Articles

ಇಳಿವಯಸ್ಸಿನಲ್ಲಿಯೂ ಬೆಳೆಯೋ ವಯಸ್ಸಿನವರ ಹಾಗೆ ಡಾನ್ಸ್ ಮಾಡಿದ ಅಜ್ಜಿಯ ಸುಂದರ ವಿಡಿಯೋ ವೈರಲ್…

ಈಗಿನ ಜನರೇಶನ್ ನ ಹೆಚ್ಚುಕಡಿಮೆ ಎಲ್ಲರಿಗೂ ಡಾನ್ಸ್ ಎಂದರೆ ತುಂಬಾ ಇಷ್ಟವಾಗುತ್ತದೆ. ಇನ್ನು ಇದರಲ್ಲಿ ಕುಣಿಯುವುದು ಮತ್ತು ನೋಡುವುದು ಎರಡೂ ಬಂತು. ಮನುಷ್ಯನಿಗೆ ಅತಿ ಸಂತೋಷವಾದಾಗ ಆತ ತನ್ನ ಸಂತೋಷವನ್ನು ಅನೇಕ ರೀತಿಯಲ್ಲಿ ವ್ಯಕ್ತ ಮಾಡುತ್ತಾನೆ. ಕೆಲವರು ನೃತ್ಯ ಮಾಡಿ ತಮ್ಮ ಆನಂದವನ್ನು ದ್ವಿಗುಣಿತಗೊಳಿಸುತ್ತಾರೆ.

ಈಗ ಅಜ್ಜಿಯೊಬ್ಬಳು ಮನೆಯ ಟೆರೆಸ್ ಮೇಲೆ ತನ್ನ ವಯಸ್ಸನ್ನು ಮರೆತು ಮನಸೋ ಇಚ್ಛೆ ಹೊಟ್ಟೆ ತುಂಬುವವರೆಗೆ ನೃತ್ಯ ಮಾಡಿದ್ದಾಳೆ. ಇದೇ ನೃತ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಕಡೆಗೂ ವೈರಲ್ ಆಗುತ್ತಿದೆ. ಮನುಷ್ಯ ತನ್ನ ಖುಷಿಯನ್ನು ವ್ಯಕ್ತ ಮಾಡಲು ಯಾವುದೇ ರೀತಿಯ ಅಡ್ಡಿ-ಆತಂಕಗಳು ಬರುವುದಿಲ್ಲ, ಬರೀ ಆತನ ಮನಸ್ಸು ಮಾತ್ರ ಧನಾತ್ಮಕವಾಗಿರಬೇಕು. ಅಜ್ಜಿ ಡ್ಯಾನ್ಸ್ ಮಾಡುವಾಗ ಆಕೆಯ ಮುಖದ ಮೇಲೆ ಕಂಡುಬರುತ್ತಿರುವ ಖುಷಿ ಮತ್ತು ಸಂತೋಷ ನೋಡಿದರೆ ಅಜ್ಜಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. ಜೊತೆಗೆ ವಯಸ್ಸು ಇದೊಂದು ಬರೀ ಅಂಕಿಅಂಶಗಳಷ್ಟೇ. ಸಂತೋಷ ಪಡಲು ಅಥವಾ ಖುಷಿ ಪಡಲು ಯಾವುದೇ ವಯಸ್ಸು ಎಲ್ಲಿಯೂ ಅಡ್ಡಿಯಾಗುವುದಿಲ್ಲ, ಎಂಬ ಸಂದೇಶ ಅಜ್ಜಿ ತನ್ನ ನೃತ್ಯದಿಂದ ನೀಡುತ್ತಿದ್ದಾಳೆನೋ ಎಂಬಂತೆ ಕಂಡು ಬರುತ್ತಿದೆ.

ನೋಡಿ ಅಜ್ಜಿಯ ಈ ನೃತ್ಯದ ವಿಡಿಯೋ…

Leave a Comment

Your email address will not be published. Required fields are marked *