Articles

Video: ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಹುಲಿಯ ಮರಿಗಳಿಗೆ ಹಾಲುಣಿಸಿದ ನಾಯಿ, ಮಾನವೀಯತೆ ಪ್ರಾಣಿಗಳಲ್ಲೂ ಸಹ ಇರುತ್ತೆ ಅಂತ ತೋರಿಸಿಕೊಟ್ಟ ಶ್ವಾನ!!!

ಜಗತ್ತಿನಲ್ಲಿಯೇ ವಿಶ್ವಾಸಕ್ಕೆ ಪಾತ್ರವಾದ ಪ್ರಾಣಿಗಳಲ್ಲಿ ಮೊದಲ ನಂಬರ್ ನಾಯಿಯದೇ ಎಂದರೆ ತಪ್ಪಲ್ಲ. ಇದು ತುಂಬಾ ಜಾಣ ಪ್ರಾಣಿಯಾಗಿರುವುದರೊಂದಿಗೆ ತನ್ನ ಮಾಲೀಕನ ಜೊತೆಗೆ ಯಾವತ್ತೂ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇದು ಮಾನವನ ನಿಜವಾದ ಮಿತ್ರನಾಗಿದೆ. ಈ ಪ್ರಾಣಿಯು ತನ್ನ ಮಾಲೀಕ ಅಪಾಯದಲ್ಲಿ ಸಿಲುಕಿದಾಗ ತನ್ನ ಪ್ರಾಣವನ್ನೂ ಸಹ ಲೆಕ್ಕಿಸದೆ ಮಾಲೀಕನ ಪ್ರಾಣ ಉಳಿಸುವುದಕ್ಕಾಗಿ ಹೋರಾಡಿದ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಸದ್ಯ ನಾಯಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಈ ವೀಡಿಯೋದಲ್ಲಿ ಶ್ವಾನ ಮಾನವಿಯತೆಯನ್ನು ತೋರಿಸಿಕೊಟ್ಟಿದೆ. ನಾವು ಕೇವಲ ಮನುಷ್ಯರಲ್ಲಿ ಮಾತ್ರ ಮಾನವಿಯತೆ ಇರುತ್ತೆ ಅಂತ ಅಂದುಕೊಂಡರೆ ಅದು ತಪ್ಪಾಗುತ್ತೆ ಕೆಲವು ಪ್ರಾಣಿಗಳಲ್ಲಿ ಸಹ ಈ ಗುಣವನ್ನು ನಾವು ಕಾಣಬಹುದು. ಪ್ರಸ್ತುತ ವೈರಲ್ ವಾಗುತ್ತಿರುವ ವೀಡಿಯೋದಲ್ಲಿ ಮಾತೃ ವಾತ್ಸಲ್ಯ ಕಂಡು ಬರುತ್ತದೆ. ಮೂರು ಹುಲಿಯ ಮರಿಗಳು ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದವು. ತಾಯಿ ಇಲ್ಲದ ಬದುಕು ಮಕ್ಕಳ ಪಾಲಿಗೆ ನರಕ ಇದ್ದ ಹಾಗೆ, ಅದೇ ತರ ಈ ಹುಲಿಯ ಮರಿಗಳು ಸಹ ತಾಯಿಯನ್ನು ಕಳೆದುಕೊಂಡು ತುಂಬಾ ಸಂಕಟ ಪಡುತ್ತಿದ್ದವು. ಹಸಿವಿನಿಂದ ಬಳಲುತ್ತಿದ್ದವು ಇದನ್ನು ಕಂಡ ಹೆಣ್ಣು ನಾಯಿ ನೇರವಾಗಿ ಆ ಹುಲಿಯ ಮರಿಗಳ ಬಳಿಯಲ್ಲಿ ಹೋಗುತ್ತದೆ. ತದನಂತರ ಕೆಳಗಡೆ ಕುಳಿತುಕೊಂಡು ಅವುಗಳಿಗೆ ತನ್ನ ಹಾಲುಣಿಸಲು ಪ್ರಾರಂಭ ಮಾಡಿತು. ಪಾಪ ಹುಲಿಯ ಮರಿಗಳಿಗೇನು ಗೊತ್ತು ಇದು ಹುಲಿಯಲ್ಲ ನಾಯಿ ಅಂತ. ಅವುಗಳಿಗೆ ಹಸಿವಾಗಿದ್ದರಿಂದ ಹಾಲು ಕುಡಿಯುವದು ಮಾತ್ರ ಅವುಗಳ ಉದ್ದೇಶವಾಗಿತ್ತು.

ನಾಯಿ ಆ ಹುಲಿಯ ಮೂರು ಮರಿಗಳಿಗೆ ಹೊಟ್ಟೆ ತುಂಬಾ ಹಾಲು ಕುಡಿಸುತ್ತದೆ. ಮರಿಗಳು ಸಹ ಏನು ಭಯ ಪಡದೆ ನಾಯಿಯ ಹಾಲನ್ನು ಕುಡಿಯುತ್ತವೆ. ಯಾರೋ ಹೆತ್ತ ಮಕ್ಕಳನ್ನು ಕಂಡರೆ ಇಂದಿನ ಜನರು ಅ#ಸಹ್ಯ ಪಡುತ್ತಾರೆ. ಯಾವದೋ ಮಗು ಹಸಿವಿನಿಂದ ಬಳಲುತ್ತಿದ್ದರೆ ನೋಡಿಯೂ ನೋಡದ ಹಾಗೆ ಹೊರಟು ಹೋಗುತ್ತಾರೆ ಇಂದಿನ ಜನರು. ಆದರೆ ಎಲ್ಲರೂ ಹಾಗೆ ಇರುತ್ತಾರೆ ಅಂತ ಹೇಳೋಕೆ ಸಾಧ್ಯವಿಲ್ಲ, ಕೆಲವರು ಮತ್ತೊಬ್ಬರು ಹಸಿವು ಅಂತ ಬಂದರೆ ಸಾಕು ತಮ್ಮ ಕೈಯಲಾದಷ್ಟು ಸಹಾಯ ಮಾಡುತ್ತಾರೆ ಅಂತಹ ಪುಣ್ಯಾತ್ಮರು ಸಹ ಇದ್ದಾರೆ ಈ ಜಗತ್ತಿನಲ್ಲಿ. ಈ ನಾಯಿ ಹುಲಿಯ ಮರಿಗಳಿಗೆ ಹಾಲು ಹೇಗೆ ನೀಡುವದು ಎಂಬ ಸಂಕೋಚ ಪಡದೆ ತನ್ನ ಮರಿಗಳು ಇದ್ದ ಹಾಗೆ ಅವುಗಳಿಗೆ ಪ್ರೀತಿಯಿಂದ ಹಾಲುಣಿಸುತ್ತದೆ ಈ ಶ್ವಾನ.

ವಿಡಿಯೋ ನೋಡಿ.

ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ lions.savena and dog_jorden_wolf ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ ಇದುವರೆಗೆ ಈ ವೀಡಿಯೋಗೆ ಒಂದು ಲಕ್ಷಕ್ಕಿಂತಾ ಹೆಚ್ಚು ಲೈಕ್ಸ್ ಬಂದಿವೆ. ಅಲ್ಲದೆ ಸಾವಿರಕ್ಕೂ ಹೆಚ್ಚು ಕಾಮೆಂಟ್ ಸಹ ಬಂದಿವೆ. ಕಾಮೆಂಟ್ ನಲ್ಲಿಯ ನಾಯಿಯ ಕುರಿತು ಹೊಗಳಿದ್ದಾರೆ.

Leave a Comment

Your email address will not be published. Required fields are marked *