ಮರದ ಮರೆಯಲ್ಲಿ ನಿಂತ ಕಪಲ್ ನೋಡಿ ಬೇಸರ ಪಟ್ಟ ಅಜ್ಜ ಕೇಳಿದ ಹೀಗೆ; ಆ ಮಾತಿಗೆ ಯುವಕ ಉತ್ತರಿಸಿದ್ದೇನು..?
ನಗು ಮನುಷ್ಯನಿಗೆ ಮಾನಸಿಕವಾಗಿ ಬಲಗೊಳ್ಳಲು ಅಪ್ರತ್ಯಕ್ಷವಾಗಿ ಅಸಾಧಾರಣ ಹೆಲ್ಪ್ ಮಾಡುತ್ತದೆ. ಆದ್ದರಿಂದಲೇ ನಿಮಗಾಗಿ ನಾವು ಕೆಲವು ಸಖತ್ ಪಂಚ್ ನ ಜೋಕ್ಸ್ ಗಳನ್ನು ಈ ಲೇಖನದಲ್ಲಿ ತೆಗೆದುಕೊಂಡು ಬಂದಿದ್ದೇವೆ. ಓದಿರಿ ಮತ್ತು ನಕ್ಕಿ ನಲಿಯಿರಿ…
* ಪ್ರವಾಹ ಪರಿಸ್ಥಿಯಲ್ಲಿ ಸೈನಿಕರಿಂದ ಒಂದೇ ಸವನೆ ನದಿಯ ನೀರಿನಲ್ಲಿ ಸಿಲುಕಿದ ಊರಿನ ಜನರನ್ನು ಹೆಲಿಕಾಫ್ಟರ್ ಮುಖಾಂತರ ದಡಕ್ಕೆ ತಂದು ಬಚಾವ್ ಮಾಡುವ ಕಾರ್ಯ ವೇಗದಲ್ಲಿ ನಡೆದಿತ್ತು.
ಇದೇ ಸಂದರ್ಭದಲ್ಲಿ ನ್ಯೂಸ್ ರಿಪೋರ್ಟರ್ ಊರಿನ ಸರಪಂಚ್ ನೊಂದಿಗೆ ಮಾತನಾಡುತ್ತಾ, ನಿಮ್ಮ ಊರಿನ ಜನಸಂಖ್ಯೆ ಗವರ್ನ್ ಮೆಂಟ್ ರಿಜಿಸ್ಟರ್ ಪ್ರಕಾರ 500 ಇದ್ದಾಗ್ಯೂ ಇಲ್ಲಿಯವರೆಗೆ 900 ಜನರನ್ನು ರಕ್ಷಿಸಲಾಗಿದೆ. ಇದು ಹೇಗೆ ಸಾಧ್ಯ? ಎಂದು ಕೇಳಿದ.
ಸರಪಂಚ್ – ರಿಜಿಸ್ಟರ್ ಪ್ರಕಾರ ಅದು ಸರಿಯಾಗಿಯೇ ಇದೆ. ಆದರೆ ನಮ್ಮೂರಲ್ಲಿಯ ಜನ ಇಲ್ಲಿಯವರೆಗೆ ಹೆಲಿಕ್ಯಾಫ್ಟರ್ ನಲ್ಲಿ ಕುಳಿತೇ ಇಲ್ಲ, ಹೀಗಾಗಿ ಆರ್ಮಿಯವರು ಇವರನ್ನು ಸಂರಕ್ಷಿಸಿ ದಡಕ್ಕೆ ತಂದು ಬಿಡುತ್ತಾರೆ. ಇವರು ಹೆಲಿಕ್ಯಾಪ್ಟರ್ ನಲ್ಲಿ ಮತ್ತೆ ಮತ್ತೆ ಕುಳಿತುಕೊಳ್ಳುವ ಆಸೆಗಾಗಿ ಮತ್ತೆ ನದಿಯಲ್ಲಿ ಜಿಗಿಯುತ್ತಿದ್ದಾರೆ.
* ಹುಡುಗನೊಬ್ಬ ಪಾರ್ಕ್ ನಲ್ಲಿ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಮಜಾ ಮಾಡುತ್ತಾ ನಿಂತಿದ್ದ.
ಒಬ್ಬರು ಅಜ್ಜ ಅಲ್ಲಿಂದಲೇ ಹೋಗುತ್ತಿದ್ದಾಗ ಆ ದೃಶ್ಯ ಯಾಕೋ ಅವರಿಗೆ ಸರಿ ಕಾಣಲಿಲ್ಲ, ಹೀಗಾಗಿ ಆ ಯುವಕನಿಗೆ, ಇದು ನಮ್ಮ ಸಂಸ್ಕೃತಿ ಏನಪ್ಪಾ? ಎಂದರು.
ಅದಕ್ಕೆ ಯುವಕ ಥಟ್ಟನೆ, ಅಲ್ಲ ಅಜ್ಜ ಈಕೆ ಸಂಗಮೇಶ್ವರ ಅಂಕಲ್ ಅವರ ಮಗಳು ಸಂಜನಾ ಇದ್ದಾಳೆ. ನಿಮ್ಮ ಸಂಸ್ಕೃತಿ ಇಲ್ಲೇ ಎಲ್ಲೋ ಬೇರೆ ಮರದ ಮರೆಯಲ್ಲಿ ಕುಳಿತಿರಬೇಕು ನೋಡಿ… ಎನ್ನುತ್ತಾನೆ.
* ಹುಡುಗಿ – ಜಾನು, ನೀನು ನನ್ನನ್ನು ಅದೆಷ್ಟು ಪ್ರೀತಿ ಮಾಡುತ್ತಿ ಅಂತ ಹೇಳ್ತೀಯಾ?
ಹುಡುಗ – ಷಹಜಹಾನ್ ನಷ್ಟು.
ಹುಡುಗಿ – ಹಾಗಾದರೆ ತಾಜ್ ಮಹಲ್ ತಯಾರಿಸುವೆಯಾ.
ಹುಡುಗ – ಜಮೀನ್ ಎಲ್ಲ ಖರೀದಿಯಾಗಿ ರೆಡಿ ಇದೆ. ಇನ್ನೇನು ನೀನು ಸಾಯುವದಷ್ಟೇ ದಾರಿ ಕಾಯ್ತಾ ಇದ್ದೇನೆ.
* ರಿಷಿ ತನ್ನ ಕುಟುಂಬದೊಂದಿಗೆ ಹುಡುಗಿಯನ್ನು ನೋಡಲು ಹೋದ…
ಹುಡುಗಿಯ ಕಡೆಯವರು ಹುಡುಗಿಯ ಸೌಂದರ್ಯದ ಪ್ರಶಂಸೆಯನ್ನು ಈ ರೀತಿ ಮಾಡುತ್ತಾರೆ,
ನಮ್ಮ ಹುಡುಗಿ ಸೃಷ್ಟಿಯ ವಾಯ್ಸು ಕೋಗಿಲೆಯ ತರ ಇದೆ, ಕೊರಳು ನವಿಲಿನ ಹಾಗೆ ಇದೆ, ನಡೆ ಜಿಂಕೆಯ ಹಾಗೆ ಮತ್ತು ಸ್ವಭಾವ ಹಸುವಿನ ತರ ಇದೆ ಎಂದುದನ್ನು ಕೇಳಿ ರಿಷಿ ಗಾಬರಿಯಾಗಿ,
ಮತ್ತೆ ಈಕೆಯಲ್ಲಿ ಮನುಷ್ಯನ ಯಾವ ಗುಣಗಳೂ ಇಲ್ಲವೇ ಇಲ್ವಾ?