Articles

ನೆಲದ ಮೇಲಿನ ಬೇಟೆ ನೋಡಿಯಾಯ್ತು; ಮೊಸಳೆಯ ಭದ್ರ ಕೋಟೆಯಲ್ಲಿ ಹೊಕ್ಕು ಉಸಿರು ಬಿಗಿ ಹಿಡಿದು ಬೇಟೆಯಾಡಿದ ಚಿರತೆಯ ಅದ್ಭುತವಾದ ವಿಡಿಯೋ ವೈರಲ್!

ಸೋಶಿಯಲ್ ಮೀಡಿಯಾ ಅವರವರ ಇಷ್ಟಕ್ಕೆ ತಕ್ಕಂತೆ ಕಂಟೆಂಟ್ ಗಳನ್ನು ತಂದು ನೀಡುತ್ತದೆ. ವೈಲ್ಡ್ ಲೈಫ್ ಇಷ್ಟಪಡುವವರಿಗಾಗಿ ಒಂದು ಸಕ್ಕತ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋದಲ್ಲಿ ಚಿರತೆಯು ನೀರಿನಲ್ಲಿ ಅದ್ಭುತವಾಗಿ ಬೇಟೆಯನ್ನು ಆಡಿದೆ.

ಇಲ್ಲಿಯವರೆಗೆ ಚಿರತೆಯು ಕಾಡಿನಲ್ಲಿ ಬೇಟೆಯಾಡಿದ್ದನ್ನು ಸಾಕಷ್ಟು ಸಲ ನೋಡಿದ್ದೇವೆ. ಆದರೆ ಮೊಸಳೆಯ ಭದ್ರಕೋಟೆಯಾದ ನೀರಿನಲ್ಲಿ ನುಗ್ಗಿ ಅದರದೇ ಬೇಟೆಯಾಡಿದ ಅದ್ಭುತವಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡುವಾಗ ಮೊದಲು ನೀರಿನಲ್ಲಿ ಏನು ನಡೆಯುತ್ತಿದೆ ಎಂಬುದು ಬೇಗನೆ ತಿಳಿದುಬರುವುದಿಲ್ಲ. ನಂತರ ಇಲ್ಲಿ ಚಿರತೆಯೇ ಮೊಸಳೆಯ ಬಲಿಷ್ಠ ದವಡೆಯಲ್ಲಿ ಸಿಲುಕಿದೆ ಎಂಬ ಸಂಶಯವೂ ಸಹ ಮೂಡುತ್ತದೆ. ಯಾಕೆಂದರೆ ಚಿರತೆಯು ಎರಡು ಮೂರು ಸಲ ನೀರಿನಲ್ಲಿ ಮುಳುಗಿ ಮೊಸಳೆಯ ಬೇಟೆಯಾಡಿದೆ. ಈ ಸಂದರ್ಭದಲ್ಲಿ ಅದಕ್ಕೆ ತುಂಬಾ ಉಸಿರಿನ ತೊಂದರೆಯಾಗಿದೆ. ಆದರೂ ಚಿರತೆ ಕೊನೆಗೆ ತನ್ನ ಬೇಟೆಯನ್ನು ಮಣಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಬೇಟೆಯಾಡುವ ತನಕ ಚಿರತೆಯು ನೀರಿನಲ್ಲಿ ಮೊಸಳೆಯ ಜೊತೆಗೆ ಅದ್ಭುತವಾಗಿ ಸಂಘರ್ಷ ಮಾಡಿದೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಚಿರತೆಯು ಬೇಟೆಯಾಡುವುದರಲ್ಲಿ ತುಂಬಾ ಕತರ್ನಾಕ್ ಪ್ರಾಣಿಯೆಂದು ಪರಿಗಣಿಸಲಾಗುತ್ತದೆ. ಆದರೆ ಅದು ನೀರಿನಲ್ಲಿಯೂ ಸಹ ಎಷ್ಟೊಂದು ಅಪಾಯಕರ ಬೇಟೆಯಾಡುವ ಪ್ರಾಣಿಯಾಗಿದೆ ಎಂಬುದು ಈ ವಿಡಿಯೋದಿಂದ ತಿಳಿದುಬರುತ್ತದೆ.

ವೀಡಿಯೋ ನೋಡಿ

ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ FiveZero safaris ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇದನ್ನು ಮೂರೇ ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ವೈಲ್ಡ್ ಲೈಫ್ ಇಷ್ಟಪಡುವವರು ಈ ವಿಡಿಯೋವನ್ನು ಇಲ್ಲಿಯವರೆಗೆ ಸಾಕಷ್ಟು ಸಲ ವೀಕ್ಷಿಸಿದ್ದಾರೆ. ಸುಮಾರು ಎರಡುವರೆ ಲಕ್ಷ ಜನರಿಗೂ ಮೇಲ್ಪಟ್ಟು ವೀಕ್ಷಿಸಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *