Articles

Video: ನಮ್ಮ ಕಾಲದಲ್ಲಿ ಹೀಗೆ ಕವಾಯತು ಮಾಡಿಸುವ ಟೀಚರ್ ಇದ್ದರೆ, ರವಿವಾರವೂ ಸಹ ರಜೆ ತೆಗೆದುಕೊಳ್ಳದೆ ಶಾಲೆಗೆ ಬರುತ್ತಿದ್ದೆವು.

ಶಾಲೆ ಕಲಿಯುವಾಗ ನಮಗೆ ಏನೂ ಇಷ್ಟ ಆಗದಿದ್ದರೂ ಎರಡು ವಿಷಯಗಳು ಮಾತ್ರ ತುಂಬಾ ಇಷ್ಟವಾಗುತ್ತಿದ್ದವು. ಒಂದು ಆಟ ಇನ್ನೊಂದು ಕವಾಯತು. ಶನಿವಾರದ ದಿವಸವಂತೂ ಸಂಪೂರ್ಣವಾಗಿ ಇದರಲ್ಲಿಯೇ ಹೋಗುತ್ತಿತ್ತು. ಮುಂಜಾನೆ ಒಮ್ಮೆ ಪ್ರಾರ್ಥನೆ ಆದರೆ ಆಯ್ತು ಹೆಚ್ಚುಕಡಿಮೆ ಶಾಲೆ ಬಿಡುವವರೆಗೂ ಎಕ್ಸರ್ಸೈಜ್ ನಡೆಯುತ್ತಿತ್ತು.

ಈ ಸಮಯದಲ್ಲಿ ಮೊದಮೊದಲು ಹತ್ತು ಹದಿನೈದು ನಿಮಿಷ ಇಂಟರೆಸ್ಟ್ ಬಂದರೂ ನಂತರ ಮಾತ್ರ ಕೈಕಾಲುಗಳ ನೋವು ಮತ್ತು ಕ್ರ್ಯಾಂಪ್ ಸ್ಟಾರ್ಟ್ ಆಗುತ್ತಿತ್ತು. ಎಕ್ಸರ್ಸೈಜ್ ನಿಂದ ವ್ಯಕ್ತಿಯಲ್ಲಿ ಧನಾತ್ಮಕ ಬದಲಾವಣೆಗಳು ಮಾತ್ರ ನಿಶ್ಚಿತವಾಗಿಯೂ ಆಗುತ್ತವೆ. ಈ ಅಂಕಣದಲ್ಲಿ ನಿಮಗಾಗಿ ಒಂದು ಸ್ಪೆಷಲ್ ಎಕ್ಸರ್ಸೈಜ್ ವಿಡಿಯೋ ಒಂದನ್ನು ತಂದಿದ್ದೇವೆ. ಇದನ್ನು ನೋಡಿದ ನಂತರ ನಿಮಗೆ ನಿಮ್ಮ ಕಳೆದ ಶಾಲೆಯ ದಿನಗಳು ನೆನಪಿಗೆ ಬರುತ್ತವೆ. ಜೊತೆಗೆ ನಾವು ಶಾಲೆ ಕಲಿಯುವ ಸಂದರ್ಭದಲ್ಲಿ ಈ ರೀತಿ ಎಕ್ಸರ್ಸೈಜ್ ಮಾಡಿಸುತ್ತಿದ್ದರೆ ತುಂಬಾ ಚೆನ್ನಾಗಿ ಇರುತ್ತಿತ್ತು. ಯಾಕೆಂದರೆ ಅಷ್ಟೊಂದು ಸುಂದರವಾದ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದಾಗ ನಿಶ್ಚಿತವಾಗಿಯೂ ಚಿಕ್ಕಂದಿನಲ್ಲಿಯ ಶಾಲೆಯ ದಿನಗಳ ನೆನಪುಗಳು ಮರುಕಳಿಸುತ್ತವೆ. ಏಕೆಂದರೆ ಈ ರೀತಿಯ ಕವಾಯತು ನಾವು ಶಾಲೆ ಕಲಿಯುವಾಗ ಹೆಚ್ಚಾಗಿ ಇರಲಿಲ್ಲ. ಹೀಗೆ ಸುಂದರವಾದ ಎಕ್ಸರ್ಸೈಜ್ ದಿನಂಪ್ರತಿ ನಮಗೆ ಮಾಡಿಸುತ್ತಿದ್ದರೆ ನಾವು ರವಿವಾರವೂ ಸಹ ಶಾಲೆಗೆ ಬರುತ್ತಿದ್ದೆವು, ಎಂದು ಕೆಲವರು ಹೇಳಬಹುದು. ಅಥವಾ ರವಿವಾರ ರಜೆಯನ್ನೆ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ.

ನಾವು ಶಾಲೆ ಕಲಿಯುವಾಗ ಶಿಕ್ಷಕರ ಕಡೆಗೆ ಹೆಚ್ಚಾಗಿ ಒಂದು ಸೀಟಿ ಇರುತ್ತಿತ್ತು. ಮತ್ತು ಬಾರಿಸುವ ಡ್ರಮ್ ಗಳು ಇರುತ್ತಿದ್ದವು ಅಷ್ಟೇ. ಆದರೆ ಈ ವಿಡಿಯೋದಲ್ಲಿ ಒಳ್ಳೆಯ ಸೌಂಡ್ ಬಾಕ್ಸ್ ಹಚ್ಚಿ ಹಾಡಿನ ತಾಳಕ್ಕೆ ಟೀಚರ್ ತುಂಬಾ ಸುಂದರವಾಗಿ ಕವಾಯತು ಮಾಡಿಸುತ್ತಿದ್ದಾರೆ. ಹಾಡು ಹೇಳಲು ಬರದಿದ್ದರೂ ಅದರ ಮ್ಯೂಸಿಕ್ ಮಾತ್ರ ಭರ್ಜರಿಯಾಗಿದೆ. ಮಕ್ಕಳು ಟೀಚರ್ ಮಾಡುವ ರೀತಿಯಲ್ಲಿ ತಾವು ಸಹ ದಂಗಾಗಿ ಅದ್ಭುತವಾಗಿ ಕವಾಯತ್ ಮಾಡುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಕರು ಶಿಕ್ಷಣವನ್ನು ನೀಡುವಾಗ ಜೊತೆಗೆ ಸಂತೋಷವನ್ನು ನೀಡಬೇಕು ಮತ್ತು ಶಿಕ್ಷಣವನ್ನು ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ಸಹ ಸಂತೋಷದಿಂದ ತೆಗೆದುಕೊಳ್ಳಬೇಕು. ಈ ಕಲೆ ತುಂಬಾ ಕಡಿಮೆ ಶಿಕ್ಷಕರಿಗೆ ಮಾತ್ರ ಸಾಧ್ಯವಾಗುತ್ತದೆ. ಈ ವಿಡಿಯೋದಲ್ಲಿ ಕವಾಯತು ಕಲಿಸುತ್ತಿರುವ ಶಿಕ್ಷಕಿ ತುಂಬಾ ವಿನೂತನ ಶೈಲಿಯಲ್ಲಿ ಮಕ್ಕಳಿಗೆ ಫಿಸಿಕಲ್ ಎಜುಕೇಶನ್ ನೀಡುತ್ತಿದ್ದಾರೆ. ಹೀಗಾಗಿ ಮಕ್ಕಳು ಶಿಕ್ಷಕರನ್ನು ತುಂಬಾ ಶಿಸ್ತಿನಿಂದ ಹಾಗೂ ಅಭಿರುಚಿಯಿಂದ ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಪ್ರತಿಯೊಬ್ಬರಿಗೆ ಇಷ್ಟವಾಗುವದರ ಜೊತೆಗೆ ಇನ್ನೊಬ್ಬರಿಗೂ ಶೇರ್ ಮಾಡುತ್ತಿದ್ದಾರೆ.

ನೋಡಿ ನೀವು ಈ ವಿಡಿಯೋ…

Leave a Comment

Your email address will not be published. Required fields are marked *