ಮಾಲ್ಡೀವ್ಸ್ ನಲ್ಲಿ ತನ್ನ ಸ್ವಿಮ್ಮಿಂಗ್ ಸೂಟ್ ಕಲೆಕ್ಷನ್ ತೋರಿಸುತ್ತಿರುವ ಜಾಹ್ನವಿ ಕಪೂರ್: ಹಾಟ್, ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ
ಬಾಲಿವುಡ್ ನ ಸೆಲೆಬ್ರಿಟಿಗಳು ಸ್ವಲ್ಪ ಸಮಯ ಸಿಕ್ಕರೆ ಸಾಕು, ಕೂಡಲೇ ವೆಕೇಶನ್ ಎಂದು ವಿದೇಶಗಳಿಗೆ ಹಾರುವುದು ಬಹಳ ಸಾಮಾನ್ಯವಾದ ವಿಷಯವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಾಲ್ಡಿವ್ಸ್ ತಮ್ಮ ನೆಚ್ಚಿನ ವೆಕೇಶನ್ ಸ್ಪಾಟ್ ಆಗಿ ಬದಲಾಗಿದೆ. ಬಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣದ ನಟ ನಟಿಯರು ಕೂಡಾ ಮಾಲ್ಡೀವ್ಸ್ ಗೆ ರಜೆ ಕಳೆಯಲು ಹೋಗುವುದು ಸಾಮಾನ್ಯ ಎನಿಸಿದೆ. ಇತ್ತೀಚಿಗೆ ಬಾಲಿವುಡ್ ನ ವರುಣ್ ಧವನ್ , ಶ್ರದ್ದ ಕಪೂರ್, ಸಾರಾ ಅಲಿಖಾನ್, ತಾರಾ ಸುತಾರಿಯ, ಕಿಯಾರಾ ಅಡ್ವಾನಿ ಹಾಗೂ ಅನನ್ಯ ಪಾಂಡೆ ಮಾಲ್ಡೀವ್ಸ್ ಗೆ ಹೋಗಿದ್ದರು. ಈಗ ಅವರ ನಂತರ ರೂಹಿ ಸಿನಿಮಾದ ನಾಯಕಿ, ಭಾರತೀಯ ಚಿತ್ರರಂಗದ ಮರೆಯಲಾಗದ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ತಮ್ಮ ವೆಕೇಶನ್ ಕಳೆಯಲು ಮಾಲ್ಡೀವ್ಸ್ ಗೆ ಹಾರಿದ್ದಾರೆ.
ಜಾಹ್ನವಿ ಇತ್ತೀಚಿಗೆ ನಟಿಸಿ ಬಿಡುಗಡೆಯಾದಂತಹ ರೂಹಿ ಸಿನಿಮಾ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಜಾಹ್ನವಿ ಅವರ ಪಾತ್ರಕ್ಕೆ ಕೂಡಾ ಸಾಕಷ್ಟು ದೊಡ್ಡ ಮಟ್ಟದ ಮೆಚ್ಚುಗೆಗಳು ಹರಿದು ಬಂದಿದೆ. ತನ್ನ ಹೊಸ ಸಿನಿಮಾ ಹಿಟ್ ಆದ ಕೂಡಲೇ ಜಾಹ್ನವಿ ತಮ್ಮ ಸ್ನೇಹಿತೆಯರೊಂದಿಗೆ ರಜೆಯನ್ನು ಎಂಜಾಯ್ ಮಾಡಲು ವಿಡಿಯೋಸ್ ದ್ವೀಪಕ್ಕೆ ಹಾರಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಜಾಹ್ನವಿ ಕಪೂರ್ ಆಗಾಗ ತಮ್ಮ ಅಂದವಾದ ಫೋಟೋಗಳನ್ನು ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
ಮಾಲ್ಡೀವ್ಸ್ ನಲ್ಲಿ ರಜಾ ದಿನಗಳನ್ನು ಕಳೆಯುವ ಸಂದರ್ಭದಲ್ಲಿ ಜಾಹ್ನವಿ ಕಪೂರ್ ಒಂದಾದ ನಂತರ ಮತ್ತೊಂದು ಎನ್ನುವಂತೆ ತಾನು ಬಿಕಿನಿ ಮತ್ತು ಸ್ವಿಮ್ಮಿಂಗ್ ಸೂಟ್ ಧರಿಸಿ ರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತನ್ನ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಜಾಹ್ನವಿ ಕಪೂರ್ ಸೋಷಿಯಲ್ ಮೀಡಿಯಾದ ತಾಪಮಾನವನ್ನು ಹೆಚ್ಚಿಸುತ್ತಿದ್ದಾರೆ. ಕಳೆದ ಗುರುವಾರ ರಾತ್ರಿ ಜಾಹ್ನವಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡ ಫೋಟೋದಲ್ಲಿ ಸಿಲ್ವರ್ ಮೆಟಾಲಿಕ್ ಕಲರ್ ನ ಸಿಮ್ಮಿಂಗ್ ಸೂಟ್ ಧರಿಸಿರುವುದನ್ನು ನೋಡಬಹುದು.
ಜಾಹ್ನವಿ ಹಂಚಿಕೊಳ್ಳುತ್ತಿರುವ ಫೋಟೋಗಳು ವಿಶೇಷವಾಗಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರಿಗೆ ಬಹಳ ಇಷ್ಟವಾಗುತ್ತಿದೆ. ಜಾಹ್ನವಿ ಶೇರ್ ಮಾಡುವ ಫೋಟೋಗಳಿಗೆ ನೆಟ್ಟಿಗರು ಕೂಡ ಭರ್ಜರಿಯಾಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಫೋಟೋವನ್ನು ಶೇರ್ ಮಾಡಿಕೊಂಡ ಜಾಹ್ನವಿ ಅದರ ಶೀರ್ಷಿಕೆಯಲ್ಲಿ ಬಹಳ ಸಂತೋಷದಾಯಕ ವಾದ ಕ್ಷಣಗಳು ಎಂದು ಬರೆದುಕೊಂಡಿದ್ದು, ತನ್ನ ಗೆಳತಿಯರೊಂದಿಗೆ ಮಾಲ್ಡೀವ್ಸ್ ನ ರಮ್ಯ ವಾತಾವರಣದಲ್ಲಿ ರಜಾದಿನಗಳನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಸಿನಿಮಾದ ವಿಷಯಗಳಿಗೆ ಬಂದರೆ ಜಾಹ್ನವಿ ಇತ್ತೀಚಿಗಷ್ಟೇ ರೂಹಿ ಸಿನಿಮಾವನ್ನು ಮುಗಿಸಿ ಅದು ಬಿಡುಗಡೆಯಾಗಿ ಯಶಸ್ಸನ್ನು ಪಡೆದುಕೊಂಡಿದೆ.
ಇನ್ನು ರೂಹಿ ನಂತರ ಕೂಡಾ ಜಾಹ್ನವಿ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ. ಕೊರೊನಾ ಭೀ ತಿ ಕಡಿಮೆಯಾದ ಕೂಡಲೇ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಜಾಹ್ನವಿ ಬಾಲಿವುಡ್ ನ ಬಹುನಿರೀಕ್ಷಿತ ದೋಸ್ತಾನ 2, ತಖ್ತ್ , ಬಾಂಬೆ ಗರ್ಲ್ ಹಾಗೂ ರಣಭೂಮಿ ಎನ್ನುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ನಟಿಸಲಿರುವ ತಖ್ತ್ ಮಲ್ಟಿ ಸ್ಟಾರರ್ ಸಿನಿಮಾ ಆಗಿದ್ದು ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್, ವಿಕ್ಜಿ ಕೌಶಲ್ ಹಾಗೂ ಇನ್ನಿತರೆ ನಟ ನಟಿಯರು ನಟಿಸುತ್ತಿದ್ದು ಜಾಹ್ನವಿ ಕೂಡಾ ಈ ಸಿನಿಮಾದ ಭಾಗವಾಗಿದ್ದಾರೆ.