ವಿಡಿಯೋ; ಜನನಿಬಿಡ ಮುಂಬಯಿ ಬೀಚ್ ನಲ್ಲಿ ಉರ್ಫಿ ಜಾವೇದ್ ಕಂಡು ಬಂದರು Black ಬಿಕಿನಿಯಲ್ಲಿ..!

ಉರ್ಫಿ ತಮ್ಮ ಡ್ರೆಸ್ ಸೆನ್ಸ್ ನಿಂದಾಗಿ ಇಂಟರ್ನೆಟ್ ನಲ್ಲಿ ತುಂಬಾ ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ಆಕ್ಟಿಂಗ್ ಗಿಂತ ತೊಟ್ಟುಕೊಳ್ಳುವ ಡ್ರೆಸ್ ನಿಂದಾಗಿಯೇ ಎಲ್ಲರಿಗೂ ಹೆಚ್ಚು ಪರಿಚಿತರಾಗಿದ್ದಾರೆ. ಇವರು ತಮ್ಮ ಬಟ್ಟೆಗಳಿಂದ ಎಲ್ಲರಿಗೂ ಶಾಕ್ ನೀಡುವ ಅವಕಾಶ ಎಂದೂ ಕೈಯಿಂದ ಬಿಡುವದಿಲ್ಲ. ಇವರು ತೊಟ್ಟುಕೊಳ್ಳುವ ಡ್ರೆಸ್ ಒಮ್ಮೊಮ್ಮೆ ತುಂಬಾ ಬೋಲ್ಡ್ ಆಗಿರುತ್ತವೆ ಕೆಲವೊಮ್ಮೆ ತುಂಬಾ ಕ್ರಿಯೇಟಿವ್ ಆಗಿರುತ್ತವೆ. ತಮಗಿಷ್ಟವಾದ ಬಟ್ಟೆಗಳನ್ನು ತೊಟ್ಟುಕೊಳ್ಳುವದರ ಜೊತೆಗೆ ಯಾರ ಮುಲಾಜಿಗೂ ಹೆದರದೆ ಯಾರ ಮಾತಿನ ಕಡೆ ಕಿಂಚಿತ್ತೂ ಗಮನ ಹರಿಸದೆ ತುಂಬಾ ಸ್ಟೈಲ್ ನಲ್ಲಿ ಎಲ್ಲಿ ಬೇಕಾದರೂ ಯಾವ ಡ್ರೆಸ್ ಹಾಕಿಕೊಂಡು ತಿರುಗಾಡುತ್ತಾರೆ.

ಈಗ ಉರ್ಫಿ ಜಾವೇದ್ ತಾವು ತೊಟ್ಟುಕೊಂಡ ಡ್ರೆಸ್ ನಿಂದಾಗಿ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ಜನರಿಂದ ತುಂಬಿರುವ ಮುಂಬಯಿ ಬೀಚ್ ನಲ್ಲಿಯೇ ಬ್ಲ್ಯಾಕ್ ಬಿಕಿನಿ ಧರಿಸಿ ಸುತ್ತಾಡುತ್ತಿರುವ ವಿಡಿಯೋ ಒಂದನ್ನು ತಮ್ಮದೇ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ಬೀಚ್ ಹೆಚ್ಚಾಗಿ ಜನಸಾಮಾನ್ಯರಿಂದ ತುಂಬಿರುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by Uorfi (@urf7i)

ಪ್ರಸ್ತುತ ವಿಡಿಯೋದಲ್ಲಿ ಉರ್ಫಿ ಬ್ಲ್ಯಾಕ್ ಬಣ್ಣದ ಮೋನೋಕಿನಿ ಬಿಕಿನಿಯ ಮೇಲೆ ಬಿಳಿ ಬಣ್ಣದ ಸೀತ್ರೂ ಟಾಪ್ ತೊಟ್ಟಿದ್ದಾರೆ. ಈ ಬಟ್ಟೆಯಲ್ಲಿ ಉರ್ಫಿ ತುಂಬಾ ಎದ್ದು ಬೀಳುತ್ತಿದ್ದಾರೆ. ಹಾಗೂ ತುಂಬಾ ಕೂಲಾಗಿ ಬೀಚ್ ನಲ್ಲಿ ಸುತ್ತಾಡುತ್ತಿದ್ದಾರೆ. ಸಮುದ್ರದಲ್ಲಿ ಏಳುವ ಅಲೆಗಳೊಂದಿಗೆ ಆಟ ಆಡುತ್ತಾ ಮಜಾ ಮಾಡುತ್ತಿದ್ದಾರೆ. ತಮ್ಮ ವಿಡಿಯೋ ಜೊತೆಗೆ ನೀಡಿದ ಕ್ಯಾಪ್ಶನ್ ನಲ್ಲಿ ‘ಬೀಚ್ ಪರ್ ಸಬಸೆ ಖುಷ್’ ಅಂತ ಬರೆದಿದ್ದಾರೆ.