ್ತು ಆಕೆಗೆ ಅಲ್ಲೊಂದು ಶಾ ಕ್. ಮನೆಗೆ ಬಂದ ತಾನ್ಯ ಕಣ್ಮುಂದೆ ಇದ್ದಿದ್ದು ತಾನು ಬಾಡಿಗೆಗೆ ಕೊಟ್ಟ ತನ್ನ ಮನೆಯೇ ಆದರೂ ಅದು ಈಗ ಒಂದು ಗಾಂ ಜಾ ಫಾರ್ಮ್ ಆಗಿ ಬದಲಾಗಿತ್ತು. ಹೌದು ಆಕೆ ಮನೆಯನ್ನು ಬಾಡಿಗೆಗೆ ನೀಡಿದ್ದ ಕೊರಿಯನ್ ಕುಟುಂಬವು ಇಡೀ ಮನೆಯನ್ನು ಗಾಂ ಜಾ ಬೆಳೆಯುವ ಸ್ಥಳವನ್ನಾಗಿ ಪರಿವರ್ತನೆ ಮಾಡಿಕೊಂಡಿತ್ತು. ಮನೆಯ ಪ್ರತಿ ಕೋಣೆಯಲ್ಲಿ ಕೂಡಾ ಗಾಂ‌ ಜಾ ಗಿಡಗಳೇ ಕಾಣುತ್ತಿದ್ದವು. ಎಲ್ಲಾ ಕಡೆ ಅದೇ ಗಿಡಗಳನ್ನು ಬೆಳೆಯಲು ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಅಲ್ಲದೇ ಆ ಗಿಡಗಳು ಚೆನ್ನಾಗಿ ಬೆಳೆಯಲು ಅವುಗಳಿಗೆ ಶುದ್ಧ ಗಾಳಿಯ ಅವಶ್ಯಕತೆ ಇದೆ ಎಂದು, ಶುದ್ಧ ಗಾಳಿಯನ್ನು ಪೂರೈಕೆ ಮಾಡಲು ಮನೆಯ ಕೋಣೆ ಗಳಿಗೆ ದೊಡ್ಡ ದೊಡ್ಡ ಪೈಪುಗಳನ್ನು ಕೂಡಾ ಅಳವಡಿಸಲಾಗಿತ್ತು ಎನ್ನಲಾಗಿದೆ. ತನ್ನ‌‌ ಮನೆಯನ್ನು ಹೀಗೆ ತನಗೆ ತಿಳಿಸದೇ ಗಾಂ‌ ಜಾ ಫಾರ್ಮ್ ಆಗಿ ಬದಲಿಸಿ, ಗಾಂ‌ ಜಾ ಗಿಡಗಳನ್ನು ಬೆಳೆಸಿರುವುದನ್ನು ನೋಡಿದ ತಾನ್ಯ ಸಿಕ್ಕಾಪಟ್ಟೆ ಕೋ ಪ ಗೊಂಡಿದ್ದಾರೆ. ಅಲ್ಲದೇ ಕಾನೂನು ಬಾ ಹಿ ರವಾದ ಆ ಕೆಲಸಕ್ಕೆ ಪ್ರೋತ್ಸಾಹ ನೀಡಬಾರದು ಎನ್ನುವ ಕಾರಣಕ್ಕೆ ಆಕೆ ತಡಮಾಡದೇ ಪೋಲಿಸರಿಗೆ ಕರೆ ಮಾಡಿ, ಎಲ್ಲಾ ವಿಷಯವನ್ನೂ ಕೂಡಾ ತಿಳಿಸಿದ್ದಾರೆ ಎನ್ನಲಾಗಿದೆ.

ಪೋಲಿಸರು ಬರುವ ವೇಳೆಗೆ ಕೊರಿಯನ್ ಕುಟುಂಬ ಪರಾರಿಯಾಗಿದೆ ಎನ್ನಲಾಗಿದೆ. ಅಲ್ಲದೇ ಪೋಲಿಸರು ಹೇಳುವಂತೆ ಅಲ್ಲಿ ಬೆಳೆಯಲಾಗಿದ್ದ ಗಾಂ ಜಾ ದಿಂದ ವರ್ಷಕ್ಕೆ ಎಂಟು ಕೋಟಿ ರೂಪಾಯಿ ಆದಾಯ ಬರುತ್ತಿತ್ತು ಎನ್ನಲಾಗಿದೆ. ಇನ್ನು ತಾನ್ಯ ಮನೆಯನ್ನು ಮತ್ತೆ ಬಾಡಿಗೆಗೆ ಕೊಡಲೂ ಆಗದ ಸ್ಥಿತಿಗೆ ತಂದಿರಿಸಿದ್ದು ಮಾತ್ರವೇ ಅಲ್ಲದೇ ಪರಾರಿಯಾದ ಕುಟುಂಬ ಕೆಲವು ತಿಂಗಳುಗಳ ಬಾಡಿಗೆ ಕೂಡಾ ಕೊಟ್ಟಿಲ್ಲವಂತೆ.‌ ಬ್ಯಾಂಕ್ ಲೋನ್ ಪಡೆದು ಮನೆ ಕೊಂಡಿದ್ದ ತಾನ್ಯಾಗೆ ಬ್ಯಾಂಕ್ ಕೂಡಾ ಲೋನ್ ಕಂತು ಪಾವತಿ ಮಾಡಿಲ್ಲ ಎಂದು ನೋಟೀಸ್ ಜಾರಿ ಮಾಡಿರುವುದು ಮಾತ್ರವೇ ಅಲ್ಲದೇ ಮನೆಯ ಹರಾಜು ಮಾಡುವ ಎಚ್ಚರಿಕೆ ಕೂಡಾ ನೀಡಿದೆ ಎನ್ನಲಾಗಿದೆ.