ಮೊದಲ ಬಾರಿ ತನ್ನ ನೆರಳಿಗೆ ತಾನೇ ನೋಡಿ ಬೆಚ್ಚಿಬಿದ್ದು ಕಿರುಚಿದ ಬಾಲಕ; ನೋಡಿ ಅಪರೂಪದ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಮಕ್ಕಳ ವಿಡಿಯೋಗಳು ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತವೆ. ಮಕ್ಕಳ ಪ್ರತಿಯೊಂದು ಆಕ್ಟಿವಿಟಿ ನೋಡುಗರಿಗೆ ಇಷ್ಟವಾಗುತ್ತವೆ. ಅದರಲ್ಲೂ ಕೆಲವು ಅಪರೂಪದ ದೃಶ್ಯಗಳ ಕಂಡಾಗಂತೂ ನಕ್ಕು ನಕ್ಕು ಸಾಕಾಗುತ್ತದೆ.
ಸದ್ಯ ಇಲ್ಲಿ ನೋಡುವ ಚಿಕ್ಕ ಬಾಲಕನ ವಿಡಿಯೋ ದೃಶ್ಯ ಸಾಕಷ್ಟು ನಕ್ಕು ನಗಿಸುತ್ತದೆ. ಈ ವಿಡಿಯೋದಲ್ಲಿ ಮಗು ತನ್ನ ನೆರಳಿಗೆ ತಾನೇ ಹೆದರಿದ್ದಾನೆ. ಬಹುಶಃ ಹುಡುಗ ಮೊದಲಬಾರಿ ತನ್ನ ನೆರಳನ್ನು ನೋಡುತ್ತಿದ್ದಾನೆ ಎಂದು ತಿಳಿದು ಬರುತ್ತದೆ. ವಿಡಿಯೋದ ದೃಶ್ಯದಲ್ಲಿ ಕಂಡು ಬರುವ ಪ್ರಕಾರ ಮಗುವಿಗೆ ತನ್ನ ನೆರಳು ಫಾಲೋ ಮಾಡುತ್ತಿದೆ. ಮೊದಮೊದಲು ಆತ ಅದನ್ನು ತುಂಬಾ ಸೋಜಿಗದಿಂದ ನೋಡುತ್ತಾನೆ. ನಂತರ ಅದು ತನ್ನನ್ನೇ ಫಾಲೋ ಮಾಡುತ್ತಿರುವುದನ್ನು ನೋಡಿ ಗಾಬರಿಯಾಗುತ್ತಾನೆ. ಸ್ವಲ್ಪ ಅತ್ತಿತ್ತ ಚಲಿಸಿ ತನ್ನ ಬೆನ್ನು ಬಿಡುತ್ತದೆಏನೋ ಎಂದು ಪ್ರಯತ್ನಿಸುತ್ತಾನೆ. ಅಲ್ಲಿಯೂ ಸಫಲತೆ ಕಾಣದಾದಾಗ ಬಾಲಕ ಅದನ್ನು ನೋಡುತ್ತಾ ಹಿಂದೆ ಹಿಂದೆ ಸರಿಯುತ್ತಾನೆ. ಆಗ ಮಾತ್ರ ಹುಡುಗ ಸಖತ್ ಹೆದರಿ ಜೋರಾಗಿ ಕಿರುಚಿಕೊಳ್ಳುತ್ತಾನೆ. ಈ ಹಾಳಾದ ನೆರಳು ತನ್ನನ್ನು ಬಿಡುವುದೇ ಇಲ್ಲ ಎಂಬ ಭಾವನೆಗೆ ಬಂದು ಹುಡುಗ ತುಂಬಾ ಹೆದರಿಬಿಟ್ಟಿದ್ದಾನೆ. ಆತನ ಉಸಿರು ಅಲ್ಲಿ ಏರುಪೇರಾಗುತ್ತಿದ್ದರೆ ನೋಡುಗರಿಗೆ ಮಾತ್ರ ಈ ವಿಡಿಯೋ ದೊಡ್ಡ ತಮಾಷೆಯಾಗಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡಲಾಗಿದ್ದು ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ.