ಯಾವುದೇ ಸಿನೆಮಾ ಮಾಡದೆ ಸುನಿಲ್ ಶೆಟ್ಟಿ ವಾರ್ಷಿಕವಾಗಿ 100 ಕೋಟಿ ಸಂಪಾದಿಸುತ್ತಾರೆ.! ಒಮ್ಮೆ ನೋಡಿ ಹೇಗಿದೆ ಲೈಫ್ ಸ್ಟೈಲ್!

ಬಾಲಿವುಡ್ ನಲ್ಲಿ ಕೆಲವು ನಟರು ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಕೂಡಾ ತಮ್ಮ ಛಾಪನ್ನು ಉಳಿಸುವಲ್ಲಿ, ಸ್ಟಾರ್ ಗಿರಿಯನ್ನು ಪಡೆಯುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಅಂತಹ ನಟರಲ್ಲಿ ಒಬ್ಬರು, 28 ವರ್ಷಗಳ ಹಿಂದೆ ಬಲವಾನ್ ಎನ್ನುವ ಸಿನಿಮಾ ಮೂಲಕ ಬಾಲಿವುಡ್ ಗೆ ನಾಯಕ ನಟನಾಗಿ ಪ್ರವೇಶ ಮಾಡಿದ ನಟ ಸುನೀಲ್ ಶೆಟ್ಟಿ. ಸುನೀಲ್ ಶೆಟ್ಟಿ ತಮ್ಮ ಕೆರಿಯರ್ ನಲ್ಲಿ ಒಂದಕ್ಕಿಂತ ಮತ್ತೊಂದು ಎನ್ನುವಂತೆ ಸೂಪರ್ ಹಿಟ್ ಸಿ‌‌ನಿಮಾಗಳ‌ನ್ನು ನೀಡಿದ್ದು, ತನ್ನದೇ ಆದ ವಿಶಿಷ್ಟ ಮ್ಯಾನರಿಸಂ ಮತ್ತು ಡೈಲಾಗ್ ಡಿಲೆವರಿ ಮೂಲಕವೇ ಗಮನ ಸೆಳೆದ ಈ ನಟ, ಬಾಲಿವುಡ್ ನಲ್ಲಿ ಅಭಿಮಾನಿಗಳ ಮನಸ್ಸನ್ನು ಗೆದ್ದು, ಸ್ಟಾರ್ ಆಗಿ ಮೆರೆದ ನಟ ಕೂಡಾ ಹೌದು.

ಕಳೆದ ಕೆಲವು ವರ್ಷಗಳಿಂದಲೂ ಕೂಡಾ ಸುನೀಲ್ ಶೆಟ್ಟಿ ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲ. ಹಾಗೆಂದು ಅವರು ಆರ್ಥಿಕವಾಗಿ ಯಾವುದೇ ಸಮಸ್ಯೆಯನ್ನು ಕೂಡಾ ಎದುರಿಸುತ್ತಿಲ್ಲ. ಏಕೆಂದರೆ ಸಿನಿಮಾ ವ್ಯವಹಾರಗಳ ಹೊರತಾಗಿಯೇ ಸುನೀಲ್ ಶೆಟ್ಟಿಯವರ ವಾರ್ಷಿಕ ಆದಾಯ ಸುಮಾರು 100 ಕೋಟಿಗಳಷ್ಟಿದೆ‌. ಹಾಗಾದರೆ ಸುನೀಲ್ ಶೆಟ್ಟಿ ಅವರ ಆದಾಯದ ಮೂಲಗಳೇನು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವು ಕೂಡಾ ತಿಳಿಯೋಣ ಬನ್ನಿ. ಸುನೀಲ್ ಶೆಟ್ಟಿ ಅವರದ್ದು ತಮ್ಮದೇ ಆದ ಸ್ವಂತ ಪ್ರೊಡಕ್ಷನ್ ಹೌಸ್ ಇದೆ. ಅದರ ಹೆಸರು ಪಾಪಕಾರ್ನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್.

ಈ ಬ್ಯಾನರ್ ಅಡಿಯಲ್ಲಿ ಅವರು ಖೇಲ್- ನೋ ಆರ್ಡಿನರಿ ಗೇಮ್ , ರಕ್ತ್, ಭಾಗಂಭಾಗ್ ನಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಪ್ರೊಡಕ್ಷನ್ ಹೊರತಾಗಿ ಅವರು ಎರಡು ರೆಸ್ಟೋರೆಂಟ್ ಗಳ ಮಾಲೀಕರಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಒಡೆತನದ ಮಿಸ್ಚೀಕ್ ಡೈನಿಂಗ್ ಹಾಗೂ ಕ್ಲಬ್ H2O ಎನ್ನುವ ಎರಡು ರೆಸ್ಟೋರೆಂಟ್ ಗಳು ಮುಂಬೈನಲ್ಲಿ ಇವೆ. ದಕ್ಷಿಣ ಭಾರತದಲ್ಲಿ ಕೂಡಾ ಅವರದೊಂದು ರೆಸ್ಟೋರೆಂಟ್ ಇದೆ. ಈ ಎರಡು ಬ್ಯುಸಿನೆಸ್ ಮಾತ್ರವೇ ಅಲ್ಲದೇ ಅವರು ಒಂದು ಅಡ್ವೆಂಚರ್‌ ಪಾರ್ಕ್ ನಲ್ಲಿ ಕೂಡಾ ಸಹ ಮಾಲಿಕತ್ವ ಪಡೆದುಕೊಂಡಿದ್ದಾರೆ.

ಸುನೀಲ್ ಶೆಟ್ಟಿಯವರು ಹೌಸ್ ಹೆಸರಿನ ಐಶಾರಾಮೀ ಪೀಠೋಪಕರಣಗಳು ಮತ್ತು ಲೈಫ್ ಸ್ಟೈಲ್ ಸ್ಟೋರ್ ನ ಮಾಲೀಕರು ಕೂಡಾ ಆಗಿದ್ದಾರೆ. ಇದನ್ನು ಅವರು ಪತ್ನಿಯ ಜೊತೆಗೂಡಿ 2013 ರಲ್ಲಿ ಆರಂಭಿಸಿದ್ದಾರೆ. ಇವರು ರಿಯಲ್ ಎಸ್ಟೇಟ್ ನಲ್ಲಿ ಕೂಡಾ ಕೈಯಾಡಿಸಿದ್ದು ಅವರು ತಮ್ಮದೇ ಆದ ರಿಯಾಲಿಟಿ ಅಂಡ್ ಪ್ರೈವೇಟ್ ಡೆವಲಪರ್ಸ್ ಲಿಮಿಟೆಡ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯನ್ನು ನಡೆಸುತ್ತಾರೆ. ಮೀಡಿಯಾ ವರದಿಗಾರರ ಪ್ರಕಾರ ಸಿನಿಮಾ ವ್ಯವಹಾರಗಳ ಹೊರತಾಗಿಯೇ ಸುನೀಲ್ ಶೆಟ್ಟಿಯವರು ವಾರ್ಷಿಕ ನೂರು ಕೋಟಿಗಿಂತ ಅಧಿಕ ಆದಾಯವನ್ನು ಗಳಿಸುತ್ತಾರೆ.

ಇವೆಲ್ಲವುಗಳ ಹೊರತಾಗಿ ಖಂಡಾಲದಲ್ಲಿ ಸುನೀಲ್ ಶೆಟ್ಟಿಯವರ 6200 ಸ್ಕ್ವೇರ್ ಫೀಟ್ ಇರುವ ಲ್ಯಾವಿಷ್ ಫಾರ್ಮ್ ಹೌಸ್ ಕೂಡಾ ಇದ್ದು, ಇದು ಪ್ರೈವೇಟ್ ಗಾರ್ಡನ್, ಈಜುಕೊಳ, ಡಬಲ್ ಹೈಟ್ ಲಿವಿಂಗ್ ರೂಮ್, ಐದು ಬೆಡ್ ರೂಂಗಳು ಹಾಗೂ ಆಧು‌ನಿಕ ಕಿಚನ್ ಸೌಲಭ್ಯ ಇರುವ ಐಶಾರಾಮಿ ಫಾರ್ಮ್ ಹೌಸ್ ಆಗಿದೆ.