“ಮೈದಾನಕ್ಕೆ ಮತ್ತೆ ಮರಳಲಿರುವ ಸಿಕ್ಸರ್ ಕಿಂಗ್”; ಯುವರಾಜ್ ಸಿಂಗ್ ಘೋಷಣೆ!
ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಸಿಕ್ಸರ್ ಕಿಂಗ್ ಎಂದೇ ಖ್ಯಾತರಾಗಿರುವ ಯುವರಾಜ್ ಸಿಂಗ್ ಸದ್ಯಕ್ಕೆ ಒಂದು ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮತ್ತೊಮ್ಮೆ ಮೈದಾನಕ್ಕಿಳಿಯುವುದಾಗಿ ಘೋಷಿಸಿದ್ದಾರೆ. “ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ” ಎಂದು ಹೇಳುವ ವಿಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ. ಮರಳಿ ತಾವು ಯಾವಾಗ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸಹ ಈ ಪೋಸ್ಟ್ ನಲ್ಲಿ ಯುವರಾಜ ಸ್ಪಷ್ಟ ಪಡಿಸಿದ್ದಾರೆ.
ಯುವರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಆಡಿದ ಕೆಲವು ಅದ್ಭುತ ಆಟಗಳ ಉದಾಹರಣೆಯನ್ನು ನೀಡಿದ್ದಾರೆ. ಈ ವೀಡಿಯೊಗೆ ವಿವರಣೆಯನ್ನು ಸಹ ಒದಗಿಸಲಾಗಿದೆ. ಅದರಲ್ಲಿ, “ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ . ಅಭಿಮಾನಿಗಳ ಪ್ರೀತಿಗಾಗಿ, ಫೆಬ್ರವರಿಯಲ್ಲಿ ಮತ್ತೆ ಪಿಚ್ ನಲ್ಲಿ ಕಾಣಿಸಿಕೊಳ್ಳುವೆ ಎಂಬ ಆಸೆ ಇದೆ. ಈ ಭಾವನೆ ಮುಂದೆ ಏನೂ ಇಲ್ಲ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು. ಈ ಅದೃಷ್ಟ ನನಗೆ ದೊಡ್ಡ ವಿಷಯವಾಗಿದೆ. ನಮ್ಮ ತಂಡವನ್ನು ಬೆಂಬಲಿಸಿ ಮತ್ತು ನಿಜವಾದ ಅಭಿಮಾನಿ ಕಷ್ಟದ ಸಮಯದಲ್ಲಿ ತಂಡದ ಸಲುವಾಗಿ ತನ್ನ ಬೆಂಬಲವನ್ನು ತೋರಿಸುತ್ತಾನೆ” ಎಂದು ವಿಡಿಯೋ ಗೆ ಕ್ಯಾಪ್ಶನ್ ಬರೆದಿದ್ದಾರೆ.
ನಿವೃತ್ತಿಯ ನಂತರ ಫ್ರಾಂಚೈಸಿ ಕ್ರಿಕೆಟ್ ಆಡಿದರು.
ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. ನಂತರ ಅವರು ಪ್ರಪಂಚದಾದ್ಯಂತ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡಿದರು. ಅವರು GT20 ಲೀಗ್‌ನಲ್ಲಿ ಟೊರೊಂಟೊ ನ್ಯಾಷನಲ್ಸ್ ದ ಪ್ರತಿನಿದಧಿತ್ವ ವಹಿಸಿದ್ದರು, ಜೊತೆಗೆ ಅಬುಧಾಬಿಯಲ್ಲಿ ನಡೆದ T10 ಪಂದ್ಯಾವಳಿಯಲ್ಲಿ ಅರೇಬಿಯಾ ಪರ ಆಡಿದರು. ಮಾರ್ಚ್ 2021 ರಲ್ಲಿ ರಸ್ತೆ ಸುರಕ್ಷತಾ ಸರಣಿಯ ಸಂದರ್ಭದಲ್ಲಿ ಅವರು ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡರು.
2011 ರ ವಿಶ್ವಕಪ್ನಲ್ಲಿ ತುಂಬಾ ಹೆಸರು ಗಳಿಸಿಕೊಂಡಿದ್ದರು.
2011ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ಈ ಟೂರ್ನಿಯಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ್ದರು. ಯುವರಾಜ್ 90.50 ಸರಾಸರಿಯಲ್ಲಿ 362 ರನ್ ಗಳಿಸಿ 15 ವಿಕೆಟ್ ಪಡೆದಿದ್ದರು. ಯುವರಾಜ್ 2011 ರ ವಿಶ್ವಕಪ್‌ನಲ್ಲಿ ತಮ್ಮ ಜೀವನದ ಅತ್ಯುತ್ತಮ ಕ್ರಿಕೆಟ್ ಆಡಿದರು ಆದರೆ ವಿಶ್ವಕಪ್‌ನ ಕೆಲವು ದಿನಗಳ ನಂತರ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತದನಂತರ ಅದರ ಮೇಲೆ ಸಫಲವಾಗಿ ವಿಜಯ್ ಸಾಧಿಸಿದರು. ಮರಳಿ ಬರಲಿರುವ ಯುವರಾಜ್ ಸಿಂಗ ಅವರಿಗೆ ನಮ್ಮ ಕಡೆಯಿಂದ ಹಾರ್ದಿಕ್ ಅಭಿನಂದನೆಗಳು!