ಮಹಡಿಯ ಕಿಟಕಿಯಿಂದಲೇ ಕಸ ಬಿಸಾಕಲು ಯತ್ನಿಸುತ್ತಿದ್ದ ಭೂಪ ಆಯತಪ್ಪಿ ಮೇಲಿನಿಂದ ತಾನೇ ಕಸದ ವಾಹನದಲ್ಲಿ ಬಿದ್ದ ವಿಡಿಯೋ ವೈರಲ್ ಹೇಗೆ ನೀವೇ ನೋಡಿ…
ಮನುಷ್ಯನಿಗೆ ಇಂದಿನ ದಿನಗಳಲ್ಲಿ ಹೇಳತೀರದಷ್ಟು ಸೌಲಭ್ಯಗಳು ದೊರೆತರೂ ಸಹಿತ ತನ್ನ ಕೆಲಸಗಳಲ್ಲಿ ಮತ್ತೆ ಏನನ್ನಾದರೂ ಶಾರ್ಟ್ ಕಟ್ ಹುಡುಕುತ್ತಲೇ ಇರುತ್ತಾನೆ. ಹೀಗಾಗಿ ಮೈ ಉಳಿಸುವ ನೆಪದಲ್ಲಿ ಕೆಲವೊಮ್ಮೆ ದೊಡ್ಡ ದೊಡ್ಡ ಸಮಸ್ಯೆಗಳಿಗೆ ತುತ್ತಾಗುತ್ತಾನೆ.
ಇದೇ ರೀತಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ವ್ಯಕ್ತಿಯು ಕಸ ಹೊತ್ತೊಯ್ಯುವ ವಾಹನ ಬಂದಾಗ ಎರಡನೆಯ ಮಹಡಿಯಿಂದ ಕೆಳಗೆ ಯಾರು ಬರಬೇಕೆಂದು ಮನೆಯ ಕಿಟಕಿಯಿಂದಲೇ ನೇರವಾಗಿ ಕಸ ವಾಹನದಲ್ಲಿ ಬಿಸಾಕಲು ವಿಫಲ ಯತ್ನವನ್ನು ಮಾಡಿ ಆಯ ತಪ್ಪಿ ತಾನೇ ಕಸದ ಜೊತೆಗೆ ಕಸ ತುಂಬಿದ ವಾಹನದಲ್ಲಿ ಬಿದ್ದಿದ್ದಾನೆ.
ಈ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ದಿಪಾಂಶು ಕಾಬರಾ ಹೆಸರಿನ ವ್ಯಕ್ತಿಯೊಬ್ಬರು ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ತರತರದ ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಸ್ವತಃ ದಿಪಾಂಶು ಅವರು ಹೀಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಬರೀ ಕಸ ಚೆಲ್ಲಬೇಕಷ್ಟೇ, ಕಸದ ಜೊತೆಗೆ ತಮ್ಮನ್ನೂ ಅಲ್ಲ.
ಮನುಷ್ಯ ಕೆಲವು ಸಲ ಶ್ರಮದಿಂದ ತನ್ನನ್ನು ತಾನು ಉಳಿಸಿಕೊಳ್ಳಲು ಏನಾದರೂ ಹೊಸ ಐಡಿಯಾ ಅಥವಾ ಪ್ರಯೋಗ ಮಾಡಲು ಹೋಗಿ ತುಂಬಾ ಸಮಸ್ಯೆಗೆ ಒಳಪಡುವನು. ವ್ಯಕ್ತಿಯು ಇಲ್ಲಿ ಎರಡನೆಯ ಮಹಡಿಯಿಂದ ಪಾಲಿಥಿನ್ ನಲ್ಲಿ ತುಂಬಿದ ಭಾರದ ಕಸದ ಚೀಲವನ್ನು ಒಗೆಯಲು ಹೆಣಗಾಡಿ ಕೊನೆಗೆ ಕಸದ ಜೊತೆಗೆ ತಾನೇ ಕಸದ ಗುಡ್ಡೆಯ ವಾಹನದಲ್ಲಿ ಬಿದ್ದಿರುವುದು ನಿಜಕ್ಕೂ ತಮಾಷೆಯಾಗಿದೆ. ಅದೃಷ್ಟಕ್ಕೆ ದೇವರ ದಯೆಯಿಂದ ವ್ಯಕ್ತಿಗೆ ಗಂಭೀರ ಪೆಟ್ಟು ತಗುಲಿಲ್ಲ.
ವಿಡಿಯೋ ನೋಡಿ.
कचरा फेंकना है,
— Dipanshu Kabra (@ipskabra) February 9, 2021
कचरे के साथ फेंका नहीं जाना है😅.
रोज़मर्रा के कामों में भी ज़रा सी लापरवाही से बड़ी घटनाएं हो सकती है. इसलिए हमेशा सावधान रहें, ऐसे शॉर्टकट से बचें एवं घर में ऐसा कोई स्थान है जिससे दुर्घटना हो सकती है तो बचाव के उचित उपाय करें. जैसे कि ऊंची बॉउंड्री बनवाना आदि pic.twitter.com/eBR0ZR5jwl
ಫೆಬ್ರುವರಿ 9 ರಂದು ಶೇರ್ ಮಾಡಿದ ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು 20 ಸಾವಿರದ ವರೆಗೆ ವಿಕ್ಷಿಸಲಾಗಿದೆ. ಸಾವಿರ ಸಮೀಪ ಲೈಕ್ಸ್ ಗಳು ಮತ್ತು ರೀಟ್ವೀಟ್ ಗಳು ಸಹ ಬಂದಿವೆ.