ಯುವಕ ಎಕ್ಸ್ ಗರ್ಲ್ ಫ್ರೆಂಡ್ ಗೆ ನೀಡಿದನು ವಿಶೇಷ ಉಡುಗೊರೆ, ಅದನ್ನು ನೋಡುತ್ತಲೇ ಬಿಕ್ಕಿಬಿಕ್ಕಿ ಅತ್ತಳು ಯುವತಿ; ನೆಟ್ಟಿಗರು ಆತನಿಗೆ….

‘ಪ್ರೀತಿ’ ಯು ಎರಡು ಜೀವಗಳಿಗೆ ಜೋಡಿಸಿ ಒಂದು ಮಾಡುತ್ತದೆ. ದಿನಗಳೆದಂತೆ ಜೀವನದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಅಗಲುವುದು ಸಾಧ್ಯವೇ ಇಲ್ಲವೆಂಬಂತೆ ಆಗಿ ಬಿಡುತ್ತದೆ.

ಆದರೆ ಕೆಲವೊಂದು ಸಲ ಪರಿಸ್ಥಿತಿಗಳು ಬದಲಾಗಿಬಿಡುತ್ತದೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ. ಎಷ್ಟೋ ಸಲ ಸಂಬಂಧಿಕರಿಂದಲೇ ಪ್ರೀತಿಯ ಸಂಬಂಧಕ್ಕೆ ಧಕ್ಕೆ ಉಂಟಾಗಿ ಬ್ರೇಕಪ್ ಆಗಿಬಿಡುತ್ತದೆ. ಎಷ್ಟೋ ಸಂಬಂಧಗಳಲ್ಲಿ ಬ್ರೇಕಪ್ ನಂತರ ಕಹಿತನವೂ ನಿರ್ಮಾಣವಾಗುತ್ತದೆ.

ಆದರೆ ಇಂದಿನ ಇಲ್ಲಿಯ ಲೇಖನವು ಎಕ್ಸ್ ಕಪಲ್ ಬಗ್ಗೆ ಇದೆ. ಇವರಿಬ್ಬರ ಪ್ರೀತಿ ಜನರ ಮೆಚ್ಚುಗೆಯನ್ನು ಗಳಿಸಿದೆ. ವೆಲ್ಸ್ ನಲ್ಲಿ ವಾಸಿಸುವ ಶಾನ್ ಟಿಕ್ ಟಾಕ್ ನಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕೆಲವೇ ದಿವಸಗಳ ಮೊದಲು ಶಾನ್ ಅವರದ್ದು ತನ್ನ ಬಹಳ ದಿನಗಳಿಂದ ಜೊತೆಯಲ್ಲೇ ಇರುತ್ತಿದ್ದ ಗರ್ಲ್ ಫ್ರೆಂಡ್ ಜೊತೆಗೆ ಬ್ರೇಕಪ್ ಆಗಿತ್ತು. ಯಾವಾಗ ಆತನ ಗೆಳತಿಯ ಬರ್ತಡೆ ಬಂತು ಆಗ ಶಾನ್ ಆಕೆಯನ್ನು ಭೇಟಿ ಮಾಡಲು ಹೋದನು.

ಆ ಸಮಯದಲ್ಲಿ ಶಾನ್ ತನ್ನ ಎಕ್ಸ್ ಗರ್ಲ್ ಫ್ರೆಂಡ್ ಗೆ ಒಂದು ಗಿಫ್ಟ್ ನೀಡಿದ್ದು ಈಗ ವೈರಲ್ ಆಗಿದೆ. ಶಾನ್ ತನ್ನ ಎಕ್ಸ್ ಗರ್ಲ್ ಫ್ರೆಂಡ್ ಜೊತೆಗೆ ಭೇಟಿ ಮಾಡಿದ ವಿಡಿಯೋವನ್ನು ಟಿಕ್ ಟಾಕ್ ಮೇಲೆ ಶೇರ್ ಮಾಡಿದ್ದಾನೆ. ಆ ವಿಡಿಯೋವನ್ನು ಲಕ್ಷಾವಧಿ ಜನರು ನೋಡಿ ಅದರ ಮೇಲೆ ಕಾಮೆಂಟ್ಗಳನ್ನು ಮಾಡಿದ್ದಾರೆ. ಶಾನ್ ಈಗಲೂ ಸಹ ತನ್ನ ಗರ್ಲ್ ಫ್ರೆಂಡ್ ಳ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾನೆ ಎಂದಿದ್ದಾರೆ.

ಟಿಕ್ ಟಾಕ್ ಸ್ಟಾರ್ ಶಾನ್ ತನ್ನ ಎಕ್ಸ್ ಗರ್ಲ್ ಫ್ರೆಂಡ್ ಕ್ಯಾಟ್ ಕಿನನ್ ಳಿಗೆ ಆಕೆಯ 31 ನೇ ಹುಟ್ಟುಹಬ್ಬದಂದು ವಿಶೇಷವಾದ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾನೆ.

ಯಾವುದು ಆ ಗಿಫ್ಟ್ ನೋಡಿ…

ಕ್ಯಾಟ್ ಬ್ಯಾಂಕಿನ ಸಾಲದ ಹೊರೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಳು. ಅಂಥದ್ದರಲ್ಲಿ ಶಾನ್ ಬ್ಯಾಂಕಿಗೆ ಕಾಲ್ ಮಾಡಿ ಕ್ಯಾಟ್ ಳ ಎಲ್ಲ ಸಾಲವನ್ನು ಮುಟ್ಟಿಸಿದರು. ಜನರು ಈ ಕಪಲ್ ಗೆ ಟಿಕ್ ಟಾಕ್ ಮೇಲೆ ತುಂಬಾ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಇಬ್ಬರು ನವೆಂಬರ್ 2020 ರಲ್ಲಿ ಜಾಬ್ ಕಳೆದುಕೊಂಡಿದ್ದರಿಂದ ವಿಡಿಯೋ ತಯಾರಿಸುವ ಕೆಲಸ ಪ್ರಾರಂಭಿಸಿದರು. ಆದರೆ ಯಾವುದೋ ಕಾರಣದಿಂದ ಇಬ್ಬರಲ್ಲಿ ಬ್ರೇಕಪ್ ಆಯಿತು. ಬ್ರೇಕಪ್ ಆದ ನಂತರವೂ ಇಬ್ಬರು ಒಳ್ಳೆಯ ಮಿತ್ರರಾಗಿದ್ದರು. ಈಗ ಶಾನ್ ಕ್ಯಾಟ್ ಳ 31 ನೇ ಹುಟ್ಟುಹಬ್ಬದಂದು ಆಕೆಗೆ ಭೇಟಿಯಾಗಲು ಹೋಗಿ ಆಕೆಯ ಮೇಲಿದ್ದ ಎಲ್ಲ ಸಾಲವನ್ನು ತಾನೇ ಮುಟ್ಟಿಸಿ ಆಶ್ಚರ್ಯ ಮಿಶ್ರಿತ ಆನಂದವನ್ನು ನೀಡಿದ್ದಾನೆ.

ಈ ವಿಡಿಯೋವನ್ನು ಟಿಕ್ ಟಾಕ್ ಮೇಲೆ ಇಲ್ಲಿಯವರೆಗೆ 30 ಲಕ್ಷಕ್ಕೂ ಮೀರಿ ಜನರು ನೋಡಿದ್ದಾರೆ. ಕ್ಯಾಟ್ ಳ ಕಡೆಗೆ ಬೀಗದ ಕೈ ಒಗೆದು ನಿನಗಾಗಿ ನನ್ನ ಹತ್ತಿರ ಒಂದು ಗಿಫ್ಟ್ ಇದೆ ಎಂದು ಹೇಳಿದ್ದಾನೆ. ತದನಂತರ ಆಕೆಗೆ ನಿನ್ನ ಬ್ಯಾಂಕಿನ ಸಂಪೂರ್ಣ ಸಾಲವನ್ನು ಮುಟ್ಟಿಸಿದ್ದೇನೆ ಎಂದಾಗ ಕ್ಯಾಟ್ ಳಿಗೆ ತುಂಬಾ ತುಂಬಾ ಖುಷಿಯಾಗಿದೆ. ಆನಂದದ ಈ ಸುದ್ದಿಯನ್ನು ಕೇಳಿ ಕ್ಯಾಟ್ ತುಂಬಾ ಖುಷಿಯಾಗಿ ಶಾನ್ ನನ್ನು ಹಿಡಿದು ಅಪ್ಪಿಕೊಂಡು ಆನಂದದ ಅಶ್ರುಗಳನ್ನು ತೆಗೆದಿದ್ದಾಳೆ.