ಮೊಸಳೆಯ ರೂಪದಲ್ಲಿ ಬಂದ ಸಾವಿನಿಂದ ಹೆಜ್ಜೆಗಳ ಅಂತರದಲ್ಲಿ ತಪ್ಪಿಸಿಕೊಂಡ ಅದೃಷ್ಟವಂತ ಕಾಡು ಹಂದಿ

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ವೀಡಿಯೋಗಳಲ್ಲಿ ಅನೇಕ ಸಂದರ್ಭಗಳಲ್ಲಿ ಒಂದು ರೋಚಕತೆ, ರೋಮಾಂಚನ ಉಂಟು ಮಾಡುವಂತಹ ಸನ್ನಿವೇಶಗಳು ಹಾಗೂ ಊಹೆಗೂ ನಿಲುಕದ ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ಅನಾವರಣಗೊಳ್ಳುವುದನ್ನು ನಾವು ಗಮನಿಸುತ್ತೇವೆ‌. ಅದರಲ್ಲೂ ವಿಶೇಷ ಎಂದರೆ ವನ್ಯ ಜೀವಿಗಳ ಅಪರೂಪದ ಜೀವನದ ದೃಶ್ಯಗಳು, ಅವರು ಆಹಾರದ ಹುಡುಕಾಟದಲ್ಲಿ ಎದುರಿಸುವ ಅ ಪಾ ಯ ಆ ತಂ ಕ ಗಳು, ಬೇ ಟೆಯಾಡುವ ವಿಧಾನ, ಪ್ರಾಣಾಪಾಯದಿಂದ ಪಾರಾಗುವ ದೃಶ್ಯಗಳು ಹೀಗೆ ವೈವಿದ್ಯಮಯ ಎನಿಸುವ ಆದರೆ ಸಂಚಲನ ಉಂಟು ಮಾಡುವಂತಹ ವೀಡಿಯೋಗಳು ನೋಡಲು ಬಹಳ ಆಸಕ್ತಿಕರವಾಗಿರುತ್ತದೆ.

ಸಾಮಾನ್ಯವಾಗಿ ಬೇ ಟೆ ಯಾಡುವ ದೃಶ್ಯಗಳಲ್ಲಿ ಬಲಿಷ್ಠವಾದ ಪ್ರಾಣಿ ಮತ್ತೊಂದು ಪ್ರಾಣಿ ಯನ್ನು ಹಿಂಬಾಲಿಸಿ, ಅಟ್ಟಾಡಿಸಿ ಕೊಂಡು ಹೋಗಿ ಹಿಡಿಯುವ ವರೆಗೆ ಬಿಡುವುದಿಲ್ಲ. ಇದು ಸಾಮಾನ್ಯವಾಗಿ ನೋಡುವ ದೃಶ್ಯ. ಆದರೆ ನೀರಿನಲ್ಲಿರುವ ಮೊಸಳೆಗಳು ತಮ್ಮ ಬೇ ಟೆಯನ್ನು ಹಿಡಿಯುವ ವಿಧಾನ ನಿಜಕ್ಕೂ ಬಹಳ ವಿಭಿನ್ನವಾಗಿರುತ್ತದೆ.‌ ಏಕೆಂದರೆ ಇಲ್ಲಿ ಮೊಸಳೆಯ ಬೇ ಟೆ ಯ ವಿಧಾನ ನಿಜಕ್ಕೂ ಬಹಳ ರೋಚಕ ಹಾಗೂ ದಿ ಗ್ಭ್ರಾಂ ತಿಯನ್ನು ಕೂಡಾ ಉಂಟು ಮಾಡುತ್ತದೆ. ಮತ್ತೊಂದು ವಿಶೇಷ ಏನೆಂದರೆ ಬೇರೆ ಪ್ರಾಣಿಗಳು ತಮ್ಮ ಬೇ ಟೆ ಯ ಬೆನ್ನೆತ್ತಿ ಹೋದರೆ ಮೊಸಳೆಯ ವಿಚಾರದಲ್ಲಿ ಅದರ ಆಹಾರವೇ ಅದನ್ನು ಹುಡುಕಿ ಬರುತ್ತದೆ.

ಹೌದಲ್ಲವೇ? ಪ್ರಾಣಿಗಳು ತಮ್ಮ ದಾಹವನ್ನು ನೀಗಿಸಿಕೊಳ್ಳಲು ನೀರಿನ ಸೆಲೆ ಗಳ ಹಳಿ ಬರಲೇಬೇಕು. ಹಾಗೆ ಬಂದಾಗ ಆ ಜಲಮೂಲಗಳಲ್ಲಿ ಮೊಸಳೆಗಳ ಆವಾಸಸ್ಥಾನ ಇದ್ದರೆ, ಅಲ್ಲಿಗೆ ಬಾಯಾರಿಕೆ ನೀಗಿಸಿಕೊಳ್ಳುವ ಜೊತೆಗೆ ಪ್ರಾಣಿಗಳು ತಮ್ಮ ಪ್ರಾಣದ ಬಗ್ಗೆ ಕೂಡಾ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ನೀರು ಕುಡಿಯಲು ಬಂದ ಪ್ರಾಣಿಗಳು ಮೊಸಳೆಯ ಆಹಾರವಾಗುವುದು ಸತ್ಯ. ಈಗಾಗಲೇ ನಾವು ಅಂತಹ ಕೆಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ ಕೂಡಾ. ಆದರೆ ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಮಾತ್ರ ಊಹೆಗೂ ನಿಲುಕದ ಸನ್ನಿವೇಶ ದಾಖಲಾಗಿದೆ.‌

ಕಾಡು ಹಂದಿಯೊಂದು ಬಾಯಾರಿಕೆಯಿಂದ ತನ್ನ ದಾಹವನ್ನು ತೀರಿಸಿಕೊಳ್ಳುವ ನೀರಿನ ಬಳಿ ಬಂದಿದೆ. ‌ಕಾಡು ಹಂದಿ ನೀರಿನ ಬಳಿಗೆ ಬರುವಾಗಲೇ ಅನುಮಾನದಿಂದ ಬಂದಿದೆ. ಆದರೆ ಅನಂತರ ದಾಹ ನೀಗಿಸಿಕೊಳ್ಳಲು ನೀರಿನಲ್ಲಿ ತನ್ನ ಬಾಯಿಟ್ಟು ನೀರು ಕುಡಿಯುವಾಗಲೇ ಮೊಸಳೆಯೊಂದು ಸದ್ದಿಲ್ಲದೇ ಕಾಡು ಹಂದಿಯನ್ನು ತನ್ನ ಬೇ ಟೆ ಯನ್ನಾಗಿಸಿಕೊಳ್ಳಲು ನೀರಿನೊಳಗೆ ಸ್ವಲ್ಪವೂ ಸದ್ದಾಗದಂತೆ ಬಂದಿದೆ. ಆದರೆ ಕಾಡುಹಂದಿಯ ಅದೃಷ್ಟ ಎನ್ನುವಂತೆ ಅದಕ್ಕೆ ಮೊಸಳೆಯ ಸೂಚನೆ ದೊರೆತು ಸ್ವಲ್ಪ ಮುಂದೆ ಬಂದಿದೆ. ಅದೇ ಸಮಯಕ್ಕೆ ಸರಿಯಾಗಿ ಮೊಸಳೆ ತನ್ನ ಬಾಯಿ ತೆರೆದು ಹಂದಿಯನ್ನು ಹಿಡಿಯಲು ಪ್ರಯತ್ನ ಮಾಡಿದೆ.‌ ಆದರೆ ಕಾಡುಹಂದಿ ಆ ವೇಳೆಗೆ ಮುಂದೆ ಬಂದ ಕಾರಣ ಮೊಸಳೆಯ ಪ್ರಯತ್ನ ಸಫಲವಾಗಿಲ್ಲ.

ಅಂತೂ ಇಂತೂ ಕಾಡುಹಂದಿ ಅದೃಷ್ಟ ಸೂಪರ್ ಅನ್ಲೇ ಬೇಕು. ಅದು ಒಂದು ಹೆಜ್ಜೆ ಹಿಂದೆ ಹೋಗಿದಿದ್ದರೆ ಮೊಸಳೆಯ ಬಾಯಿಗೆ ಸಿಕ್ಕ, ಮೊಸಳೆಗೆ ಹಬ್ಬ ಆಗಿರುತ್ತಿತ್ತು. ವೈರಲ್ ಆದ ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಅದ್ಭುತ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರು ಕಾಡುಹಂದಿ ಕೆಲವೇ ಸೆಕೆಂಡ್ ಗಳಲ್ಲಿ ತಪ್ಪಿಸಿಕೊಂಡಿದ್ದು, ಅದರ ವೇಗ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಮೊಸಳೆಯ ಬಹಳ ಚಾಲಾಕಿತನದಿಂದ ತನ್ನ ಬೇ ಟೆಯನ್ನು ಹಿಡಿದು ಹಾಕುತ್ತದೆ ಆದರೆ ಈ ಬಾರಿ ಅದರ ಅದೃಷ್ಟ ಕೈ ಕೊಟ್ಟಿದೆ ಎಂದು ಕೂಡಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.